ಬ್ರೇಕಿಂಗ್ ನ್ಯೂಸ್
09-04-21 07:11 pm Source: Gizbot Bureau ಡಿಜಿಟಲ್ ಟೆಕ್
ಫೇಸ್‌ಬುಕ್ ಒಡೆತನದ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕ್ಕೆ ಅನುಗುಣವಾಗಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ವಾಟ್ಸಾಪ್‌ನಲ್ಲಿ ಇಮೇಜ್‌ಗಳು, ವೀಡಿಯೋಸ್, ಡೂಡಲ್ಸ್ ಮತ್ತು ವಾಯ್ಸ್ ನೋಟ್ ಸೇರಿದಂತೆ ವಿವಿಧ ರೀತಿಯಲ್ಲಿ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಮತ್ತು ಶುಭಾಶಯಗಳನ್ನು ಹಂಚಿಕೊಳ್ಳಬಹುದಾಗಿದೆ. ಇವುಗಳ ಜೊತೆಗೆ, ವಾಟ್ಸಾಪ್ ಬಳಕೆದಾರರು ಜಿಐಎಫ್‌ಗಳನ್ನು ಬಳಸಿಕೊಂಡು ತಮ್ಮ ಅಭಿಪ್ರಾಯಗಳನ್ನು ಸಹ ಹಂಚಿಕೊಳ್ಳಬಹುದು.
ಹೌದು, ವಾಟ್ಸಾಪ್‌ನಲ್ಲಿ GIF ಗಳನ್ನು ಬಳಸಿಕೊಂಡು ತಮ್ಮ ಅಭಿಪ್ರಾಯಗಳನ್ನು ಶೇರ್‌ಮಾಡಬಹುದು. ಅಲ್ಲದೆ ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ನಲ್ಲಿ ವಿಶೇಷ ಸ್ಟೋರ್ ಅನ್ನು ನೀಡಿದೆ. ಇದರಲ್ಲಿ ಬಳಕೆದಾರರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ GIF ಗಾಗಿ ಹುಡುಕಬಹುದು ಮತ್ತು ಅವುಗಳನ್ನು ವೈಯಕ್ತಿಕ ಬಳಕೆದಾರರೊಂದಿಗೆ ಅಥವಾ ಗುಂಪುಗಳಲ್ಲಿ ಶೇರ್‌ಮಾಡಿಕೊಳ್ಳಬಹುದು. ಹಾಗಾದ್ರೆ ವಾಟ್ಸಾಪ್‌ನಲ್ಲಿ ನಿಮಗೆ ಇಷ್ಟವಾದ GIF ಅನ್ನು ಕ್ರಿಯೆಟ್ ಮಾಡುವುದು ಹೇಗೆ? ಅದನ್ನು ಶೇರ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಸ್ತುತ GIF ಮಾದರಿಯ ಫೈಲ್‌ಗಳನ್ನು ಹೆಚ್ಚಿನ ಬಳಕೆದಾರರು ಬಳಕೆಮಾಡುತ್ತಿದ್ದಾರೆ. ತ್ವರಿತವಾಗಿ ಶೇರ್ ಮಾಡಲು ಜಿಐಎಫ್ ಫೈಲ್ ಪೂರಕವಾಗಿದ್ದು, ಫೋಟೊ ಹಾಗೂ ವಿಡಿಯೊ ಫೈಲ್‌ಗಳಿಂಗಿಂತ ಅಟ್ರ್ಯಾಕ್ಟಿವ್ ಅನಿಸುತ್ತವೆ. ಇನ್ನು GIF ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಓಎಸ್ ಮಾದರಿಯ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಿದೆ. ಬಳಕೆದಾರರು ತಮ್ಮ ಗ್ಯಾಲರಿಯಲ್ಲಿರುವ ವೀಡಿಯೊವನ್ನು GIF ಮಾಡಿ ಕಳುಹಿಸಬಹುದಾಗಿದೆ.

ವಾಟ್ಸಾಪ್‌ನಲ್ಲಿ GIF ಅನ್ನು ಕ್ರಿಯೆಟ್ ಮಾಡುವುದು ಮತ್ತು ಶೇರ್ ಮಾಡುವುದು ಹೇಗೆ?
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಶಾರ್ಟ್ ವೀಡಿಯೊವನ್ನು ರೆಕಾರ್ಡ್ ಮಾಡಿ.
ಹಂತ 2: ವಾಟ್ಸಾಪ್ ತೆರೆಯಿರಿ ಮತ್ತು ನಂತರ ನೀವು ಜಿಐಎಫ್ ಹಂಚಿಕೊಳ್ಳಲು ಬಯಸುವ ಚಾಟ್ ತೆರೆಯಿರಿ.
ಹಂತ 3: ಅಪ್ಲಿಕೇಶನ್‌ನ ಕೆಳಗಿನ ಎಡ ಮೂಲೆಯಲ್ಲಿರುವ ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ 4: ಈಗ, ನಿಮ್ಮ ಫೋನ್‌ನ ಗ್ಯಾಲರಿಯನ್ನು ಪ್ರವೇಶಿಸಲು ಫೋಟೋ ಮತ್ತು ವೀಡಿಯೊ ಲೈಬ್ರರಿ ಬಟನ್ ಟ್ಯಾಪ್ ಮಾಡಿ.

ಹಂತ 5: ನೀವು ಹಂಚಿಕೊಳ್ಳಲು ಬಯಸುವ ವೀಡಿಯೊವನ್ನು ಆಯ್ಕೆ ಮಾಡಿ.
ಹಂತ 6: ಮೇಲ್ಭಾಗದಲ್ಲಿ ನೀವು ಬಳಸಲು ಬಯಸುವ ಭಾಗವನ್ನು ಮಾತ್ರ ಇಟ್ಟುಕೊಂಡು ವೀಡಿಯೊದ ಉದ್ದವನ್ನು ಕತ್ತರಿಸಿ.
ಹಂತ 7: ಮೇಲಿನ ಬಲ ಮೂಲೆಯಲ್ಲಿ, ಗುಂಡಿಯನ್ನು GIF ಗೆ ಟಾಗಲ್ ಮಾಡಿ.
ಹಂತ 8: ಪುಟದ ಕೆಳಭಾಗದಲ್ಲಿರುವ ಚಾಟ್ ಬಾರ್‌ನಲ್ಲಿ ಸಂದೇಶವನ್ನು ಟೈಪ್ ಮಾಡಿ.
ಹಂತ 9: ಸೆಂಡ್ ಬಟನ್ ಟ್ಯಾಪ್ ಮಾಡಿ.
This News Article Is A Copy Of GIZBOT BUREAU
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm