Google Pay, PhonePe, ಮೂಲಕ ಮೆಟ್ರೋ ಕಾರ್ಡ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

04-01-21 04:19 pm       Source: GIZBOT Mutthuraju H M   ಡಿಜಿಟಲ್ ಟೆಕ್

ಮೆಟ್ರೋ ಕಾರ್ಡ್‌ಗಳು ಪ್ರಿಪೇಯ್ಡ್ ಕಾರ್ಡ್‌ಗಳಂತೆ, ನಿಮ್ಮ ಪ್ರಯಾಣದ ಅವಶ್ಯಕತೆಗಳನ್ನು ಅವಲಂಬಿಸಿ ನೀವು ರೀಚಾರ್ಜ್ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಇದಕ್ಕೆ ಭಾರತೀಯು ಸಾರಿಗೆ ವ್ಯವಸ್ಥೆ ಕೂಡ ಹೊರತಾಗಿಲ್ಲ. ಇನ್ನು ಈಗಾಗಲೇ ಭಾರತದಲ್ಲಿ ಸಾರಿಗೆ ಸೇವೆ ಸಾಕಷ್ಟು ಸುಧಾರಿಸಿದೆ. ನಗರ ಪ್ರದೇಶಗಳಲ್ಲಿ ಮೆಟ್ರೋ ಸೇವೆಯನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ. ಇನ್ನು ಬೆಂಗಳೂರಿನಲ್ಲೂ ನಮ್ಮ ಮೆಟ್ರೋ ವ್ಯವಸ್ಥೆ ಇದೆ. ಬೆಂಗಳೂರಿನ ನಮ್ಮ ಮೆಟ್ರೊ ಸೇವೆ ಜನರ ಮಾನಸದಲ್ಲಿ ಅಚ್ಚೂತ್ತಿದೆ. ಬೆಂಗಳೂರಿನಂತಹ ಹೆವಿ ಟ್ರಾಪಿಕ್‌ ಸಿಟಿಯಲ್ಲಿ ಮೆಟ್ರೊ ತ್ವರಿತ ಪ್ರಯಾಣಕ್ಕೆ ಸಹಾಯ ಮಾಡುತ್ತದೆ.

ಹೌದು, ಬೆಂಗಳೂರು ಮೆಟ್ರೋ ಸೇವೆ ಸಾಕಷ್ಟು ಅನುಕೂಲಗಳನ್ನು ನೀಡುತ್ತಿದೆ. ಇನ್ನು ನಮ್ಮ ಮೆಟ್ರೋ ಸೇವೆ ಸ್ಟ್ಯಾಂಡರ್ಡ್ ಮೆಟ್ರೋ ಸೇವೆಯಂತೆಯೇ, ರಾಪಿಡ್ ಮೆಟ್ರೊ ಸ್ಮಾರ್ಟ್ ಕಾರ್ಡ್‌ಗಳ ಅವಕಾಶವನ್ನು ಸಹ ಹೊಂದಿದೆ, ಇದು ಟಿಕೆಟ್‌ಗಳು / ಟೋಕನ್ ಕೌಂಟರ್‌ಗಳಲ್ಲಿ ದೀರ್ಘ ಸರತಿ ಸಾಲು ನಿಲ್ಲುವುದನ್ನು ತಪ್ಪಿಸಿದೆ. ಇನ್ನು ನಮ್ಮ ಮೆಟ್ರೋ ಕಾರ್ಡ್‌ಗಳು ಪ್ರಿಪೇಯ್ಡ್ ಕಾರ್ಡ್‌ಗಳಂತೆ, ನಿಮ್ಮ ಪ್ರಯಾಣದ ಅವಶ್ಯಕತೆಗಳನ್ನು ಅವಲಂಬಿಸಿ ನೀವು ರೀಚಾರ್ಜ್ ಮಾಡಬಹುದು. ಅದರಲ್ಲೂ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ನೀವು ಮೆಟ್ರೋ ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡಬಹುದು. ಹಾಗಾದ್ರೆ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಮೂಲಕ ಬೆಂಗಳೂರು ಮೆಟ್ರೋ ಕಾರ್ಡ್ ಅನ್ನು ರೀಚಾರ್ಜ್ ಮಾಡುವುದು.

ಆನ್‌ಲೈನ್‌ನಲ್ಲಿ ಮೆಟ್ರೋ ಕಾರ್ಡ್‌ಗಳನ್ನು ರೀಚಾರ್ಜ್ ಮಾಡುವುದು ಹೇಗೆ?

ಹಂತ 1. ನೀವು ಅಧಿಕೃತ ವೆಬ್‌ಸೈಟ್‌ನಿಂದ ನೇರವಾಗಿ ಮೆಟ್ರೋ ಕಾರ್ಡ್ ಅನ್ನು ರೀಚಾರ್ಜ್ ಮಾಡಬಹುದು. ನಿಮ್ಮ ಲ್ಯಾಪ್‌ಟಾಪ್ / ಪಿಸಿಯಲ್ಲಿರುವ ಯಾವುದೇ ವೆಬ್ ಬ್ರೌಸರ್‌ಗಳಿಗೆ ಹೋಗಿ ಮತ್ತು webtopup1.bmrc.co.in ಗೆ ಭೇಟಿ ನೀಡಿ. ನೀವು ಈ ಲಿಂಕ್ ಅನ್ನು ಸಹ ಕ್ಲಿಕ್ ಮಾಡಬಹುದು.

ಹಂತ 2: ನೀವು ಈಗ ನಿಮ್ಮ ಖಾತೆಗೆ ಲಾಗಿನ್ ಆಗಬೇಕಾಗುತ್ತದೆ. ಮುಖಪುಟದಲ್ಲಿ ಕ್ವಿಕ್ ಟಾಪ್-ಅಪ್ ಆಯ್ಕೆಯೂ ಇದೆ.

ಹಂತ 3: ರೀಚಾರ್ಜ್ ಪೂರ್ಣಗೊಳಿಸಲು ನೀವು 'Engrave ID', ಮೊತ್ತ ಮತ್ತು ಹೆಸರು ಮತ್ತು ಇಮೇಲ್‌ನಂತಹ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಆದ್ಯತೆಯ ವಿಧಾನಗಳಿಂದ (ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಅಪ್ಲಿಕೇಶನ್‌ಗಳು) ಪಾವತಿಯನ್ನು ಪೂರ್ಣಗೊಳಿಸಿ.

Google Pay, PhonePe, ಮತ್ತು Paytm ಮೂಲಕ ಮೆಟ್ರೋ ಕಾರ್ಡ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಸ್ಥಾಪಿಸಿರುವ ಯಾವುದೇ ಯುಪಿಐ ಅಪ್ಲಿಕೇಶನ್‌ಗೆ ಹೋಗಿ.

ಹಂತ 2: ಬೆಂಗಳೂರು ಮೆಟ್ರೋ ಕಾರ್ಡ್ ಅನ್ನು ರೀಚಾರ್ಜ್ ಮಾಡಲು, ನೀವು 'ಬಿಲ್‌ಗಳು ಮತ್ತು ಇತರ ಪಾವತಿ' ವಿಭಾಗಕ್ಕೆ ಹೋಗಿ 'ಮೆಟ್ರೋ' ಆಯ್ಕೆ ಮಾಡಬೇಕಾಗುತ್ತದೆ.

ಹಂತ 3: ನಮ್ಮ / ಬೆಂಗಳೂರು ಮೆಟ್ರೋವನ್ನು ಆಯ್ಕೆಮಾಡಿ ಮತ್ತು ಇತರ ಬಿಲ್‌ಗಳೊಂದಿಗೆ ನೀವು ಮಾಡಿದಂತೆ ಸಂಪೂರ್ಣ ರೀಚಾರ್ಜ್ ಅನ್ನು ಅನುಸರಿಸಿ.

This News Article is a Copy of GIZBOT