ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

13-04-21 05:33 pm       Source: Gizbot Bureau   ಡಿಜಿಟಲ್ ಟೆಕ್

ಪ್ರಸ್ತುತ ದಿನಗಳಲ್ಲಿ ಚುನಾವಣಾ ಗುರುತಿನ ಚೀಟಿಯನ್ನು ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಹೊಂದಿರಲೇಬೇಕು. ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಸ್ಥಳೀಯ ಮಟ್ಟದ ಚುನಾವಣೆಗಳಿಂದ ಹಿಡಿದು, ರಾಷ್ಟ್ರಮಟ್ಟದ ಚುನಾವಣೆಗಳು ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ.

ಪ್ರಸ್ತುತ ದಿನಗಳಲ್ಲಿ ಚುನಾವಣಾ ಗುರುತಿನ ಚೀಟಿಯನ್ನು ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಹೊಂದಿರಲೇಬೇಕು. ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಸ್ಥಳೀಯ ಮಟ್ಟದ ಚುನಾವಣೆಗಳಿಂದ ಹಿಡಿದು, ರಾಷ್ಟ್ರಮಟ್ಟದ ಚುನಾವಣೆಗಳು ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಚುನಾವಣೆಯಲ್ಲಿ ಅರ್ಹ ಮತದಾರರ ಮತ ಚಲಾವಣೆ ಮಾಡಲು ಮತದಾರರ ಗುರುತಿನ ಚೀಟಿ ಹೊಂದಿರುವುದು ಉತ್ತಮ. ಇದೇ ಕಾರಣಕ್ಕೆ ಭಾರತ ಸರ್ಕಾರ ಕೂಡ ಮತದಾರರ ಚೀಟಿ ಪಡೆಯುವುದಕ್ಕೆ ಹಲವು ಅನುಕೂಲಕರ ವ್ಯವಸ್ಥೆಯನ್ನು ಸಹ ಮಾಡಿದೆ.

ಹೌದು, ಭಾರತೀಯ ಚುನಾವಣಾ ಆಯೋಗ ಭಾರತದ ಅರ್ಹ ಮತದಾರರ ತನ್ನ ಮತದಾರರ ಚೀಟಿಯನ್ನು ಆನ್‌ಲೈನ್‌ನಲ್ಲಿಯೂ ಸಹ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ನೀಡಿದೆ. ನೀವು ನೋಂದಾಯಿತ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರತಿಯೊಬ್ಬ ನಾಗರಿಕನು ಮತದಾನ ಕೇಂದ್ರಕ್ಕೆ ಹೋಗುವ ಮೊದಲು ಅರ್ಹ ಮತದಾರರ ಗುರುತಿನ ಚೀಟಿ ಹೊಂದಿರಬೇಕು. ಇನ್ನು ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಪಡೆಯುವ ಪ್ರಕ್ರಿಯೆ ತುಂಬಾ ಸರಳವಾಗಿದೆ. ಹಾಗಾದ್ರೆ ಆನ್‌ಲೈನ್‌ನಲ್ಲಿ ಮತದಾರರ ಚೀಟಿಯನ್ನು ಡೌನ್‌ಲೋಡ್ ಮಾಡುವು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮತದಾರರ ಗುರುತಿನ ಕಾರ್ಡ್‌ ನಿಮಗೆ ಮತ ಚಲಾಯಿಸಲು ಅನುವು ಮಾಡಿಕೊಡುವುದರ ಹೊರತಾಗಿ, ಯಾವುದೇ ನಾಗರಿಕರಿಗೆ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು ನೀವು ನಿಮ್ಮ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ಮೊದಲು ನೋಂದಾಯಿತ ಮತದಾರರಾಗಿರಬೇಕು. ಪ್ರಸ್ತುತ, 2020 ರ ನವೆಂಬರ್ ನಂತರ ಹೊಸದಾಗಿ ನೋಂದಾಯಿತ ಮತದಾರರಿಗೆ ಇ-ಇಪಿಐಸಿ ಡೌನ್‌ಲೋಡ್ ಸೌಲಭ್ಯ ನೀಡಲಾಗಿದೆ. ಅಲ್ಲದೆ ಇತರರಿಗೆ, ಈ ಸೌಲಭ್ಯವು ಶೀಘ್ರದಲ್ಲೇ ಲಭ್ಯವಿರುತ್ತದೆ ಎಂದು ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ಹೇಳಿದೆ. ಇನ್ನು ನೀವು ನೋಂದಾಯಿತ ಮತದಾರರಾದ ನಂತರ, ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1. NVSP ಸೈಟ್‌ಗೆ ಹೋಗಿ, ಲಾಗಿನ್ / ರಿಜಿಸ್ಟರ್ ಕ್ಲಿಕ್ ಮಾಡಿ. ನೋಂದಣಿಗಾಗಿ, ಒಟಿಪಿ ಮತ್ತು ಇತರ ಮೂಲ ವಿವರಗಳನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ನಿಮ್ಮನ್ನು ಕೇಳಲಾಗುತ್ತದೆ. ನೋಂದಣಿ ಪ್ರಕ್ರಿಯೆಯನ್ನು ಮುಗಿಸಿ.

ಹಂತ:2. ನೋಂದಾಯಿಸಿದ ನಂತರ ಅಥವಾ ಲಾಗಿನ್ ಆದ ನಂತರ, ಮುಖಪುಟದಲ್ಲಿ ಇ-ಎಪಿಕ್ ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇಪಿಐಸಿ ಎಂದರೆ ಚುನಾವಣಾ ಫೋಟೋ ಗುರುತಿನ ಚೀಟಿ.

ಹಂತ:3. ನಿಮ್ಮ ಇಪಿಐಸಿ ಸಂಖ್ಯೆ ಅಥವಾ ಫಾರ್ಮ್ ಉಲ್ಲೇಖ ಸಂಖ್ಯೆಯನ್ನು ಸೈಟ್ ಕೇಳುತ್ತದೆ. ನಿಮಗೆ ತಿಳಿದಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನೀವು ಸೇರಿರುವ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಿ.

ಮೊಬೈಲ್

ಹಂತ:4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಮೂಲಕ ಮತ್ತೊಮ್ಮೆ ಪರಿಶೀಲಿಸಿ. 

ಹಂತ:5. ಡೌನ್‌ಲೋಡ್ ಇ-ಇಪಿಐಸಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿ. ಮತದಾರರ ಗುರುತಿನ ದಾಖಲೆಯ ಪುರಾವೆಯಾಗಿ ಇದು ಮಾನ್ಯವೆಂದು ಪರಿಗಣಿಸಲಾಗಿದೆ. ಆದರೆ, ಈಗಿನಂತೆ, ಇದು 2020 ರ ನವೆಂಬರ್ ನಂತರ ನೋಂದಾಯಿಸಿದ ಹೊಸ ಮತದಾರರಿಗೆ ಮಾತ್ರ.

This News Article Is A Copy Of GIZBOT BUREAU