ಟ್ರಾಫಿಕ್‌ ದಂಡವನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ..? ಇಲ್ಲಿದೆ ಸುಲಭ ವಿಧಾನ

29-03-21 11:29 am       Source: Vijaya Karnataka   ಡಿಜಿಟಲ್ ಟೆಕ್

ಸಂಚಾರ ನಿಯಮ ಉಲ್ಲಂಘಿಸಿದರೆ ಕ್ಯಾಮೆರಾವೇ ಇ-ಚಲನ್ ಸೃಷ್ಟಿಸಲಿದೆ.

ಸಾಮಾನ್ಯವಾಗಿ ಸಂಚಾರ ಪೊಲೀಸ್ ಅಧಿಕಾರಿಗಳು ಸಹ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇ-ಚಲನ್ ನೀಡುತ್ತಾರೆ. ಈ ಚಲನ್‌ನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿಸಬಹುದು.

ಸದ್ಯ ದೇಶದೆಲ್ಲಡೆ ಕೊರೋನಾ ವೈರಸ್ ಎರಡನೇ ಅಲೆ ಆವರಿಸಿದ್ದು, ಮಾಸ್ಕ್ ಹಾಕದೇ ಇದ್ದಾಗ ಅಥವಾ ಹೆಲ್ಮೆಟ್ ಹಾಕಿದ್ದರೂ ಮಾಸ್ಕ್ ಧರಿಸಿದೆ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದರೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಆದರೂ ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೇವಲ ಸಾಂವಿಧಾನಿಕ ಬದಲಾವಣೆ ಅಷ್ಟೇ ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದ್ದು,

ಸಾಮಾನ್ಯವಾಗಿ ಸಂಚಾರ ಪೊಲೀಸ್ ಅಧಿಕಾರಿಗಳು ಸಹ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇ-ಚಲನ್ ನೀಡುತ್ತಾರೆ. ಈ ಚಲನ್‌ನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿಸಬಹುದು. ಹಾಗಿದ್ರೇ, ಟ್ರಾಫಿಕ್‌ ಇ-ಚಲನ್‌ನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲು ಮೊಬೈಲ್ ಅಥವಾ ಡೆಸ್ಕ್‌ಟಾಪ್‌ನಲ್ಲಿ https://echallan.parivahan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ವೆಬ್‌ಸೈಟ್‌ ಒನ್ ನೇಷನ್ ಒನ್ ಚಲನ್ ಉಪಕ್ರಮದಡಿ ಸೃಷ್ಟಿಯಾಗಿದ್ದು, ಇಲ್ಲಿ "ಚಲನ್ ಸ್ಥಿತಿ ಪರಿಶೀಲಿಸಿ" ಆಯ್ಕೆಯನ್ನು ಕ್ಲಿಕ್ ಮಾಡಿ.



ನೀವು ಲೈಸನ್ಸ್‌ ಸಂಖ್ಯೆ, ವಾಹನ ಸಂಖ್ಯೆ ಅಥವಾ ಚಲನ್ ಸಂಖ್ಯೆಯೊಂದಿಗೆ ದಂಡದ ಚಲನ್‌ಗಳನ್ನು ಹುಡುಕಬಹುದು. ನಿಮಗೆ ಈ ಮಾಹಿತಿಯ ಅಗತ್ಯವಿರುತ್ತದೆ. ಪ್ರಕ್ರಿಯೆಯಲ್ಲಿ ಮುಂದುವರಿಯಲು ಕ್ಯಾಪ್ಚಾ ನಮೂದಿಸಿ. ಮೇಲಿನ ಮೂರು ವಿವರಗಳಲ್ಲಿ ಒಂದನ್ನು ನಮೂದಿಸಿದ ನಂತರ, ದಂಡದ ಚಲನ್ ವಿವರಗಳು ಆನ್‌ಲೈನ್‌ನಲ್ಲಿ ಗೋಚರಿಸುತ್ತವೆ. ಕೆಲವೊಮ್ಮೆ ಎರಡು ವಿಭಿನ್ನ ಚಲನ್‌ಗಳನ್ನು ಪರವಾನಗಿ ಸಂಖ್ಯೆ ಮತ್ತು ವಾಹನ ಸಂಖ್ಯೆ ಎರಡನ್ನು ಪ್ರತ್ಯೇಕವಾಗಿ ಬಳಸಿ ನೀಡಿರುತ್ತಾರೆ ಎಂಬುದನ್ನು ಗಮನಿಸಬೇಕು. ಆನ್‌ಲೈನ್‌ನಲ್ಲಿ ಉತ್ಪತ್ತಿಯಾಗುವ ಚಲನ್ ವಿವರಗಳನ್ನು ಪಡೆಯಲು ಎರಡು ವಿವರಗಳನ್ನು ಬಳಸಬಹುದು.

ಚಲನ್ ವಿವರಗಳನ್ನು ಜನರೇಟ್‌ ಮಾಡಿದ ನಂತರ, ಆನ್‌ಲೈನ್‌ನಲ್ಲಿ ಪಾವತಿ ಮಾಡಲು ‘ಈಗ ಪಾವತಿಸಿ' ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ವಹಿವಾಟನ್ನು ಪ್ರಾರಂಭಿಸಲು, ನಿಮ್ಮ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಪರಿಶೀಲಿಸಬೇಕಾಗುತ್ತದೆ. ಈ ಹಂತದಲ್ಲಿ, ನಿಮ್ಮನ್ನು ನಿಮ್ಮ ರಾಜ್ಯದ ಇ-ಚಲನ್ ಪಾವತಿ ವೆಬ್‌ಸೈಟ್‌ಗೆ ಕೊಂಡೊಯ್ಯಲಾಗುತ್ತದೆ.



ಮೇಲಿನ ಹಂತ ಮುಗಿದ ನಂತರ, ನೀವು ಪಾವತಿಸಿದ ಬಗ್ಗೆ ದೃಢೀಕರಣವನ್ನು ನೋಡುತ್ತೀರಿ. ಇಲ್ಲಿ ‘‘Proceed with Net Payment'' ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ಆದ್ಯತೆಯ ಪೇಮೆಂಟ್‌ ಗೇಟ್‌ವೇ ಆಯ್ಕೆಮಾಡಿ. ಇಲ್ಲಿ ನಿಮಗೆ ನೆಟ್ ಬ್ಯಾಂಕಿಂಗ್, ಕಾರ್ಡ್ ಪಾವತಿ ಮತ್ತಿತರ ಇತರ ಪಾವತಿ ವಿಧಾನಗಳು ಲಭ್ಯವಿದ್ದು, ನಿಮ್ಮ ಇಷ್ಟದ ಪಾವತಿ ವಿಧಾನದಲ್ಲಿ ದಂಡ ಪಾವತಿಸಬಹುದು.

This News Article Is A Copy Of Vijaya Karnataka