ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ!

03-02-21 05:52 pm       Source: GIZBOT Manthesh   ಡಿಜಿಟಲ್ ಟೆಕ್

ಟಾಟಾಸ್ಕೈ ಸಂಸ್ಥೆಯು ಡಿಟಿಎಚ್ ಸೆಟ್‌ಅಪ್‌ ಬಾಕ್ಸ್ ವಲಯದಲ್ಲಿ ಸದ್ಯ ಭಾರಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.

ಜನಪ್ರಿಯ ಟಾಟಾಸ್ಕೈ ಸಂಸ್ಥೆಯು ಡಿಟಿಎಚ್ ಸೆಟ್‌ಅಪ್‌ ಬಾಕ್ಸ್ ವಲಯದಲ್ಲಿ ಸದ್ಯ ಭಾರಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಸಂಸ್ಥೆಯು ಈಗಾಗಲೇ ಡಿಟಿಎಚ್ ಸೆಟ್‌ಅಪ್ ಬಾಕ್ಸ್‌ ಡಿವೈಸ್‌ಗೆ ಆಕರ್ಷಕ ಪ್ರೈಸ್‌ ನೀಡಿ ಗ್ರಾಹಕರನ್ನು ಸೆಳೆದಿತ್ತು. ಇದೀಗ ಟಾಟಾಸ್ಕೈ ಸೆಟ್‌ಅಪ್ ಬಾಕ್ಸ್ ಬೆಲೆಯಲ್ಲಿ ಕಡಿತ ಘೋಷಿಸಿದ್ದು, ರಿಯಾಯಿತಿ ದರದಲ್ಲಿ ಸಂಸ್ಥೆಯ ಸೆಟ್‌ಟಾಪ್‌ ಬಾಕ್ಸ್‌ ಖರೀದಿಸಬಹುದಾಗಿದೆ.

ಹೌದು, ಟಾಟಾಸ್ಕೈ ಸಂಸ್ಥೆಯು ಪ್ರಸ್ತುತ ಎಸ್‌ಡಿ ಸೆಟ್‌ಅಪ್‌ ಬಾಕ್ಸ್‌, ಹೆಚ್‌ಡಿ ಸೆಟ್‌ಅಪ್ ಬಾಕ್ಸ್, ಟಾಟಾಸ್ಕೈ ಬಿಂಜ್ ಪ್ಲಸ್‌, ಟಾಟಾಸ್ಕೈ +ಹೆಚ್‌ಡಿ PVR ಮತ್ತು ಟಾಟಾಸ್ಕೈ 4K ಹೆಸರಿನ ಐದು ಸೆಟ್‌ಟಾಪ್‌ ಬಾಕ್ಸ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಕಳೆದ ಡಿಸೆಂಬರ್‌ನಲ್ಲಿ ದರ ಇಳಿಕೆ ಮಾಡಿತ್ತು. ಆ ನಂತರ ಟಾಟಾಸ್ಕೈ ಇದೀಗ ತನ್ನ ಸೆಟ್‌ಟಾಪ್‌ ಬಾಕ್ಸ್‌ಗಳ ಮೇಲೆ 400ರೂ. ವರೆಗೂ ಕಡಿತ ಘೋಷಿಸಿದೆ.

ಹೆಚ್‌ಡಿ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್

ಈಗಾಗಲೇ ನಾಲ್ಕೈದು ಬಾರಿ ಬೆಲೆ ಇಳಿಕೆ ಕಂಡಿರುವ ಟಾಟಾಸ್ಕೈ ಸೆಟ್‌ಅಪ್‌ ಬಾಕ್ಸ್‌ ಈಗ ಮತ್ತೆ ಬೆಲೆ ಕಡಿತ ಆಗಿವೆ. ಹೆಚ್‌ಡಿ ಎಸ್‌ಡಿ ಸೆಟ್‌ಅಪ್ ಬಾಕ್ಸ್ ಬೆಲೆಯು ಇದೀಗ 1,349ರೂ. ಆಗಿದೆ. ಈ ಆಫರ್‌ಗಾಗಿ ಗ್ರಾಹಕರು TSKY150 ಈ ಕೋಡ್ ಬಳಸಬೇಕಿದೆ. ಸಂಸ್ಥೆಯು ಈ ಸ್ಪೆಷಲ್ ಆಫರ್ ಕೊಡುಗೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.



ಟಾಟಾ ಸ್ಕೈ +ಹೆಚ್‌ಡಿ ಎಸ್‌ಟಿಬಿ ಸೆಟ್‌ಟಾಪ್‌ ಬಾಕ್ಸ್

ಟಾಟಾ ಸ್ಕೈನ + ಹೆಚ್‌ಡಿ ಸೆಟ್-ಟಾಪ್ ಬಾಕ್ಸ್ ಬೆಲೆಯಲ್ಲಿಯೂ ಇಳಿಕೆ ಆಗಿದ್ದು, ಈ ಡಿವೈಸ್‌ ಇದೀಗ 4,599ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಕೊಡುಗೆಯನ್ನು ಪಡೆಯಲು ಗ್ರಾಹಕರು ‘TSKY400' ಕೋಪನ್‌ ಕೋಡ್ ಬಳಸಬೇಕು. ಇನ್ನು ರೀಟೈಲ್‌ ಸ್ಟೋರ್‌ಗಳಲ್ಲಿ ಈ ಡಿವೈಸ್‌ ಬೆಲೆಯು 4,999ರೂ. ಆಗಿದೆ. ಹಾಗೆಯೇ ಟಾಟಾಸ್ಕೈ 4K ಸೆಟ್‌ಟಾಪ್‌ ಬಾಕ್ಸ್‌ 6,400ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ.



ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಬಿಂಜ್‌ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯಲ್ಲಿಯೂ ಇಳಿಕೆ ಆಗಿದ್ದು, ಈ ಡಿವೈಸ್‌ ಇದೀಗ 2,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರು ‘TSKY200' ಕೋಪನ್‌ ಕೋಡ್‌ ಬಳಕೆ ಮಾಡಿದರೇ ಸುಮಾರು 200ರೂ. ರಿಯಾಯಿತಿ ದೊರೆಯಲಿದೆ. ಹಾಗೆಯೇ ಮಾಸಿಕ 299ರೂ. ಯೋಜನೆಯು ಆರು ತಿಂಗಳು ಉಚಿತ ದೊರೆಯಲಿದೆ ಎನ್ನಲಾಗಿದೆ.



ಟಾಟಾಸ್ಕೈ ಬಿಂಜ್ ಪ್ಲಸ್‌ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

This News Article is a Copy of GIZBOT