ಒಂದೇ ಸ್ಮಾರ್ಟ್‌ಫೋನಿನಲ್ಲಿ ಎರಡು ವಾಟ್ಸಾಪ್‌ ಖಾತೆ ರಚಿಸುವುದು ಹೇಗೆ?

22-02-21 05:16 pm       Source: GIZBOT   ಡಿಜಿಟಲ್ ಟೆಕ್

ಒಂದೇ ಫೋನಿನಲ್ಲಿ ಎರಡು ವಾಟ್ಸಾಪ್ ಖಾತೆ ರಚಿಸಬಹುದಾಗಿದೆ. ಎರಡು ನಂಬಿರಿಗೂ ಫೋನಿನಲ್ಲಿ ಪ್ರತ್ಯೇಕ ವಾಟ್ಸಾಪ್‌ ಐಕಾನ್ ಕಾಣಿಸುತ್ತದೆ.

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಆಪ್‌ ಅನ್ನು ಹೆಚ್ಚಿನ ಜನರು ಬಳಸುತ್ತಿದ್ದಾರೆ. ವಾಟ್ಸಾಪ್‌ ಮೆಸೇಜಿಂಗ್ ಸೇವೆ ಜೊತೆಗೆ ವಿಡಿಯೋ ಮತ್ತು ಆಡಿಯೋ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಫೋಟೊ, ವಿಡಿಯೊ, ಇತರೆ ಡಾಕ್ಯುಮೆಂಟ್‌ ಮಾದರಿಯ ಫೈಲ್‌ಗಳನ್ನು ಸುಲಭವಾಗಿ ಶೇರ್ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್ ಜನಪ್ರಿಯತೆ ಪಡೆದುಕೊಂಡಿದೆ. ಕೆಲವರು ಒಂದು ಫೋನ್‌ನಲ್ಲಿ ವಾಟ್ಸಾಪ್ ಖಾತೆಗಳನ್ನು ಬಳಸುತ್ತಾರೆ.

ಹೌದು, ಬಳಕೆದಾರರು ಭಿನ್ನ ಮೊಬೈಲ್ ನಂಬರ್ ಮೂಲಕ ಒಂದೇ ಫೋನಿನಲ್ಲಿ ಎರಡು ವಾಟ್ಸಾಪ್ ಖಾತೆ ರಚಿಸಬಹುದಾಗಿದೆ. ಎರಡು ನಂಬಿರಿಗೂ ಫೋನಿನಲ್ಲಿ ಪ್ರತ್ಯೇಕ ವಾಟ್ಸಾಪ್‌ ಐಕಾನ್ ಕಾಣಿಸುತ್ತದೆ. ಎರಡು ವಾಟ್ಸಾಪ್ ಖಾತೆ ಹೊಂದುವ ಸೌಲಭ್ಯವನ್ನು ನೇರವಾಗಿ ನೀಡಿಲ್ಲದಿದ್ದರೂ, ಸ್ಮಾರ್ಟ್‌ಫೋನಿನಲ್ಲಿರುವ ಕೆಲವು ಆಯ್ಕೆಗಳ ಮೂಲಕ ಹಾಗೂ ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಎರಡು ಖಾತೆಯನ್ನು ಹೊಂದಬಹುದಾಗಿದೆ.



ಪ್ರತಿಷ್ಠಿತ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಜನಪ್ರಿಯ ಸೋಶೀಯಲ್ ಮೀಡಿಯಾ ಅಪ್ಲಿಕೇಶನ್‌ಗಳ ಇನ್ನೊಂದು ಅಪ್ಲಿಕೇಶನ್ ಹೊಂದಲು ಅವಕಾಶ ಮಾಡಿಕೊಟ್ಟಿವೆ. ಅಂದರೇ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡಿರುವ ಮೂಲ ಆಪ್‌ನ ನಕಲು ಆಪ್ ಹೊಂದಬಹುದಾಗಿದೆ. ಇದು ಕೆಲವು ಆಯ್ದ ಅಪ್ಲಿಕೇಶನ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ಮುಖ್ಯವಾಗಿ ಸೋಶೀಯಲ್ ಮೀಡಿಯಾ ಆಪ್ಸ್‌. ಹಾಗಾದರೇ ಒಂದೇ ಫೋನಿನಲ್ಲಿ ಎರಡು ವಾಟ್ಸಾಪ್ ಬಳಸುವುದು ಹೇಗೆ ಮತ್ತು ಡ್ಯುಯಲ್ ಆಪ್ ಬಳಕೆಯ ಆಯ್ಕೆ ಹೊಂದಿರುವ ಮೊಬೈಲ್‌ ಕಂಪನಿಗಳ ಮಾಹಿತಿ ತಿಳಿಯಲು ಮುಂದೆ ಓದಿರಿ.



ಡ್ಯುಯಲ್ ಆಪ್‌ ಸಪೋರ್ಟ್

* ಸ್ಯಾಮ್‌ಸಂಗ್ ಫೋನ್‌ಗಳಲ್ಲಿ: ಡ್ಯುಯಲ್ ಮೆಸೆಂಜರ್

* ಶಿಯೋಮಿ ಫೋನ್‌ಗಳಲ್ಲಿ: ಡ್ಯುಯಲ್ ಆಪ್ಸ್‌

* ರಿಯಲ್‌ಮಿ ಫೋನುಗಳಲ್ಲಿ: ಕ್ಲೋನ್ ಆಪ್ಸ್

* ಒನ್‌ಪ್ಲಸ್ ಫೋನ್‌ಗಳಲ್ಲಿ: Parallel ಆಪ್ಸ್‌

* ಒಪ್ಪೋ ಫೋನ್‌ಗಳಲ್ಲಿ: ಆಪ್‌ ಕ್ಲೋನ್

* ವಿವೋ ಫೋನ್‌ಗಳಲ್ಲಿ: ಅಪ್ಲಿಕೇಶನ್ ಕ್ಲೋನ್

* ಆಸುಸ್ ಫೋನ್‌ಗಳಲ್ಲಿ: ಟ್ವಿನ್‌ ಆಪ್ಸ್‌



ಒಂದು ಫೋನ್‌ನಲ್ಲಿ ಡ್ಯುಯಲ್ ವಾಟ್ಸಾಪ್ ಅಪ್ಲಿಕೇಶನ್‌ಗಳನ್ನು ಹೇಗೆ ಬಳಸಲು ಈ ಕ್ರಮ ಅನುಸರಿಸಿ:

(ನಾವು ಒನ್‌ಪ್ಲಸ್‌ ಫೋನ್‌ನಲ್ಲಿ ಡ್ಯುಯಲ್‌ ಆಪ್‌ ಬಳಕೆ ಬಗ್ಗೆ ತಿಳಿಸಿರುತ್ತೆವೆ.)

ಹಂತ 1: ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ.

ಹಂತ 2: ನಂತರ, ಒನ್‌ಪ್ಲಸ್ ಫೋನ್ ಸರ್ಚ್ ಬಾರ್‌ನಲ್ಲಿ "Parallel ಆಪ್ಸ್‌" ಎಂದು ಟೈಪ್ ಮಾಡಿರಿ.

ಹಂತ 3: ಸೆಟ್ಟಿಂಗ್‌ಗಳಲ್ಲಿ ನೀವು Parallel ಆಪ್ಸ್‌ ಆಯ್ಕೆಯನ್ನು ಕಂಡುಕೊಂಡ ನಂತರ, ಅದರ ಮೇಲೆ ಟ್ಯಾಪ್ ಮಾಡಿರಿ.



ಹಂತ 4: ನಂತರ ನಿಮ್ಮ ಫೋನ್ Parallel ಆಪ್ಸ್‌ ಫೀಚರ್‌ ಅನ್ನು ಬೆಂಬಲಿಸುವ ಅಪ್ಲಿಕೇಶನ್‌ಗಳನ್ನು ಪ್ರದರ್ಶಿಸುತ್ತದೆ.

ಹಂತ 5: ನೀವು ವಾಟ್ಸಾಪ್ ಅನ್ನು ಟ್ಯಾಪ್ ಮಾಡಿರಿ. ನಂತರ ನಿಮ್ಮ ಫೋನ್‌ನಲ್ಲಿ ನಕಲಿ ವಾಟ್ಸಾಪ್ ಅನ್ನು ಐಕಾನ್ ರಚಿಸಲಾಗುತ್ತದೆ.

ಹಂತ 6: ನಂತರ ನೀವು ವಾಟ್ಸಾಪ್‌ಗೆ ಇನ್ನೊಂದು ನಂಬರ್‌ನಿಂದ ಸೈನ್ ಇನ್ ಮಾಡಬಹುದು.

This News Article is a Copy of GIZBOT