Samsung 'Big TV Days' sale!..ಟಿವಿ ಖರೀದಿಸಿದರೇ ಸ್ಮಾರ್ಟ್‌ಫೋನ್‌ ಉಚಿತ!

05-01-21 05:05 pm       Source: GIZBOT   ಡಿಜಿಟಲ್ ಟೆಕ್

ಸ್ಯಾಮ್‌ಸಂಗ್‌ ಕಂಪೆನಿ ಬಿಗ್‌ ಟಿವಿ ಡೇಸ್‌ ಸೇಲ್‌ ಅನ್ನು ಆಯೋಜಿಸುತ್ತಿದೆ.

ದಕ್ಷಿಣ ಕೋರಿಯಾ ಮೂಲದ ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಟಿವಿಗಳ ಮೂಲಕವೂ ಮಾರುಕಟ್ಟೆಯಲ್ಲಿ ಪ್ರಸಿದ್ದಿಯನ್ನ ಪಡೆದುಕೊಂಡಿದೆ. ಈಗಾಗಲೇ ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಸದ್ಯ ಇದೀಗ ಕಂಪೆನಿ ತನ್ನ ಗ್ರಾಹಕರಿಗಾಗಿ 'ಬಿಗ್ ಟಿವಿ ಡೇಸ್' ಸೇಲ್‌ ಅನ್ನು ಆಯೋಜಿಸುತ್ತಿದ್ದು, ಈ ಸಮಯದಲ್ಲಿ 55 ಇಂಚು ಮತ್ತು ಅದಕ್ಕಿಂತ ಹೆಚ್ಚಿನ ದೊಡ್ಡ ಸ್ಕ್ರೀನ್ ಟಿವಿ ಮಾದರಿಗಳಲ್ಲಿ ಅತ್ಯುತ್ತಮ ರಿಯಾಯಿತಿಯನ್ನು ನೀಡುತ್ತಿದೆ.

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಬಿಗ್‌ ಟಿವಿ ಡೇಸ್‌ ಸೇಲ್‌ ಅನ್ನು ಆಯೋಜಿಸುತ್ತಿದೆ. ಈ ಸೇಲ್‌ನಲ್ಲಿ ಆಯ್ದ ಟಿವಿ ಮಾದರಿಗಳ ಖರೀದಿಗೆ ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ A51, ಗ್ಯಾಲಕ್ಸಿ A31 ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸೌಂಡ್‌ಬಾರ್ HW-Q800T, ಮತ್ತು ಸೌಂಡ್‌ಬಾರ್ HW-Q900T ಅನ್ನು ನೀಡುತ್ತಿದೆ. ಇನ್ನು ಸ್ಯಾಮ್‌ಸಂಗ್ ಬಿಗ್ ಟಿವಿ ಆಪರ್‌ಗಳು ದೇಶದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ. ಇನ್ನು ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ.



ಸ್ಯಾಮ್‌ಸಂಗ್‌ ಕಂಪೆನಿಯ ಬಿಗ್‌ ಟಿವಿ ಡೇಸ್‌ ಸೇಲ್‌ ನಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭಾರಿ ಆಫರ್‌ ನೀಡಲಾಗ್ತಿದೆ. ಈ ಆಫರ್ ಅಡಿಯಲ್ಲಿ, ವಿಸ್ತೃತ ಖಾತರಿ ಕೊಡುಗೆಗಳು ಮತ್ತು ಇಎಂಐಗಳ ಜೊತೆಗೆ 20% ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದು. ಸದ್ಯ ಸ್ಯಾಮ್‌ಸಂಗ್‌ನ 55-ಇಂಚಿನ, 65-ಇಂಚಿನ, 75-ಇಂಚಿನ, 82-ಇಂಚಿನ ಮತ್ತು 85-ಇಂಚಿನ QLED ಟಿವಿಗಳು, ಕ್ರಿಸ್ಟಲ್ 4K UHD, QLED 8K ಟಿವಿಗಳ ಖರೀದಿಯಲ್ಲಿ ಸ್ಯಾಮ್‌ಸಂಗ್ ಬಿಗ್ ಟಿವಿ ಭಾರಿ ಕೊಡುಗೆ ನೀಡುತ್ತಿದೆ.


ಇನ್ನು ಸ್ಯಾಮ್‌ಸಂಗ್‌ನ 65 ಇಂಚಿನ QLED ಟಿವಿ ಮತ್ತು 75 ಇಂಚಿನ ಕ್ರಿಸ್ಟಲ್ 4K UHD ಟಿವಿಗಳನ್ನು ಖರೀದಿಸುವವರಿಗೆ 22,999 ರೂ ಮೌಲ್ಯದ ಗ್ಯಾಲಕ್ಸಿ A51 ಸ್ಮಾರ್ಟ್‌ಫೋನ್ ಉಚಿತವಾಗಿ ಸಿಗಲಿದೆ. ಇದಲ್ಲದೆ, ಕಂಪನಿಯು ತನ್ನ ಇಂಚಿನ 18,999 ಮೌಲ್ಯದ ಗ್ಯಾಲಕ್ಸಿ A31 ಸ್ಮಾರ್ಟ್‌ಫೋನ್ ಅನ್ನು 55 ಇಂಚಿನ QLED ಟಿವಿಗಳು ಮತ್ತು 65 ಇಂಚಿನ ಕ್ರಿಸ್ಟಲ್ 4K UHD ಟಿವಿಗಳೊಂದಿಗೆ ನೀಡುತ್ತಿದೆ. ಜೊತೆಗೆ 48,990 ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ ಸೌಂಡ್‌ಬಾರ್ HW-Q800T ಅಥವಾ 99,990 ರೂ.ಗಳ ಸೌಂಡ್‌ಬಾರ್ HW-Q900T ಅನ್ನು ಕಂಪನಿಯ 75 ಇಂಚು, 82 ಇಂಚು ಮತ್ತು 85 ಇಂಚಿನ QLED ಟಿವಿಗಳೊಂದಿಗೆ ಆಯ್ದ ಟಿವಿ ಮಾದರಿಗಳಲ್ಲಿ ನೀಡಲಾಗುವುದು. ಸ್ಯಾಮ್‌ಸಂಗ್ ತನ್ನ ಕ್ಯೂಎಲ್‌ಇಡಿ ಟಿವಿಗಳಲ್ಲಿ 10 ವರ್ಷಗಳ ಸ್ಕ್ರೀನ್ ಬರ್ನ್-ಇನ್ ಖಾತರಿ, ಒಂದು ವರ್ಷದ ಸಮಗ್ರ ಖಾತರಿ ಮತ್ತು ಸ್ಕ್ರೀನ್‌ನಲ್ಲಿ ಒಂದು ವರ್ಷದ ಹೆಚ್ಚುವರಿ ಖಾತರಿಯನ್ನು ನೀಡುತ್ತದೆ.



ಸ್ಯಾಮ್‌ಸಂಗ್ ಕ್ಯೂಎಲ್‌ಇಡಿ ಟಿವಿಯನ್ನು ಕ್ವಾಂಟಮ್ ಡಾಟ್ ತಂತ್ರಜ್ಞಾನದಿಂದ ನಡೆಸಲಾಗುತ್ತದೆ, ಇದು ಪ್ರಕಾಶಮಾನವಾದ ಮತ್ತು ಆಳವಾದ ಬಣ್ಣಗಳನ್ನು ತಲುಪಿಸಲು ಟಿವಿಯ ಹೊಳಪು ಮಟ್ಟವನ್ನು ಉತ್ತಮಗೊಳಿಸುತ್ತದೆ. ಟಿವಿಗಳು ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ (ಒಟಿಎಸ್) ಮತ್ತು ಆಕ್ಟಿವ್ ವಾಯ್ಸ್ ಆಂಪ್ಲಿಫಯರ್ (ಎವಿಎ) ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಮತ್ತೊಂದು ಗಮನಾರ್ಹ ಫೀಚರ್ಸ್‌ ಎಂದರೆ ಆಂಬಿಯೆಂಟ್ ಮೋಡ್, ಇದು ಟಿವಿ ಬಳಕೆಯಲ್ಲಿಲ್ಲದಿದ್ದಾಗ ಅಥವಾ ಫೋಟೋಗಳನ್ನು ಪ್ರದರ್ಶಿಸಲು ಬಳಕೆದಾರರಿಗೆ ಬ್ಯಾಕ್‌ಗ್ರೌಂಡ್‌ ಸೆನ್ಸಾರ್‌ ಹಾಕಲು ಅನುವು ಮಾಡಿಕೊಡುತ್ತದೆ.

This News Article is a Copy of GIZBOT