ಆನ್‌ಲೈನ್‌ ಮೂಲಕ ಸುಲಭವಾಗಿ 'ನಿವಾಸಿ ಪ್ರಮಾಣ ಪತ್ರ' ಪಡೆಯುವುದು ಹೇಗೆ?

09-02-21 04:34 pm       Source: GIZBOT Manthesh   ಡಿಜಿಟಲ್ ಟೆಕ್

ಜನರು ಅಗತ್ಯ ಸೇವೆಗಳ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ.

ಪ್ರಸ್ತುತ ಸರ್ಕಾರ ಬಹುತೇಕ ಎಲ್ಲ ಸೇವೆಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತಂದಿದೆ. ಈ ನಿಟ್ಟಿನಲ್ಲಿ ಜನರು ಅಗತ್ಯ ಸೇವೆಗಳ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಹೀಗಾಗಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ನಿವಾಸಿ/ವಾಸಸ್ಥಳ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಮೂಲಕವೇ ಪಡೆಯಬಹುದಾಗಿದ್ದು, ಜನರು ನಾಡ ಕಛೇರಿಯಲ್ಲಿ ಅಲೆದಾಡುವವ ಅಗತ್ಯ ಬರದು.

ಹೌದು, ಸರ್ಕಾರದ ಕೆಲವು ಸೌಲಭ್ಯಗಳ ಪಡೆಯುವಿಕೆಗೆ ಹಾಗೂ ಇತರೆ ಅಗತ್ಯ ಕೆಲಸಗಳಿಗೆ ಅರ್ಜಿದಾರರು ನಿವಾಸಿ ಪ್ರಮಾಣ ಪತ್ರ ನೀಡಬೇಕಿರುತ್ತದೆ. ಜನರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ನಿವಾಸಿ ಪ್ರಮಾಣ ಪತ್ರವನ್ನು ಪಡೆಯಬಹುದು.



ನಿವಾಸ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಿರಿ:

* ಮೊದಲಿಗೆ, ಇಲ್ಲಿ ನೀಡಲಾದ https://nadakacheri.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

* ವೆಬ್‌ಸೈಟ್‌ನ ಮುಖಪುಟದಲ್ಲಿ, ಆನ್‌ಲೈನ್ ಅಪ್ಲಿಕೇಶನ್‌ಗಳ ವಿಭಾಗವನ್ನು ಕ್ಲಿಕ್ ಮಾಡಿ

* ಡ್ರಾಪ್‌ಡೌನ್-ಮೆನು ನಿಮ್ಮ ಪರದೆಯಲ್ಲಿ ಕಾಣಿಸುತ್ತದೆ.

* ನಂತರ Apply Online ಆಯ್ಕೆಯನ್ನು ಕ್ಲಿಕ್ ಮಾಡಿ.

* ನಿಮ್ಮ ಮುಂದೆ ಹೊಸ ಪುಟವನ್ನು ಪ್ರದರ್ಶಿಸಲಾಗುತ್ತದೆ.

* ಅಥವಾ ಇಲ್ಲಿ ಕ್ಲಿಕ್ ಮಾಡಿ ಒತ್ತಿರಿ

* ನಂತರ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿರಿ

* Get OTP ಬಟನ್ ಕ್ಲಿಕ್ ಮಾಡಿ.

* "proceed" ಬಟನ್ ಕ್ಲಿಕ್ ಮಾಡಿ

* ನಂತರ ವೆಬ್‌ಸೈಟ್‌ನ ಮುಖಪುಟ ತೆರೆದುಕೊಳ್ಳುತ್ತದೆ

* New Request ವಿಭಾಗದ ಮೇಲೆ ಕ್ಲಿಕ್ ಮಾಡಿ.

* ಇದಲ್ಲದೆ, ನಿವಾಸ ಪ್ರಮಾಣಪತ್ರ ಆಯ್ಕೆಯನ್ನು ಆರಿಸಿ.



 

* ಅರ್ಜಿ ನಮೂನೆಯನ್ನು ನಿಮ್ಮ ಮುಂದೆ ಪ್ರದರ್ಶಿಸಲಾಗುತ್ತದೆ.

* ವಿವರಗಳನ್ನು ನಮೂದಿಸಿ

* ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

* mode of delivery ಆಯ್ಕೆಯನ್ನು ಸೆಲೆಕ್ಟ್‌ ಮಾಡಿ

* "Save" ಬಟನ್ ಕ್ಲಿಕ್ ಮಾಡಿ.

* ಮೊಬೈಲ್ ಫೋನ್ ಸಹಾಯದಿಂದ "ಸ್ವೀಕೃತಿ ಸಂಖ್ಯೆ/Acknowledgement Number" ನಿಮಗೆ ಕಳುಹಿಸಲಾಗುವುದು.

* ಶುಲ್ಕವನ್ನು ಪಾವತಿಸಿ

* ಆನ್‌ಲೈನ್ ಪಾವತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

* ಕಾರ್ಡ್ ವಿವರಗಳನ್ನು ಭರ್ತಿ ಮಾಡಿದ ನಂತರ make payment ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

* ಯಶಸ್ವಿ ಪಾವತಿಯ ನಂತರ ನಾಡ ಕಚೇರಿಯಲ್ಲಿ ಅಂತಿಮ ಪ್ರಮಾಣಪತ್ರವನ್ನು ನೀಡಲಾಗುವುದು.

ನಿವಾಸ ಪ್ರಮಾಣ ಪತ್ರಕ್ಕಾಗಿ ಬೇಕಾಗುವ ಅಗತ್ಯ ದಾಖಲೆಗಳು ನೀವು ಅಧಿಕೃತ ವೆಬ್‌ಸೈಟ್ ಮೂಲಕ ನಿವಾಸ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಈ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ.

* ಆಧಾರ್ ಕಾರ್ಡ್

* ಅರ್ಜಿ ಪತ್ರ

* ಮೊಬೈಲ್ ನಂಬರ

* ಆದಾಯ ಪುರಾವೆ

* ಪಟ್ವಾರಿ / ಸರ್ಪಂಚ್ ಬಿಡುಗಡೆ ಮಾಡಿದ ವರದಿ

* ರೇಷನ್ ಕಾರ್ಡ್



ನಾಡ ಕಛೇರಿಯಲ್ಲಿ ಅರ್ಜಿ ಸ್ಥಿತಿ ತಿಳಿಯಲು ಹೀಗೆ ಮಾಡಿ:

ಅಧಿಕೃತ ವೆಬ್‌ಸೈಟ್‌ನಿಂದ ನೀವು ಅರ್ಜಿ ಸಲ್ಲಿಸಿರುವ ನಿಮ್ಮ ಪ್ರಮಾಣಪತ್ರದ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ನೀವು ಈ ಕೆಳಗಿನ ಸರಳ ವಿಧಾನವನ್ನು ಅನುಸರಿಸಬೇಕಾಗುತ್ತದೆ.

- https://nadakacheri.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

- ವೆಬ್‌ಸೈಟ್‌ನ ಮುಖಪುಟದಲ್ಲಿ, ಆನ್‌ಲೈನ್ ಅಪ್ಲಿಕೇಶನ್‌ಗಳ ವಿಭಾಗವನ್ನು ಕ್ಲಿಕ್ ಮಾಡಿ

- ಡ್ರಾಪ್‌ಡೌನ್-ಮೆನು ನಿಮ್ಮ ಪರದೆಯಲ್ಲಿ ಕಾಣಿಸುತ್ತದೆ.

- application status ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

- ನಿಮ್ಮ ಪರದೆಯಲ್ಲಿ ಹೊಸ ವೆಬ್‌ಪುಟವನ್ನು ಪ್ರದರ್ಶಿಸಲಾಗುತ್ತದೆ.

- ನೇರವಾಗಿ ಇಲ್ಲಿ ಕ್ಲಿಕ್ ಮಾಡಿ - ಅಪ್ಲಿಕೇಶನ್ ಪ್ರಕಾರವನ್ನು ನಮೂದಿಸಿ.

- ಒದಗಿಸಿದ ಜಾಗದಲ್ಲಿ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ

- Get Status ಬಟನ್ ಕ್ಲಿಕ್ ಮಾಡಿ.

- ನಿಮ್ಮ ಪರದೆಯಲ್ಲಿ ಸ್ಥಿತಿಯನ್ನು ಪ್ರದರ್ಶಿಸಲಾಗುತ್ತದೆ.

This News Article is a Copy of GIZBOT