ಬ್ರೇಕಿಂಗ್ ನ್ಯೂಸ್
17-01-21 02:48 pm Source: GIZBOT Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಇನ್ಸಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನೀತಿಯನ್ನು ಪರಿಚಯಿಸುವುದು ಇನ್ನಷ್ಟು ದಿನ ತಡವಾಗಲಿದೆ ಎಂದು ಘೋಷಿಸಿದೆ. ಈಗಾಗಲೇ ಹೊಸ ಸೇವಾ ನಿಯಮದ ಬಗ್ಗೆ ಬಳಕೆದಾರರಿಂದ ಬಾರಿ ವಿರೋದ ಎದುರಿಸುತ್ತಿರುವ ವಾಟ್ಸಾಪ್, ಇನ್ನಷ್ಟು ದಿನಗಳ ಕಾಲ ಹೊಸ ಸೇವಾ ನಿಯಮ ಪರಿಚಯಿಸುವುದನ್ನು ಮುಂದೂಡಿದೆ. ಸದ್ಯ ಪಾಲಿಸಿಯನ್ನು ಸ್ವೀಕರಿಸುವ ಗಡುವನ್ನು ಫೆಬ್ರವರಿ 8 ರಿಂದ ಮೇ 15 ರವರೆಗೆ ವಿಸ್ತರಿಸಲಾಗಿದೆ. ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಬಳಕೆದಾರರು ತಪ್ಪು ಮಾಹಿತಿಯನ್ನು ಹೊಂದಿದ್ದು, ಅದರ ಬಗ್ಗೆ ಅರಿವು ಮೂಡಿಸಿದ ನಂತರ ಹೊಸ ನಿಯಮ ಪರಿಚಯಿಸಲಾಗುವುದು ಎಂದು ವಾಟ್ಸಾಪ್ ಹೇಳಿದೆ.
ಹೌದು, ವಾಟ್ಸಾಪ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ "ಹೊಸ ಸೇವಾ ನಿಯಮದ ಅಪ್ಡೇಟ್ ಫೇಸ್‌ಬುಕ್‌ನೊಂದಿಗೆ ಡೇಟಾವನ್ನು ಹಂಚಿಕೊಳ್ಳುವುದಿಲ್ಲ. ಇದಕ್ಕಾಗಿ ನಮ್ಮ ಸಾಮರ್ಥ್ಯವನ್ನು ನಾವು ವಿಸ್ತರಿಸುವುದಿಲ್ಲ" ಎಂದು ಹೈಲೈಟ್ ಮಾಡಿದೆ. ಇದೇ ಕಾರಣಕ್ಕೆ ಜನರಿಗೆ ಸೇವಾ ನಿಯಮದ ಬಗ್ಗೆ ತಿಳುವಳಿಕೆ ನೀಡಬೇಕಿದೆ. ಆದರಿಂದ ಮೇ 15 ರಂದು ತನ್ನ ಹೊಸ ವ್ಯವಹಾರ ಆಯ್ಕೆಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ. ಇದಕ್ಕೂ ಮೊದಲು ತನ್ನ ಕಾರ್ಯತಂತ್ರವನ್ನು ಬದಲಾಯಿಸುವುದಲ್ಲದೆ, ತನ್ನ ನೀತಿಯನ್ನು ಪರಿಶೀಲಿಸಲು ಜನರ ಬಳಿಗೆ ಹೋಗುತ್ತೇವೆ ಎಂದು ಹೇಳಿದೆ.
ವಾಟ್ಸಾಪ್ ಹೊಸ ಸೇವಾ ನಿಯಮವನ್ನು ಬಳಕೆದಾರರು ಒಪ್ಪಿಕೊಳ್ಳಲೇಬೇಕು ಎಂದ ನಂತರ ಸಾಕಷ್ಟು ವಿರೋದ ವ್ಯಕ್ತವಾಗಿದೆ. ಅಲ್ಲದೆ ವಾಟ್ಸಾಪ್‌ನ ಡೇಟಾವನ್ನು ಫೇಸ್‌ಬುಕ್ ಜೊತೆಎ ಹಂಚಿಕೊಲ್ಳಲಿದೆ ಎಂಬ ಮಾಹಿತಿ ಬಳಕೆದಾರರು ವಾಟ್ಸಾಪ್ ಅನ್ನು ತೊರೆಯುವುದಕ್ಕೆ ಕಾರಣವಾಗಿದೆ. ಇದೆಲ್ಲವನ್ನು ಮನಗಂಡಿರುವ ವಾಟ್ಸಾಪ್ ತನ್ನ ಸೇವಾ ನಿಯಮದ ಗಡುವನ್ನು ಮೇ 15ಕ್ಕೆ ವಿಸ್ತಾರ ಮಾಡಿದೆ. ಅಲ್ಲದೆ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಕಂಪನಿಯು ತನ್ನ ಬಳಕೆದಾರರ ಖಾಸಗಿ ಸಂದೇಶಗಳನ್ನು ನೋಡಲು ಅಥವಾ ಅವರ ಕರೆಗಳನ್ನು ಕೇಳಲು ಸಾಧ್ಯವಿಲ್ಲ ಎಂದು ಹೇಳಿದೆ. ಪ್ರತಿಯೊಬ್ಬರೂ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ಇಡುವುದಿಲ್ಲ. ಸಂದೇಶಗಳು ಮತ್ತು ಕರೆಗಳ ಜೊತೆಗೆ ಪ್ಲೇಸ್ ಡೇಟಾವು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿದೆ ಎಂದು ಹೇಳಿದೆ.
ಹೊಸ ಸೇವಾ ನಿಯಮ ವಿಳಂಬಕ್ಕೆ ಕಾರಣಗಳೇನು?
1. ಗೌಪ್ಯತೆ ನೀತಿ ಬದಲಾವಣೆಯ ಘೋಷಣೆಯ ನಂತರ, ವಿವಿಧ ವಾಟ್ಸಾಪ್ ಬಳಕೆದಾರರು ಸಿಗ್ನಲ್ ಮತ್ತು ಟೆಲಿಗ್ರಾಮ್ನಂತಹ ಪರ್ಯಾಯ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಕಂಪನಿಯು ತಮ್ಮ ಗೌಪ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಬಳಕೆದಾರರಿಗೆ ಮನವರಿಕೆ ಮಾಡುವಲ್ಲಿ ಫೇಸ್‌ಬುಕ್ ದೊಡ್ಡ ಸವಾಲನ್ನು ಎದುರಿಸುತ್ತಿದೆ.
2. ನೀವು ಹೊಸ ಗೌಪ್ಯತೆ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತು ಅದನ್ನು 2016 ರಲ್ಲಿ ರೂಪಿಸಿದ ಹಳೆಯದಕ್ಕೆ ಹೋಲಿಸಿದರೆ, ಹೆಚ್ಚಿನ ನೀತಿ ನಿಯಮಗಳು ಒಂದೇ ರೀತಿ ಇರುತ್ತವೆ ಎಂದು ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆ ವಾಟ್ಸಾಪ್‌ಗೆ ಎದುರಾಗಿದೆ.
3. ಈ ಹೊಸ ನೀತಿಯೊಂದಿಗೆ, ಫೇಸ್‌ಬುಕ್ ಕೇವಲ ಒಂದು ಸ್ಥಳದಲ್ಲಿ ಕೆಲವು ವಾಟ್ಸಾಪ್‌ನ ವ್ಯವಹಾರ ಡೇಟಾವನ್ನು ಕೇಂದ್ರೀಕರಿಸಲು ಬಯಸುತ್ತದೆ ಮತ್ತು ವಾಟ್ಸಾಪ್ ಅನ್ನು ತನ್ನ ನಿಯಂತ್ರಣಕ್ಕೆ ತರಲು ಬಯಸುತ್ತದೆ.
4. ವಾಟ್ಸಾಪ್ ಈ ವಿಳಂಬ ಮತ್ತು ಪೂರ್ಣ-ಪುಟದ ವೃತ್ತಪತ್ರಿಕೆ ಜಾಹೀರಾತುಗಳನ್ನು ಹೊರಹಾಕುವಂತಹ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೂಲಕ ತನ್ನ ಬಳಕೆದಾರರ ಗೌಪ್ಯತೆಯನ್ನು ಗೌರವಿಸುತ್ತದೆ ಎಂದು ತಿಳಿಸುತ್ತಿದೆ.
This News Article is a Copy of GIZBOT
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm