ಆಫ್‌ಲೈನ್‌ನಲ್ಲಿ ಯೂಟ್ಯೂಬ್ ವಿಡಿಯೋ ನೋಡುವುದು ಹೇಗೆ ಗೊತ್ತಾ?

20-04-21 07:37 pm       Source: Gizbot Bureau   ಡಿಜಿಟಲ್ ಟೆಕ್

ಪ್ರಸ್ತುತ ಪ್ರತಿಯೊಬ್ಬರಿಗೂ ಯೂಟ್ಯೂಬ್ ಒಂದು ಅತ್ಯುತ್ತಮ ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಯೂಟ್ಯೂಬ್‌ನಲ್ಲಿ ಕ್ರೀಡೆ, ಸುದ್ದಿ, ಮನರಂಜನೆ, ಸಿನಿಮಾ, ಅಡುಗೆ, ಹಾಸ್ಯ, ವೆಬ್‌ ಸೀರಿಸ್‌ಗಳು ಹೀಗೆ ಭಿನ್ನ ಭಿನ್ನ ವಿಷಯಗಳ ಮಾಹಿತಿ ಲಭ್ಯ.

ಪ್ರಸ್ತುತ ಪ್ರತಿಯೊಬ್ಬರಿಗೂ ಯೂಟ್ಯೂಬ್ ಒಂದು ಅತ್ಯುತ್ತಮ ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಯೂಟ್ಯೂಬ್‌ನಲ್ಲಿ ಕ್ರೀಡೆ, ಸುದ್ದಿ, ಮನರಂಜನೆ, ಸಿನಿಮಾ, ಅಡುಗೆ, ಹಾಸ್ಯ, ವೆಬ್‌ ಸೀರಿಸ್‌ಗಳು ಹೀಗೆ ಭಿನ್ನ ಭಿನ್ನ ವಿಷಯಗಳ ಮಾಹಿತಿ ಲಭ್ಯ. ಯಾವುದೇ ಮಾಹಿತಿಯ ವಿಡಿಯೊ ಕಂಟೆಂಟ್ ಪಡೆಯಬಹುದಾಗಿದೆ. ಇಷ್ಟೆಲ್ಲ ಅಗತ್ಯ ಕಂಟೆಂಟ್‌ ಹೊಂದಿರುವ ಯೂಟ್ಯೂಬ್‌ ಅನ್ನು ವೀಕ್ಷಿಸಲು ಬಳಕೆದಾರರಿಗೆ ಇಂಟರ್ನೆಟ್‌ ಬೇಕೆ ಬೇಕು. ಆದರೆ ಆಫ್‌ಲೈನ್‌ನಲ್ಲಿಯೂ ಯೂಟ್ಯೂಬ್ ವಿಡಿಯೊ ವೀಕ್ಷಣೆ ಮಾಡಬಹುದಾಗಿದೆ.

ಹೌದು, ಗೂಗಲ್ ಮಾಲೀಕತ್ವದ ಜನಪ್ರಿ ಯೂಟ್ಯೂಬ್‌ ತಾಣದಲ್ಲಿ ಯಾವುದೇ ವಿಷಯದ ಮಾಹಿತಿಯನ್ನು ತ್ವರಿತವಾಗಿ ಹಾಗೂ ಉಚಿತವಾಗಿ ನೋಡಬಹುದಾಗಿದೆ. ಆದರೆ ಇಂಟರ್ನೆಟ್‌ ಇಲ್ಲದಿದ್ದರೂ ಸಹ ಯೂಬ್ಯೂಬ್ ವಿಡಿಯೊ ವೀಕ್ಷಿಸುವುದಕ್ಕೆ ಅನುಕೂಲಕರ ಫೀಚರ್ಸ್‌ ಅನ್ನು ಸಂಸ್ಥೆಯು ಒದಗಿಸಿಕೊಂಡಿದೆ. ಅದುವೇ offline viewing. ಈ ಸೌಲಭ್ಯ ಬಳಸಿ ಬಳಕೆದಾರರು ನೆಟ್‌ ಇಲ್ಲದಿದ್ದರೂ ವಿಡಯೊ ವೀಕ್ಷಣೆ ಮಾಡಬಹುದು. ಈ ಸೇವೆ ಅಧಿಕೃತ ಯೂಟ್ಯೂಬ್ ಆಪ್ ಮತ್ತು ಯೂಟ್ಯೂಬ್ ಗೋ ಆಪ್‌ನಲ್ಲಿಯೂ ಲಭ್ಯವಿದೆ. ಹಾಗದಾರೆ ಆಫ್‌ಲೈನ್‌ನಲ್ಲಿ ಯೂಟ್ಯೂಬ್ ವಿಡಿಯೊ ಹೇಗೆ ವೀಕ್ಷಣೆಮಾಡುವುದು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ವಿಡಿಯೊ ಡೌನ್‌ಲೋಡ್‌ ಆಯ್ಕೆ

ವಿಡಿಯೊ ಡೌನ್‌ಲೋಡ್‌ ಆಯ್ಕೆ

ನೆಟ್‌ ಇಲ್ಲದ ವೇಳೆ ವಿಡಿಯೊ ವೀಕ್ಷಣೆ ಮಾಡುವ ಯೂಟ್ಯೂಬ್ ಡೌನ್‌ಲೋಡ್ ಆಯ್ಕೆ ಪರಿಚಯಿಸಿದೆ. ಇಲ್ಲಿ ಡೌನ್‌ಲೋಡ್‌ ಮಾಡುವ ವಿಡಿಯೊಗಳು ಫೋನ್ ಗ್ಯಾಲರಿಯಲ್ಲಿ ಕಾಣಿಸುವುದಿಲ್ಲ ಬದಲಿಗೆ ಯೂಟ್ಯೂಬ್ ಆಪ್‌ನಲ್ಲಿಯೇ ಸ್ಟೋರ್ ಆಗಿರುತ್ತವೆ. ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿರುವ ವಿಡಿಯೊಗಳನ್ನು ನೆಟ್‌ ಇಲ್ಲದಿದ್ದರೂ ಸಹ ವೀಕ್ಷಣೆ ಮಾಡಬಹುದು.

ಯೂಟ್ಯೂಬ್‌ ಆಪ್‌ನಲ್ಲಿ ವಿಡಿಯೊ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿರಿ:

* ನಿಮ್ಮ ಫೋನಿನಲ್ಲಿ ಯೂಟ್ಯೂಬ್ ಆಪ್ ತೆರೆಯಿರಿ. * ಆಗ ವಿಡಿಯೊಗಳ ಲಿಸ್ಟ್‌ ಕಾಣಿಸುತ್ತದೆ.

* ನಿಮ್ಮ ಆಯ್ಕೆಯ ವಿಡಿಯೊ ಬಲ ಭಾಗದಲ್ಲಿ ಕಾಣುವ ಮೂರು ಡಾಟ್‌ ಆಯ್ಕೆ ಒತ್ತಿರಿ.

* ಆಗ ಕೆಲವು ಆಯ್ಕೆಗಳ ಪಟ್ಟಿ ಕಾಣಿಸುತ್ತದೆ. * ಆ ಆಯ್ಕೆಗಳಲ್ಲಿ ಡೌನ್‌ಲೋಡ್ ಅನ್ನು ಸೆಲೆಕ್ಟ್ ಮಾಡಿರಿ.

* ಹೀಗೆ ಡೌನ್‌ಲೋಡ್ ಮಾಡುವ ವಿಡಿಯೊಗಳು ಯೂಟ್ಯೂಬ್ ಡೌನ್‌ಲೋಡ್ಸ್‌ ಆಯ್ಕೆಯಲ್ಲಿ ಸ್ಟೋರ್ ಆಗಿರುತ್ತವೆ.

* ಒಂದು ವೇಳೆ ವಿಡಿಯೊ ವೀಕ್ಷಣೆ ಮಾಡುವಾಗ ಆ ವಿಡಿಯೊ ಡೌನ್‌ಲೋಡ್ ಮಾಡಬೇಕೆಂದಿದ್ದರೇ, ವಿಡಿಯೊ ಕೆಳಭಾಗದಲ್ಲಿ ಡೌನ್‌ಲೋಡ್ ಆಯ್ಕೆ ಕಾಣಿಸುತ್ತದೆ.

ಯೂಟ್ಯೂಬ್ ಗೋ ಆಪ್

ಯೂಟ್ಯೂಬ್ ಗೋ ಆಪ್ ಯೂಟ್ಯೂಬ್

ಗೋ ಆಪ್, ಯೂಟ್ಯೂಬ್ ಲೈಟ್ ವರ್ಷನ್ ಆಗಿದೆ. ಯೂಟ್ಯೂಬ್ ಆಪ್‌ಗಿಂತ ಕಡಿಮೆ ಡೇಟಾ ಕಬಳಿಸುವ ಅಪ್ಲಿಕೇಶನ್ ಆಗಿದೆ. ಇನ್ನು ಈ ಆಪ್‌ ಅನ್ನು ಕಡಿಮೆ ಪ್ರೊಸೆಸರ್ ಸಾಮರ್ಥ್ಯದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗಾಗಿ ರೂಪಿಸಲಾಗಿದೆ. ಈ ಆಪ್‌ ಸಹ ಆಫ್‌ಲೈನ್‌ ವೀಕ್ಷಣೆ ಮಾಡಲು ಅವಕಾಶ ನೀಡುತ್ತದೆ. ವಿಡಿಯೊ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಯೂಟ್ಯೂಬ್ ಗೋ ಆಪ್‌ನಲ್ಲಿ ವಿಡಿಯೊ ಡೌನ್‌ಲೋಡ್‌ಗೆ ಹೀಗೆ ಮಾಡಿ

* ಫೋನಿನಲ್ಲಿ ಯೂಟ್ಯೂಬ್ ಗೋ ಆಪ್‌ ತೆರೆಯಿರಿ. * ನಿಮಗೆ ಬೇಕಾದ ವಿಡಿಯೊ ಸರ್ಚ್ ಮಾಡಿರಿ.

* ಆ ವಿಡಿಯೊದ ಪಕ್ಕದಲ್ಲಿರುವ ಡಾಟ್ ಆಯ್ಕೆ ಒತ್ತಿರಿ. * ನಂತರ ಡೌನ್‌ಲೋಡ್ ಆಯ್ಕೆ ಸೆಲೆಕ್ಟ್ ಮಾಡಿರಿ.

* ಡೌನ್‌ಲೋಡ್ ಆದ ಬಳಿಕ ಡೌನ್‌ಲೋಡ್ಸ್‌ ಆಯ್ಕೆಯಲ್ಲಿ ಸ್ಟೋರ್ ಆಗಿರುತ್ತದೆ.

ಇತರೆ ಯಾವ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು

ಇತರೆ ಯಾವ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು

ಬಳಕೆದಾರರು ಯೂಟ್ಯೂಬ್ ವಿಡಿಯೊ ವೀಕ್ಷಣೆಗೆ ಮತ್ತು ಡೌನ್‌ಲೋಡ್‌ ಮಾಡಲು ಹಲವು ದಾರಿಗಳಿವೆ. ಸ್ನ್ಯಾಪ್‌ಟ್ಯೂಬ್ ತಾಣದಲ್ಲಿಯೂ ಯೂಟ್ಯೂಬ್ ವಿಡಿಯೊ ಡೌನ್‌ಲೋಡ್ ಮಾಡಬಹುದು. ಹಾಗೆಯೇ 4K ಡೌನ್‌ಲೋಡರ್ ಮತ್ತು ವೆಬ್‌ಸೈಟ್ ಮೂಲಕವು ಡೌನ್‌ಲೋಡ್ ಮಾಡಬಹುದು. ಉಳಿದಂತೆ VDಟ್ಯೂಬ್ ಸಹ ವಿಡಿಯೊ ಡೌನ್‌ಲೋಡ್ ಆಯ್ಕೆ ಪಡೆದಿದೆ.

This News Article Is A Copy Of GIZBOT BUREAU