ಫೇಸ್​ಬುಕ್ ಪ್ರಿಯರೇ ಹುಷಾರು;53 ಕೋಟಿ ಫೇಸ್​ಬುಕ್ ಬಳಕೆದಾರರ ಮಾಹಿತಿ ಸೋರಿಕೆ

05-04-21 06:23 pm       Headline Karnataka News Network   ಡಿಜಿಟಲ್ ಟೆಕ್

53 ಕೋಟಿ ಫೇಸ್​ಬುಕ್​ ಬಳಕೆದಾರರ ಮಾಹಿತಿ ಸೋರಿಕೆಯಾಗಿರೋದು ಬಯಲಾಗಿದೆ.

53 ಕೋಟಿ ಫೇಸ್​ಬುಕ್​ ಬಳಕೆದಾರರ ಮಾಹಿತಿ ಸೋರಿಕೆಯಾಗಿರೋದು ಕಳೆದ ಶನಿವಾರ ಬಯಲಾಗಿದೆ. ಈ ಬೃಹತ್​ ಮಟ್ಟದ ಸೋರಿಕೆಯಲ್ಲಿ ಹ್ಯಾಕರ್​ಗಳು ಸ್ವತಃ ಫೇಸ್​ಬುಕ್ ಸಿಇಓ ಮಾರ್ಕ್​ ಜುಕರ್​​ಬರ್ಗ್ ಅವರ ಖಾಸಗಿ ಮೊಬೈಲ್ ಫೋನ್ ನಂಬರ್​ ಕೂಡ ಲೀಕ್ ಮಾಡಿದ್ದು, ಸಾರ್ವಜನಿಕವಾಗಿ ಸುಲಭವಾಗಿ ನಂಬರ್ ಸಿಗುವಂತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕಳೆದ ಜನವರಿಯಲ್ಲಿ ಫೇಸ್​ಬುಕ್​ ಅಕೌಂಟ್​ಗಳ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

ಹ್ಯಾಕರ್​ಗಳು ಫೇಸ್​​ಬುಕ್​ ಅಕೌಂಟ್​​ಗಳಿಗೆ ಲಿಂಕ್ ಆಗಿರೋ 53 ಕೋಟಿ ಫೋನ್​ ನಂಬರ್​ಗಳನ್ನ​ ಕದ್ದು, ದೊಡ್ಡ ಡೇಟಾಬೇಸ್​ ರಚಿಸಿ ಅದನ್ನ ಹ್ಯಾಕರ್ಸ್​​ ಫೋರಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಕನಿಷ್ಟ ಕಂಪ್ಯೂಟರ್​ ಜ್ಞಾನವುಳ್ಳ ಯಾರು ಬೇಕಾದ್ರೂ ಈ ಫೋನ್​ ನಂಬರ್​ಗಳನ್ನ ಪಡೆಯಬಹುದಾಗಿದೆ ಎಂದು ವರದಿಯೊಂದು ದೃಢಪಡಿಸಿದೆ.

ಸ್ವತಃ ಮಾರ್ಕ್​ ಝಕರ್​ಬರ್ಗ್ ಅವರ ಪರ್ಸನಲ್ ಫೋನ್ ನಂಬರ್ ಸೋರಿಕೆಯಾಗಿರೋದು ಈ ಹ್ಯಾಕಿಂಗ್​ನ ಗಂಭೀರತೆ ಬಗ್ಗೆ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಫೇಸ್​ಬುಕ್​ನಿಂದ ಸ್ಪಷ್ಟನೆ ಬೇಕಾದ್ರೆ ಪತ್ರಕರ್ತರು ಈಗ ನೇರವಾಗಿ ಝಕರ್​ಬರ್ಗ್​ ಅವರಿಗೇ(ಲೀಕ್ ಆಗರೋ ನಂಬರ್​ಗೆ) ಕರೆ ಮಾಡಿ ಅಂತ ಡೇಟಾ ಸೆಕ್ಯೂರಿಟಿ ತಜ್ಞ ಡೇವ್ ವಾಕರ್ ಎಂಬವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಹ್ಯಾಕರ್​​ಗಳು ಹಲವಾರು ಜನರ ಫೋನ್​ ನಂಬರ್​​ಗಳನ್ನೊಳಗೊಂಡ ಸೂಕ್ಷ್ಮ ಮಾಹಿತಿಯನ್ನ ಆನ್​ಲೈನ್​ ಮೂಲಕ ಫ್ರೀಯಾಗಿ ನೀಡ್ತಿದ್ದರು ಎಂದು ವರದಿಯಾಗಿದೆ. ಅಲ್ಲದೆ ಹ್ಯಾಕರ್ಸ್​ ಫೋರಂನಲ್ಲಿ ಕಳೆದ ಜನವರಿಯಿಂದ ಫೋನ್​ ನಂಬರ್​ಗಳು ಹರಿದಾಡ್ತಿವೆ ಅಂತ ತಿಳಿದುಬಂದಿದೆ.

In a major privacy breach, personal data of around 53.3 crores Facebook users from 106 countries have allegedly been posted online for free on low-level hacking forums.