ಚೆಪಾಕ್ ಅಂಗಳದಲ್ಲಿ ಆಡುವುದೇ ಡೆಲ್ಲಿ ತಂಡಕ್ಕಿರುವ ದೊಡ್ಡ ಸವಾಲು: ಪ್ರಗ್ಯಾನ್ ಓಜಾ

20-04-21 08:05 pm       Source: MYKHEL   ಡಿಜಿಟಲ್ ಟೆಕ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಯೋಜನೆಯನ್ನು ಹಾಕಿಕೊಂಡಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಯೋಜನೆಯನ್ನು ಹಾಕಿಕೊಂಡಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ. ಆದರೆ ಚೆಪಾಕ್ ಅಂಗಳದಲ್ಲಿ ಈ ಪಂದ್ಯ ನಡೆಯುತ್ತಿರುವುದು ಡೆಲ್ಲಿಗೆ ದೊಡ್ಡ ಸವಾಲಾಗಲಿದೆ ಎಂದು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡು ತಂಡಗಳು ಕೂಡ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿವೆ. ಆದರೆ ಡೆಲ್ಲಿ ತಂಡ ಚೆಪಾಕ್ ಅಂಗಳದಲ್ಲಿ ಈ ಬಾರಿ ಪ್ರಥಮ ಬಾರಿಗೆ ಆಡುತ್ತಿದೆ. ಆದರೆ ಮುಂಬೈ ಕಳೆದ ಮೂರು ಪಂದ್ಯಗಳನ್ನು ಕೂಡ ಇದೇ ಅಂಗಳದಲ್ಲಿ ಆಡಿರುವುದು ಡೆಲ್ಲಿ ವಿರುದ್ಧ ಮೇಲುಗೈ ಸಾಧಿಸಲು ಕಾರಣವಾಗಬಹುದು.

"ನನ್ನ ಅಭಿಪ್ರಾಯದ ಪ್ರಕಾರ ಮುಂಬೈ ತಂಡದ ವಿರುದ್ಧ ಕಳೆದ ಕೆಲ ಮುಖಾಮುಖಿಯಲ್ಲಿ ಸೋಲು ಕಂಡಿರುವುದರಿಂದ ಯಾವ ರೀತಿ ಆಡಬೇಕೆಂದು ಯೋಜನೆ ಹಾಕಿಕೊಂಡಿರುತ್ತೀರಿ. ತಂಡದಲ್ಲಿರುವ ರಿಕಿ ಪಾಂಟಿಂಗ್ ಮತ್ತು ಹಿರಿಯ ಸದಸ್ಯರು ಅದಕ್ಕೆ ಪೂರಕವಾಗಿ ತಂಡವನ್ನು ಸಿದ್ಧಗೊಳಿಸಿರುತ್ತಾರೆ" ಎಂದು ಓಜಾ ಹೇಳಿದ್ದಾರೆ.

"ಆದರೆ ಚೆಪಾಕ್ ಅಂಗಳದಲ್ಲಿ ಡೆಲ್ಲಿ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವುದು ಅವರಿಗೆ ಸವಾಲಾಗಲಿದೆ. ಮುಂಬೈಗೆ ಹೋಲಿಸಿದರೆ ಇದು ಸಾಕಷ್ಟು ಭಿನ್ನವಾದ ಪಿಚ್ ಆಗಿದೆ" ಎಂದು ಓಜಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಮೂರು ಪಂದ್ಯಗಳನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಮಾರ್ಕಸ್ ಸ್ಟೋಯ್ನಿಸ್, ಶಿಮ್ರಾನ್ ಹೆಟ್ಮೇಯರ್, ಲಲಿತ್ ಯಾದವ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ, ಅಮಿತ್ ಮಿಶ್ರಾ, ಅವೇಶ್ ಖಾನ್

This News Article Is A Copy Of MYKHEL