ಗೂಗಲ್‌ಪೇ, ಫೋನ್‌ಪೇ ಸೇವೆಯಲ್ಲಿ ಕೆಲವು ದಿನಗಳ ಕಾಲ ಸಮಸ್ಯೆ ಸಾಧ್ಯತೆ!..ಕಾರಣ ಏನು?

22-01-21 04:07 pm       Source: GIZBOT Mutthuraju H M   ಡಿಜಿಟಲ್ ಟೆಕ್

ಯುಪಿಐ ಮೂಲಕವೇ ಪೋನ್‌ಪೇ, ಗೂಗಲ್‌ಪೇ,ಪೇಟಿಎಂ ಸೇವೆಗಳನ್ನು ಸಾಧ್ಯವಾಗುತ್ತಿದೆ. ಆದರೆ ಕೆಲವು ದಿನಗಳ ಕಾಲ ಈ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಡಿಜಿಟಲ್‌ ಪಾವತಿ ಸೇವೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಗೂಗಲ್‌ ಪೇ, ಫೋನ್‌ಪೇ, ಪೇಟಿಎಂ ನಂತಹ ಪ್ಲಾಟ್‌ಫಾರ್ಮ್‌ಗಳು ಡಿಜಿಟಲ್‌ ಪೆಮೆಂಟ್‌ ಸೇವೆ ನೀಡುವುದಕ್ಕೆ ಅವಕಾಶವನ್ನು ನೀಡುತ್ತಿವೆ. ಅದರಲ್ಲೂ ಭಾರತದಲ್ಲಿ ಈ ಎಲ್ಲಾ ಅಪ್ಲಿಕೇಶನ್‌ಗಳು ಸಾಕಷ್ಟು ಪ್ರಸಿದ್ದಿಯನ್ನು ಪಡೆದುಕೊಂಡಿವೆ. ಇನ್ನು ಈ ಅಪ್ಲಿಕೇಶನ್‌ ಮೂಲಕ ನಗದು ಪಾವತಿ ಮಾಡುವುದಕ್ಕೆ ಯುಪಿಐ ಅವಕಾಶವನ್ನು ಮಾಡಿಕೊಡುತ್ತಿದೆ. ಯುಪಿಐ ಮೂಲಕವೇ ಪೋನ್‌ಪೇ, ಗೂಗಲ್‌ಪೇ,ಪೇಟಿಎಂ ಸೇವೆಗಳನ್ನು ಸಾಧ್ಯವಾಗುತ್ತಿದೆ. ಆದರೆ ಕೆಲವು ದಿನಗಳ ಕಾಲ ಈ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಹೌದು, ನೀವು ಫೋನ್‌ಪೇ, ಗೂಗಲ್‌ ಪೇ, ಪೇಟಿಎಂ ಹಾಗೂ ಇತರೆ ಯಾವುದೇ ಯುಪಿಐ ಪಾವತಿ ಸೇವೆಗಳನ್ನು ಬಳಸುತ್ತಿದ್ದರೆ ಈ ಲೇಖನವನ್ನು ಓದಲೇಬೇಕು. ನೀವು ಯಾರಿಗಾದರೂ ಹಣ ಪಾವತಿ ಮಾಡಬೇಕು ಎಂದುಕೊಂಡಿದ್ದರೆ ಈ ಮಾಹಿತಿ ತಿಳಿಯಲೇಬೇಕು. ಏಕೆಂದರೆ ಕೆಲವು ದಿನಗಳ ಕಾಲ ಯುಪಿಐ ಪಾವತಿ ಸೇವೆಯಲ್ಲಿ ಸಾಕಷ್ಟು ವ್ಯತ್ಯಯವಾಗಲಿದ್ದು, ಹಣ ಪಾವತಿ ಮಾಡುವುದಕ್ಕೆ ವಿಳಂಬವಾಗುವ ಸಾದ್ಯತೆ ಇದೆ.



ಪ್ರಸ್ತುತ ನಾವೆಲ್ಲರೂ ದಿನದ ಎಲ್ಲಾ ಸಮಯದಲ್ಲೂ ಯುಪಿಐ ಪಾವತಿಗಳನ್ನು ಹೆಚ್ಚು ಅವಲಂಬಿಸಿದ್ದೇವೆ. ಯುಪಿಐ ಪಾವತಿಗಳನ್ನು ಬಳಸುವವರಲ್ಲಿ ನೀವು ಇದ್ದರೆ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ನೀಡಿದ ಪ್ರಮುಖ ಮಾಹಿತಿಯನ್ನು ಗಮನಿಸಲೇಬೇಕು. ಮುಂದಿನ ಕೆಲವು ದಿನಗಳವರೆಗೆ ಯುಪಿಐ ಪ್ಲಾಟ್‌ಫಾರ್ಮ್ ನ ಹೊಸ ಅಪ್ಡೇಟ್‌ ಪ್ರಕ್ರಿಯೆ ನಡೆಯಲಿದೆ ಎಂದು ಎನ್‌ಪಿಸಿಐ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ. ಇನ್ನು ಎನ್‌ಪಿಸಿಐ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ರಿಯಲ್‌ ಟೈಂನಲ್ಲಿ ಪಾವತಿಸಲು ಅವಕಾಶವನ್ನು ಮಾಡಿಕೊಡಲಿದೆ.



ಸದ್ಯ ಮುಂದಿನ ಕೆಲವು ದಿನಗಳಲ್ಲಿ ಯುಪಿಐನ ಹೊಸ ಅಪ್ಡೇಟ್‌ ಪ್ರಕ್ರಿಯೆಯು ಮುಂಜಾನೆ 1 ರಿಂದ ಮುಂಜಾನೆ 3 ರವರೆಗೆ ನಡೆಯಲಿದೆ. ಈ ಸಮಯದಲ್ಲಿ ನೀವು ಯಾರಿಗೂ ಹಣ ಪಾವತಿ ಮಾಡುವುದಕ್ಕೆ ಸಾಧ್ಯವಿಲ್ಲ. ಬಳಕೆದಾರರು ಅನಾನುಕೂಲತೆಯನ್ನು ಎದುರಿಸಬೇಕಾಗುತ್ತದೆ ಎಂದು ಎನ್‌ಪಿಸಿಐ ಉಲ್ಲೇಖಿಸಿದೆ. ಆದಾಗ್ಯೂ, ನವೀಕರಣ ಪ್ರಕ್ರಿಯೆಯು ನಡೆಯುವ ದಿನಗಳನ್ನು ಇದು ನಿರ್ದಿಷ್ಟಪಡಿಸಿಲ್ಲ. "ಮುಂದಿನ ಕೆಲವು ದಿನಗಳವರೆಗೆ" ನಡೆಯಲಿದೆ ಎಂದು ಮಾತ್ರ ಹೇಳಿದೆ. ಇದೇ ಕಾರಣಕ್ಕೆ ಬಳಕೆದಾರರು ಎನ್‌ಪಿಸಿಐ ನಿರ್ದಿಷ್ಟಪಡಿಸಿದ ಸಮಯದಲ್ಲಿ ವಹಿವಾಟು ಮಾಡದಿದ್ದರೆ ಉತ್ತಮ.



ಇನ್ನು "ನೀವು ಉತ್ತಮ, ಸುರಕ್ಷಿತ ಪಾವತಿ ಅನುಭವವನ್ನು ಹೊಂದಲು, ನಾವು ನಮ್ಮ ಯುಪಿಐ ಪ್ಲಾಟ್‌ಫಾರ್ಮ್ ಅನ್ನು ನವೀಕರಿಸುತ್ತಿದ್ದೇವೆ. ಮುಂದಿನ ಕೆಲವು ದಿನಗಳವರೆಗೆ ಯುಪಿಐ ಬಳಕೆದಾರರು ಮಧ್ಯರಾತ್ರಿ 1 ರಿಂದ ಮುಂಜಾನೆ 3 ರವರೆಗೆ ಅನಾನುಕೂಲತೆಯನ್ನು ಎದುರಿಸಬೇಕಾಗುತ್ತದೆ "ಎಂದು ಟ್ವಿಟರ್‌ನಲ್ಲಿ ಅಧಿಕೃತ ಎನ್‌ಪಿಸಿಐ ಖಾತೆ ಉಲ್ಲೇಖಿಸಿದೆ. ಇದೇ ಕಾರಣದಿಂದಾಗಿ ಯುಪಿಐ ಪಾವತಿ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ ಎನಿಸಲಿದೆ. ಇದು ಕೆಲವು ದಿನಗಳು ಮಾತ್ರ ಇರಲಿದ್ದು, ನಂತರ ಎಂದಿನಂತೆ ನಿಮ್ಮ ವಹಿವಾಟುಗಳನ್ನ ನಡೆಸಬಹುದಾಗಿದೆ.

This News Article is a Copy of GIZBOT