ಆನ್‌ಲೈನ್‌ ರಮ್ಮಿ, ಪೋಕರ್ ಗೇಮ್‌ ಆಡಿದರೇ, ಜೈಲೂಟ ಗ್ಯಾರಂಟಿ!

05-02-21 04:30 pm       Source: GIZBOT Manthesh   ಡಿಜಿಟಲ್ ಟೆಕ್

ಆನ್‌ಲೈನ್‌ ರಮ್ಮಿ ಗೇಮ್‌ ಹಾಗೂ ಪೋಕರ್‌ ಗೇಮ್‌ಗಳನ್ನು ಆಡಿದರೇ, ಎರಡು ವರ್ಷ ಜೈಲು ಶಿಕ್ಷೆ ವಿಧಿಸುವುದು.

ಜೂಜಾಟದ ಮಾದರಿಯಲ್ಲಿರುವ ಆನ್‌ಲೈನ್‌ ರಮ್ಮಿ ಗೇಮ್‌ ಹಾಗೂ ಪೋಕರ್‌ ಗೇಮ್‌ಗಳನ್ನು ಆಡಿದರೇ, ಎರಡು ವರ್ಷ ಜೈಲು ಶಿಕ್ಷೆ ವಿಧಿಸುವುದು ಮತ್ತು ಸುಮಾರು ಹತ್ತು ಸಾವಿರ ದಂಡ ವಿಧಿಸುವ ಕಾಯ್ದೆಯನ್ನು ಮೋಹನ್‌ ರೆಡ್ಡಿ ನಾಯಕತ್ವದ ಆಂಧ್ರಪ್ರದೇಶ ಸರ್ಕಾರ ತೆಗೆದುಕೊಂಡಿದೆ.

ಹೌದು, ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆನ್‌ಲೈನ್‌ ಜೂಜಾಟದ ಗೇಮ್‌ಗಳನ್ನು ರಾಜ್ಯದಲ್ಲಿ ನಿಷೇಧಿಸುವ ಮಹತ್ತರ ಕ್ರಮವನ್ನು ಕೈಗೊಂಡಿದೆ ಎಂದು ಆಂಧ್ರಪ್ರದೇಶದ ಮಾಹಿತಿ ಸಚಿವ ಪೆರ್ನಿ ವೆಂಕಟರಮಯ್ಯ ಹೇಳಿದ್ದಾರೆ.



ಆಂಧ್ರಪ್ರದೇಶ ಗೇಮಿಂಗ್‌ ಕಾಯಿದೆ-1974 ಅನ್ನು ತಿದ್ದುಪಡಿ ಮಾಡಲು ಸಂಪುಟ ತೀರ್ಮಾನ ಕೈಗೊಂಡಿದೆ. ಆನ್‌ಲೈನ್ ಜೂಜಾಟ ಗೇಮ್‌ಗಳು ಯುವಕರನ್ನು ಜೂಜಾಟಕ್ಕೆ ಪ್ರೇರೇಪಣೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರವು ಯುವಸಮೂಹವನ್ನು ಈ ಜೂಜಾಟದ ಬಲಿಗೆ ಸುಳಿವುದನ್ನು ತಪ್ಪಿಸಲು ಎಲ್ಲಾ ಆನ್‌ಲೈನ್ ಜೂಜಾಟ ಗೇಮ್‌ಗಳು ನಿಷೇಧಿಸಲು ನಿರ್ಧರಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.



ಸಚಿವ ಸಂಪುಟದ ತೀರ್ಮಾನದ ಪ್ರಕಾರ, ಆನ್‌ಲೈನ್ ಜೂಜಾಟದ ಕಂಪನಿಗಳ ಮೊದಲ ಬಾರಿಯ ಅಪರಾಧಕ್ಕೆ ದಂಡ ವಿಧಿಸುವುದರ ಜೊತೆಗೆ ವರ್ಷ ಜೈಲು ಶಿಕ್ಷೆ, ಎರಡನೇ ಅಪರಾಧಕ್ಕೆ ಎರಡು ವರ್ಷ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ, ಆನ್‌ಲೈನ್ ಜೂಜಾಟ ಆಡುವವರಿಗೂ ಸಹ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. 

This News Article is a Copy of GIZBOT