ಟಾಟಾಸ್ಕೈ, ಜಿಯೋ, ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್: 1Gbpsನಲ್ಲಿ ಯಾವುದು ಬೆಸ್ಟ್?

08-01-21 04:07 pm       Source: GIZBOT   ಡಿಜಿಟಲ್ ಟೆಕ್

ದೇಶಿಯ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಟಾಟಾಸ್ಕೈ, ಜಿಯೋ ಫೈಬರ್ ಹಾಗೂ ಏರ್‌ಟೆಲ್‌ ಗ್ರಾಹಕರ ಗಮನ ಸೆಳೆದಿವೆ.

ದೇಶಿಯ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಟಾಟಾಸ್ಕೈ, ಜಿಯೋ ಫೈಬರ್ ಹಾಗೂ ಏರ್‌ಟೆಲ್‌ ಗ್ರಾಹಕರ ಗಮನ ಸೆಳೆದಿವೆ. ಈ ಮೂರು ಟೆಲಿಕಾಂ ಸಂಸ್ಥೆಗಳು ಬಜೆಟ್‌ ಪ್ರೈಸ್‌ಟ್ಯಾಗ್‌ನಿಂದ ಹೈ ಎಂಡ್‌ ಬೆಲೆಯ ಹಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಹಾಗೆಯೇ ಟಾಟಾಸ್ಕೈ, ಜಿಯೋ ಹಾಗೂ ಏರ್‌ಟೆಲ್‌ ಕಂಪನಿಗಳು 100mbps ನಿಂದ 1Gbps ವೇಗದ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಸಹ ತಮ್ಮ ಲಿಸ್ಟ್‌ನಲ್ಲಿ ಹೊಂದಿವೆ.

ಹೌದು, ಟಾಟಾಸ್ಕೈ, ಜಿಯೋ ಹಾಗೂ ಏರ್‌ಟೆಲ್ ಎಕ್ಸ್‌ಟ್ರಿಮ್‌ನ ಕೆಲವು ಯೋಜನೆಗಳು ಗ್ರಾಹಕ ಆಕರ್ಷಿಸಿವೆ. ಆ ಪೈಕಿ ಈ ಮೂರು ಕಂಪನಿಗಳ ಕೆಲವು ಹೈ ಎಂಡ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು 1Gbps ವೇಗದ ಆಯ್ಕೆ ಪಡೆದಿವೆ. ಈ ಬ್ರಾಡ್‌ಬ್ಯಾಂಡ್‌ ಯೋಜನೆಗಳು ಭಿನ್ನ ಪ್ರೈಸ್‌ಟ್ಯಾಗ್‌ನೊಂದಿಗೆ ಭಿನ್ನ ಪ್ರಯೋಜನಗಳು ಹಾಗೂ ಡೇಟಾ ಸೌಲಭ್ಯವನ್ನು ಒಳಗೊಂಡಿವೆ.



ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ 1Gbps ಯೋಜನೆ

ಟಾಟಾ ಸ್ಕೈ ತನ್ನ 1 1Gbps ಯೋಜನೆಯನ್ನು ಮಾಸಿಕ ವೆಚ್ಚಕ್ಕೆ ನೀಡುವುದಿಲ್ಲ. ಇದು 3, 6 ಮತ್ತು 12 ತಿಂಗಳ ಮೂರು ವಿಭಿನ್ನ ಮಾನ್ಯತೆಗಳಲ್ಲಿ ನೀಡುತ್ತದೆ. ಮೇಲೆ ಹೇಳಿದಂತೆ, ಯೋಜನೆಯನ್ನು 12 ತಿಂಗಳವರೆಗೆ ಖರೀದಿಸುವಾಗ, ಅದರ ಮಾಸಿಕ ವೆಚ್ಚವು 4,012 ರೂ.ಗಳಿಗೆ ದೊರೆಯುತ್ತದೆ. ಯೋಜನೆಯೊಂದಿಗೆ ಯಾವುದೇ ಒಟಿಟಿ ಪ್ರಯೋಜನಗಳಿಲ್ಲ, ಆದರೆ ಬಳಕೆದಾರರು 3.3 ಟಿಬಿ ಅಥವಾ 3,300 ಜಿಬಿ ಡೇಟಾವನ್ನು ಅನಿಯಮಿತ ವಾಯಿಸ್‌ ಕರೆಗಳೊಂದಿಗೆ ಪಡೆಯುತ್ತಾರೆ.



ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ 1Gbps ಪ್ಲ್ಯಾನ್‌

ಏರ್‌ಟೆಲ್‌ನ ಈ ಯೋಜನೆ ದುಬಾರಿ ಬ್ರಾಡ್‌ಬ್ಯಾಂಡ್ ಯೋಜನೆಯಾಗಿದ್ದು, 3,999 ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಈ ಯೋಜನೆಯಲ್ಲಿ, ಗ್ರಾಹಕರು ಅನಿಯಮಿತ ಇಂಟರ್ನೆಟ್ ಮತ್ತು ಬೃಹತ್ 1 Gbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ವಾಯಿಸ್ ಕರೆ ಪ್ರಯೋಜನಗಳ ಜೊತೆಗೆ, ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಸಿಗುತ್ತವೆ. ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೇ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಆಪ್ ಪ್ರೀಮಿಯಂನ ಉಚಿತ ಚಂದಾದಾರಿಕೆ ಲಭ್ಯ



ಜಿಯೋ 3,999ರೂ. ಬ್ರಾಡ್‌ಬ್ಯಾಂಡ್‌ 1Gbps ಪ್ಲ್ಯಾನ್‌

ಜಿಯೋ ಫೈಬರ್ 3,999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 1Gbps ಇಂಟರ್ನೆಟ್ ವೇಗವನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ಡೇಟಾ ಸೌಲಭ್ಯ ಪಡೆದಿದೆ (3.3 ಟಿಬಿ ಎಫ್‌ಯುಪಿ ಡೇಟಾ). ಇದರೊಂದಿಗೆ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಜೀ 5, ಸೋನಿ ಲಿವ್, ಸನ್‌ನೆಕ್ಸ್ಟ್‌, ವೂಟ್, ಎಎಲ್‌ಟಿ ಬಾಲಾಜಿ, ಹೊಯ್ಚೊಯ್, ಶೆಮರೂ ಮಿ, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ OTT ಪ್ರಯೋಜನಗಳು ಲಭ್ಯವಾಗಲಿವೆ.

This News Article is a Copy of GIZBOT