ಇನ್ಮುಂದೆ ಡಿಜಿಲಾಕರ್‌ ಅಪ್ಲಿಕೇಶನ್‌ನಲ್ಲಿ ಪಾಸ್‌ಪೋರ್ಟ್‌ ಸೇವೆ ಕೂಡ ಲಭ್ಯ!

21-02-21 03:20 pm       Source: GIZBOT Mutthuraju H M   ಡಿಜಿಟಲ್ ಟೆಕ್

ಡಿಜಿಲಾಕರ್‌ ಅಪ್ಲಿಕೇಶನ್‌ ಅಲ್ಲಿ ಪಾಸ್‌ಪೋರ್ಟ್‌ ಸೇವೆಗಳನ್ನು ಸಹ ಡಿಜಿಲಾಕರ್‌ನಲ್ಲಿ ದಾಖಲಿಸಬಹುದಾಗಿದೆ.

ಪ್ರಸ್ತುತ ದಿನಗಳಲ್ಲಿ ಡಿಜಿಟಲ್‌ ಇಂಡಿಯಾ ಅಬಿಯಾನ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಡಿಜಿಟಲ್‌ ಇಂಡಿಯಾದ ಕನಸ್ಸನ್ನು ಇನ್ನಷ್ಟು ವಿಸ್ತಾರಗೊಳಿಸುವಲ್ಲಿ ಸರ್ಕಾರ ಕೂಡ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಹಲವು ಅಪ್ಲಿಕೇಶನ್‌ಗಳನ್ನು ಸರ್ಕಾರ ಪರಿಚಯಿಸಿದೆ. ಇದರಲ್ಲಿ ಡಿಜಿಲಾಕರ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಡ್ರೈವಿಂಗ್‌ ಲೈಸೆನ್ಸ್‌, ಆರ್‌ಸಿ ಬುಕ್‌ ಸಂಬಂದಿತ ದಾಖಲೆಗಳನ್ನು ಇದರಲ್ಲಿ ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಬಹುದಾಗಿದೆ. ಇದೀಗ ಡಿಜಿಲಾಕರ್‌ ಅಪ್ಲಿಕೇಶನ್‌ ಅಲ್ಲಿ ಪಾಸ್‌ಪೋರ್ಟ್‌ ಸೇವೆಗಳನ್ನು ಸಹ ಡಿಜಿಲಾಕರ್‌ನಲ್ಲಿ ದಾಖಲಿಸಬಹುದಾಗಿದೆ.



ಹೌದು, ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿಯಂತಹ ಪ್ರಮುಖ ದಾಖಲೆಗಳನ್ನು ನಾಗರಿಕರಿಗೆ ಲಭ್ಯವಾಗುವಂತೆ ಮಾಡಲು ಡಿಜಿಲಾಕರ್ ಅಪ್ಲಿಕೇಶನ್‌ ಅನ್ನು ಸರ್ಕಾರ ಪರಿಚಯಿಸಿದೆ. ಇದಕ್ಕಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ಡಿಜಿಲಾಕರ್‌ ಅಪ್ಲಿಕೇಶನ್‌ ಕೂಡ ಕೈ ಜೋಡಿಸಿದೆ. ಈ ಪಾಲುದಾರಿಕೆಯ ಭಾಗವಾಗಿ, ಡಿಜಿಲಾಕರ್ ಅನ್ನು ರಾಷ್ಟ್ರೀಯ ರಿಜಿಸ್ಟರ್‌ನೊಂದಿಗೆ ಸಂಯೋಜಿಸಲಾಗಿದೆ. ಸದ್ಯ ಇದೀಗ ಈ ಅಪ್ಲಿಕೇಶನ್‌ ಅಲ್ಲಿ ಪಾಸ್‌ಪೋರ್ಟ್‌ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಸಹ ಸಂಗ್ರಹಿಸಬಹುದಾಗಿದೆ.



ವಿದೇಶಾಂಗ ಸಚಿವಾಲಯದ "ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ" ದ "ಡಿಜಿಲಾಕರ್" ವೇದಿಕೆಯನ್ನು ಉದ್ಘಾಟಿಸಿದ ಕೇಂದ್ರ ಸಚಿವ ವಿ ಮುರಲೀಧರನ್ ಅವರು ಶುಕ್ರವಾರ ನಾಗರಿಕರಿಗೆ ಪಾಸ್‌ಪೋರ್ಟ್ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಕಾಗದರಹಿತ ಕ್ರಮದಲ್ಲಿ ಸಲ್ಲಿಸಲು ಅವಕಾಶ ನೀಡಲಿದ್ದೇವೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವರು, "ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ" ದೇಶದಲ್ಲಿ ಪಾಸ್‌ಪೋರ್ಟ್ ಸೇವೆಗಳ ವಿತರಣೆಯಲ್ಲಿ ಭಾರಿ ಪರಿವರ್ತನೆ ತಂದಿದೆ ಎಂದಿದ್ದಾರೆ. ಇದು ಕಳೆದ ಆರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಜೊತೆಗೆ ಪಾಸ್‌ಪೋರ್ಟ್ ಸೇವಾ ಯೋಜನೆಯ ಮೂಲಕ ಏಳು ಕೋಟಿಗೂ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ ಎಂದು ವಿವರಿಸಿದ್ದಾರೆ.



ಪಾಸ್‌ಪೋರ್ಟ್ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಕಾಗದರಹಿತ ಕ್ರಮದಲ್ಲಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಲು ಮುಂದಾಗಿದೆ. ನಾಗರಿಕರಿಗೆ ಸೇವಾ ವಿತರಣಾ ಅನುಭವವನ್ನು ಸುಧಾರಿಸಲು ನಾವು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ. ನಾಗರಿಕ-ಕೇಂದ್ರಿತ ವಿಧಾನಕ್ಕೆ ಮತ್ತಷ್ಟು ಉತ್ತೇಜನ ನೀಡಲು ಮತ್ತು ಪಾಸ್‌ಪೋರ್ಟ್ ಸೇವಾ ಅನುಭವವನ್ನು ಕಾಗದರಹಿತ ಕ್ರಮದಲ್ಲಿ ಹೆಚ್ಚಿಸಲು, "ನಾವು ಈಗ ಸರ್ಕಾರದ ಡಿಜಿಲಾಕರ್ ಪ್ಲಾಟ್‌ಫಾರ್ಮ್‌ಗೆ ಯಶಸ್ವಿಯಾಗಿ ಸಂಯೋಜಿಸಿದ್ದೇವೆ" ಎಂದು ತಿಳಿಸಿದ್ದಾರೆ. ಇದು ನಾಗರಿಕರಿಗೆ ಪಾಸ್‌ಪೋರ್ಟ್ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಪೇಪರ್‌ಲೆಸ್ ಮೋಡ್‌ನಲ್ಲಿ ಡಿಜಿಲಾಕರ್ ಮೂಲಕ ಸಲ್ಲಿಸಲು ಅನುವು ಮಾಡಿಕೊಡಲಿದೆ.

ಡಿಜಿಲಾಕರ್ ವ್ಯವಸ್ಥೆಯಲ್ಲಿ ನೀಡಲಾದ ದಾಖಲೆಗಳನ್ನು ಮೂಲ ಭೌತಿಕ ದಾಖಲೆಗಳೊಂದಿಗೆ ಸಮನಾಗಿ ಪರಿಗಣಿಸಲಾಗುತ್ತದೆ. ಇದರಿಂದಾಗಿ ಬಯೋಮೆಟ್ರಿಕ್ ಪಾಸ್‌ಪೋರ್ಟ್‌ಗಳು ಸ್ವಯಂಚಾಲಿತ ಇ-ಪಾಸ್‌ಪೋರ್ಟ್ ಗೇಟ್‌ಗಳನ್ನು ಹೊಂದಿದ ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮುಂಬರುವ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ ವಿ ​​2.0 ನಲ್ಲಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಮೆಷಿನ್ ಲರ್ನಿಂಗ್, ಚಾಟ್‌ಬಾಟ್, ಅನಾಲಿಟಿಕ್ಸ್, ರೊಬೊಟಿಕ್ ಪ್ರೊಸೆಸ್ ಆಟೊಮೇಷನ್ (ಆರ್‌ಪಿಎ) ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯು ನಾಗರಿಕರ ಅನುಭವವನ್ನು ಮತ್ತಷ್ಟು ಸರಾಗಗೊಳಿಸುತ್ತದೆ ಮತ್ತು ತ್ವರಿತ ಸೇವಾ ವಿತರಣೆಗೆ ಕಾರಣವಾಗುತ್ತದೆ ಎಂದು ಸರ್ಕಾರ ಹೇಳಿದೆ.

This News Article is a Copy of GIZBOT