ಕೇಂದ್ರ ಬಜೆಟ್‌ 2021: ತಂತ್ರಜ್ಞಾನ ಕ್ಷೇತ್ರಕ್ಕೆ ದೊರೆತ ಕೊಡುಗೆ ಏನು?

01-02-21 05:24 pm       Source: GIZBOT Manthesh   ಡಿಜಿಟಲ್ ಟೆಕ್

ಕಾಗದರಹಿತ ಬಜೆಟ್‌ ಮಂಡನೆ ಹಾಗೂ ಕೇಂದ್ರ ಯೂನಿಯನ್ ಬಜೆಟ್ ಆಪ್ ಈ ಬಾರಿಯ ಬಜೆಟ್‌ನಲ್ಲಿ ಗಮನ ಸೆಳೆದ ಅಂಶಗಳಾಗಿವೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೇಂದ್ರ ಬಜೆಟ್ 2021-22 ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಾರಿಗೆ ಬಜೆಟ್‌ ಮಂಡಿಸಿದರು. ಕಾಗದರಹಿತ ಬಜೆಟ್‌ ಮಂಡನೆ ಹಾಗೂ ಕೇಂದ್ರ ಯೂನಿಯನ್ ಬಜೆಟ್ ಆಪ್ ಈ ಬಾರಿಯ ಬಜೆಟ್‌ನಲ್ಲಿ ಗಮನ ಸೆಳೆದ ಅಂಶಗಳಾಗಿವೆ. ಹಾಗೆಯೇ ಡಿಜಿಟಲ್ ಜನಗಣತಿ ನಡೆಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದ ವೇಳೆ ತಿಳಿಸಿದರು.

ಈ ಬಾರಿಯ ಬಜೆಟ್‌ನಲ್ಲಿ ಕೋವಿಡ್‌-19 ನಿಂದ ಹಳಿ ತಪ್ಪಿದ್ದ ದೇಶದ ಆರ್ಥಿಕ ವ್ಯವಸ್ಥೆಗೆ ಚೇತರಿಕೆ ನೀಡುವ ಪ್ರಯತ್ನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಡಿದ್ದಾರೆ. ಕೇಂದ್ರ ಬಜೆಟ್ 2021ರಲ್ಲಿ ಭಾಷಣದಲ್ಲಿ ಅವರು ಕೃಷಿ, ಆರೋಗ್ಯ, ಕಾರ್ಮಿಕರಿಗೆ, ಹಿರಿಯ ನಾಗರೀಕರಿಗೆ ಹಾಗೂ ತಂತ್ರಜ್ಞಾನ ವಲಯಕ್ಕೆ ಕೊಡುಗೆಗಳನ್ನು ಘೋಷಿಸಿದ್ದಾರೆ.



ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್

ಕೇಂದ್ರ ಬಜೆಟ್ 2021-22 ಇದೇ ಮೊದಲ ಬಾರಿಗೆ ಕಾಗದರಹಿತವಾಗಿ ಮಂಡನೆಯಾಗಿದೆ. ಬಜೆಟ್ ಸಂಬಂಧಿತ ಮಾಹಿತಿ ಮತ್ತು ದಾಖಲೆಗಳನ್ನು ತಿಳಿದುಕೊಳ್ಳಲು ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಸರ್ಕಾರ ರೂಪಿಸಿದೆ. ಇನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳನ್ನು ಈ ಅಪ್ಲಿಕೇಶನ್ ಬೆಂಬಲಿಸಲಿದೆ. ಸಂಸತ್ತಿನಲ್ಲಿ ಬಜೆಟ್‌ ಮಂಡನೆನ ಬಜೆಟ್‌ನ ಎಲ್ಲಾ ದಾಖಲೆಗಳು ಮುಕ್ತ ರೀತಿಯಲ್ಲಿ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.



ಡಿಜಿಟಲ್ ಬಜೆಟ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡನೆ ಮಾಡಿದ್ದಾರೆ. ಇದು ಅವರ ಮೂರನೇ ಬಜೆಟ್‌ ಆಗಿದೆ.



ಡಿಜಿಟಲ್‌ ಜನಗಣತಿ

ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಸಲಾಗುವುದು ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಡಿಜಿಟಲ್‌ ಜನಗಣತಿಗಾಗಿ 3,768ಕೋಟಿ ನೀಡಲಾಗುವುದು ಅವರು ತಿಳಿಸಿದ್ದಾರೆ.



ಜಿಎಸ್‌ಟಿಯಲ್ಲಿ ಅಪ್‌ಡೇಟ್

ಜಿಎಸ್‌ಟಿ ವ್ಯವಸ್ಥೆಯು ಶುರುವಾಗಿ ಇದೀಗ ನಾಲ್ಕು ವರ್ಷ ಕಳೆದಿದೆ. ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಇನ್ನಷ್ಟು ಸರಳೀಕರಿಸಲಿದೆ ಎಂದು ಬಜೆಟ್‌ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.



ಕಾರ್ಮಿಕರಿಗೆ ಪೋರ್ಟಲ್‌

ಈ ಬಾರಿಯ ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರ ವಲಯಕ್ಕೆ ಒಲವು ತೋರಿಸಿದ್ದು, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಮುಂದಾಗಲಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಮಾಹಿತಿ ಸಂಗ್ರಹಿಸಲು ಪೋರ್ಟಲ್‌ ಪ್ರಾರಂಭಿಸಲಾಗುವುದು ಎಂದಿದ್ದಾರೆ.



ಸ್ಟಾರ್ಟ್‌ಅಪ್‌ಗಳಿಗೆ ಗಿಫ್ಟ್‌

ಕೇಂದ್ರ ಬಜೆಟ್ 2021-22ರಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಭರ್ಜರಿ ಗಿಫ್ಟ್‌ ನೀಡಲಾಗಿದೆ. ಸ್ಟಾರ್ಟ್‌ಅಪ್‌ಗಳಿಗೆ ಬಂಡವಾಳ ತೆರಿಗೆಯಲ್ಲಿ ವಿನಾಯಿತಿ ಘೋಷಿಸಲಾಗಿದೆ.



ಇತರೆ ಅಂಶಗಳು

* ದೇಶದಲ್ಲಿ ಶೀಘ್ರವೇ ಒಂದೇ ಪಡಿತರ ಕಾರ್ಡ್‌ ಯೋಜನೆ ಜಾರಿ.

* ಆಮದು ಮಾಡಿಕೊಳ್ಳುವ ಮೊಬೈಲ್‌ಗಳ ದರದಲ್ಲಿ ಏರಿಕೆ.

This News Article is a Copy of GIZBOT