ವಾಟ್ಸಾಪ್‌ಗೆ ಬಿಗ್‌ ಶಾಕ್‌ ನೀಡಿದ ಟೆಲಿಗ್ರಾಮ್‌!..ಐದನೇ ಸ್ಥಾನಕ್ಕೆ ಕುಸಿದ ವಾಟ್ಸಾಪ್‌!

08-02-21 04:44 pm       Source: GIZBOT Mutthuraju H M   ಡಿಜಿಟಲ್ ಟೆಕ್

ವಾಟ್ಸಾಪ್‌ ಹೊಸ ಸೇವಾ ನಿಯಮ ವಿವಾದದ ನಂತರ ವಾಟ್ಸಾಪ್‌ಗೆ ಟೆಲಿಗ್ರಾಮ್‌ ಬಿಗ್‌ ಶಾಕ್‌ ನೀಡಿದೆ.

ವಾಟ್ಸಾಪ್‌ ಹೊಸ ಸೇವಾ ನಿಯಮ ವಿವಾದದ ನಂತರ ವಾಟ್ಸಾಪ್‌ಗೆ ಟೆಲಿಗ್ರಾಮ್‌ ಬಿಗ್‌ ಶಾಕ್‌ ನೀಡಿದೆ. ಇತ್ತೀಚಿಗೆ ನಡೆಸಲಾದ ಸೆನ್ಸಾರ್ ಟವರ್‌ನ ಮಾಹಿತಿಯ ಪ್ರಕಾರ, ಟೆಲಿಗ್ರಾಮ್ ಜನವರಿ 2021 ರಲ್ಲಿ ವಿಶ್ವಾದ್ಯಂತ ಹೆಚ್ಚು ಡೌನ್‌ಲೋಡ್ ಮಾಡಲಾದ ಗೇಮಿಂಗ್ ಅಲ್ಲದ ಅಪ್ಲಿಕೇಶನ್‌ ಆಗಿದೆ. ಅದರಲ್ಲೂ ಒಟ್ಟು ಡೌನ್‌ಲೋಡ್‌ಗಳಲ್ಲಿ 24% ಭಾರತದಲ್ಲಿ ಡೌನ್‌ಲೋಡ್‌ ಮಾಡಲಾಗಿದೆ. ಈ ಮೂಲಕ ಭಾರತದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದ ವಾಟ್ಸಾಪ್‌ ಭಾರಿ ಹಿನ್ನಡೆ ಅನುಭವಿಸಿದೆ.

ಹೌದು, ಕಳೆದ ಜನವರಿ ತಿಂಗಳಲ್ಲಿ ವಾಟ್ಸಾಪ್‌ ಹಿಂದಿಕ್ಕಿರುವ ಟೆಲಿಗ್ರಾಮ್‌ ಹೆಚ್ಚಿನ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ. ಟೆಲಿಗ್ರಾಮ್‌ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಕಳೆದ ತಿಂಗಳು 63 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಇದರರ್ಥ ಭಾರತವು ಜನವರಿಯಲ್ಲಿ ಸುಮಾರು 15 ಮಿಲಿಯನ್ ಹೊಸ ಟೆಲಿಗ್ರಾಮ್ ಬಳಕೆದಾರರನ್ನು ಕಂಡಿದೆ.



ವಾಟ್ಸಾಪ್‌ ಹೊಸ ಸೇವಾ ನಿಯಮ ಭಾರಿ ವಿವಾದವನ್ನು ಉಂಟು ಮಾಡಿದ್ದರ ಪರಿಣಾಮ ಇಂದು ಟೆಲಿಗ್ರಾಮ್‌ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಅದರಲ್ಲೂ ಭಾರತದಲ್ಲಿ ಹೆಚ್ಚಿನ ಬಳಕೆದಾರರನ್ನು ಪಡೆದುಕೊಂಡಿದೆ. ಇದರ ಪರಿಣಾಮವಾಗಿ ಜನವರಿ 2020 ರಲ್ಲಿ ಇದರ ಡೌನ್‌ಲೋಡ್‌ಗಳು 3.8 ಪಟ್ಟು ಹೆಚ್ಚಾಗಿದೆ. ಇನ್ನು ಜಗತ್ತಿನಾದ್ಯಂತ ಟೆಲಿಗ್ರಾಮ್‌ ಹೆಚ್ಚಿನ ಡೌನ್‌ಲೋಡ್‌ ಪಡೆದುಕೊಂಡಿದ್ದರೆ, ಟಿಕ್‌ಟಾಕ್ ಎರಡನೇ ಸ್ಥಾನದಲ್ಲಿದೆ. ಸಿಗ್ನಲ್ ಮತ್ತು ಫೇಸ್‌ಬುಕ್ ನಂತರದ ಸ್ಥಾನವನ್ನು ಪಡೆದುಕೊಂಡಿದ್ದು, ವಾಟ್ಸಾಪ್ ಜನವರಿಯಲ್ಲಿ ತನ್ನ ಹಿಂದಿನ ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದೆ.



ಸದ್ಯ ಟೆಲಿಗ್ರಾಮ್ ಈ ವರ್ಷದ ಜನವರಿಯಲ್ಲಿ ಜಾಗತಿಕವಾಗಿ ಹೆಚ್ಚು ಡೌನ್‌ಲೋಡ್ ಮಾಡಲಾಗಿದೆ ಎಂದು ಸೆನ್ಸಾರ್ ಟವರ್ ಘೋಷಿಸಿದೆ. ಇನ್ನು ಭಾರತದಲ್ಲಿ ಟೆಲಿಗ್ರಾಮ್‌ ಡೌನ್‌ಲೋಡ್‌ 24% ರಷ್ಟಿದ್ದರೆ, ಇಂಡೋನೇಷ್ಯಾ ಒಟ್ಟು ಡೌನ್‌ಲೋಡ್‌ಗಳಲ್ಲಿ 10% ಪಡೆದು ಎರಡನೇ ಸ್ಥಾನದಲ್ಲಿದೆ. ಇನ್ನು ಚೀನಾದಲ್ಲಿ ಟೆಲಿಗ್ರಾಮ್‌ 17% ಡೌನ್‌ಲೋಡ್‌ಗಳನ್ನು ಹೊಂದಿದೆ. ಹಾಗೆಯೇ ಯುಎಸ್ ನಲ್ಲಿ 10% ಡೌನ್‌ಲೋಡ್ ಆಗಿದೆ. ಹಾಗೇ ನೋಡಿದರೆ 2020 ರ ಡಿಸೆಂಬರ್‌ನಲ್ಲಿ ವಾಟ್ಸಾಪ್ ಹೆಚ್ಚು ಡೌನ್‌ಲೋಡ್‌ಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೆ ಜನವರಿ 2021 ರಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ.

ಇನ್ನು 2021 ರ ಜನವರಿಯಲ್ಲಿ ಹೆಚ್ಚು ಡೌನ್‌ಲೋಡ್ ಮಾಡಲಾದ ಗೇಮಿಂಗ್ ಅಲ್ಲದ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಇನ್‌ಸ್ಟಾಗ್ರಾಮ್ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ವರದಿಯ ಪ್ರಕಾರ, ಜೂಮ್, MX ಟಕಾಟಕ್, ಸ್ನ್ಯಾಪ್‌ಚಾಟ್ ಮತ್ತು ಮೆಸೆಂಜರ್ ನಂತರದ ಸ್ಥಾನದಲ್ಲಿದೆ. ಜನವರಿ 1, 2021 ಮತ್ತು ಜನವರಿ 31, 2021 ರ ನಡುವೆ ವಿಶ್ವಾದ್ಯಂತ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ಎರಡರಲ್ಲಿ ಮಾಡಲಾದ ಡೌನ್‌ಲೋಡ್‌ಗಳನ್ನು ಈ ವರದಿ ಹೊಂದಿದೆ ಎಂದು ಸೆನ್ಸಾರ್ ಟವರ್ ಹೇಳಿದೆ.

This News Article is a Copy of GIZBOT