ರಿಯಲ್‌ಮಿ X7 ಪ್ರೊ ಫಸ್ಟ್‌ ಲುಕ್: ಜಬರ್ದಸ್ತ್ ಕ್ವಾಡ್‌ ಕ್ಯಾಮೆರಾ ಫೋನ್!

14-02-21 04:01 pm       Source: GIZBOT Manthesh   ಡಿಜಿಟಲ್ ಟೆಕ್

ರಿಯಲ್‌ಮಿ X7 ಪ್ರೊ ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಹೆಚ್ಚಿನ ಗಮನ ಸೆಳೆದಿದೆ.

ರಿಯಲ್‌ ಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹಲವು ಭಿನ್ನ ಶ್ರೇಣಿಯ ಫೋನ್‌ಗಳಿಂದ ಗುರುತಿಸಿಕೊಂಡಿದೆ. ಸಂಸ್ಥೆಯು ಇತ್ತೀಚಿಗೆ ರಿಯಲ್‌ಮಿ X7 ಸ್ಮಾರ್ಟ್‌ಫೋನ್ ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಸರಣಿಯು ರಿಯಲ್‌ಮಿ X7 ಮತ್ತು ರಿಯಲ್‌ಮಿ X7 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದ್ದು, ರಿಯಲ್‌ಮಿ X7 ಪ್ರೊ ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಹೆಚ್ಚಿನ ಗಮನ ಸೆಳೆದಿದೆ.

ದೇಶಿಯ ಮಾರುಕಟ್ಟೆಗೆ ಎಂಟ್ರಿ ಪಡೆದಿರುವ ರಿಯಲ್‌ಮಿ X7 ಪ್ರೊ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್‌ ಮಾದರಿಯ ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಶಿಯೋಮಿಯ ರೆಡ್ಮಿ ಸರಣಿಯ ಫೋನ್‌ಗಳಿಗೆ ಪೈಪೋಟಿ ನೀಡುವ ಲಕ್ಷಣಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೇಗದ ಪ್ರೊಸೆಸರ್, ಕ್ವಾಡ್ ಕ್ಯಾಮೆರಾ, ಬಿಗ್ ಬ್ಯಾಟರಿ, ಆಕರ್ಷಕ ಡಿಸೈನ್‌ನಂತಹ ಸ್ಪರ್ಧಾತ್ಮಕ ಫೀಚರ್ಸ್‌ಗಳನ್ನು ಪಡೆದಿದೆ. ಇನ್ನು ಈ ಫೋನಿನ 8GB RAM + 128GB ವೇರಿಯಂಟ್‌ ಮಾಡೆಲ್‌ ಬೆಲೆಯು 29,999ರೂ ಆಗಿದೆ. 

ಆಕರ್ಷಕ ಡಿಸೈನ್ ಮತ್ತು ಡಿಸ್‌ಪ್ಲೇ

ರಿಯಲ್‌ಮಿ X7 ಪ್ರೊ 5G ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 240Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಮತ್ತು 91.6% ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಹೊಂದಿದೆ. ಜೊತೆಗೆ 5th Gen ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 1,200 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ. ಮೊದಲ ನೋಟದಲ್ಲಿಯೇ ಗ್ರಾಹಕರಿಗೆ ಈ ಫೋನ್ ಡಿಸೈನ್ ಹೆಚ್ಚು ಆಕರ್ಷಕ ಅನಿಸಲಿದೆ.



ಪ್ರೊಸೆಸರ್ ವೇಗ ಹೇಗೆ

ರಿಯಲ್‌ಮಿ X7 ಪ್ರೊ 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಡೈಮೆನ್ಸಿಟಿ 1000+ SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಅಧಿಕ ಡೇಟಾದ ಗೇಮ್‌ಗಳನ್ನು ಸುಗಮವಾಗಿ ಆಡಬಹುದಾಗಿದೆ.



ನಾಲ್ಕು ಕ್ಯಾಮೆರಾ ಸೆಟ್‌ಅಪ್

ರಿಯಲ್‌ಮಿ X7 ಪ್ರೊ 5G ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ f/ 2.4 ಲೆನ್ಸ್ ಹೊಂದಿರುವ ಬ್ಲ್ಯಾಕ್‌ ಮತ್ತು ವೈಟ್‌ ಇಮೇಜ್‌ ಸೆನ್ಸಾರ್‌, ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.



ಬ್ಯಾಟರಿ ಶಕ್ತಿ ಮತ್ತು ಇತರೆ

ರಿಯಲ್‌ಮಿ X7 ಪ್ರೊ 5G ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 65W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಮೀಡ್‌ರೇಂಜ್‌ ಬೆಲೆಯಲ್ಲಿ ಅಧಿಕ ಬ್ಯಾಟರಿ ನೀಡಿರುವುದು ಪ್ಲಸ್‌ ಪಾಯಿಂಟ್ ಆಗಿದೆ.

This News Article is a Copy of GIZBOT