ಬ್ರೇಕಿಂಗ್ ನ್ಯೂಸ್
21-04-21 12:03 pm Source: Gizbot Bureau ಡಿಜಿಟಲ್ ಟೆಕ್
ಆಪಲ್ ಸಂಸ್ಥೆ ತನ್ನ ಬಹು ನಿರೀಕ್ಷಿತ ಸ್ಪ್ರಿಂಗ್ ಲೋಡೆಡ್ ಈವೆಂಟ್‌ನಲ್ಲಿ ಹೊಸ-ಐಮ್ಯಾಕ್ ಅನ್ನು ಲಾಂಚ್ ಮಾಡಿದೆ. ಇದು ಕಸ್ಟಮ್-ವಿನ್ಯಾಸಗೊಳಿಸಿದ ARM ಚಿಪ್ - ಆಪಲ್ M1 SoC ಅನ್ನು ಒಳಗೊಂಡಿದೆ. 24-ಇಂಚಿನ ಈ ಐಮ್ಯಾಕ್ ಹಿಂದಿನ ತಲೆಮಾರುಗಳಿಗಿಂತ ತೆಳ್ಳಗಿರುತ್ತದೆ, ವೇಗವಾಗಿರುತ್ತದೆ ಮತ್ತು ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರ ಜೊತೆಯಲ್ಲಿ ಕಂಪನಿಯು ಪರಿಷ್ಕರಿಸಿದ ಆಪಲ್ ಟಿವಿ 4K ಸ್ಟ್ರೀಮಿಂಗ್ ಡಿವೈಸ್ ಅನ್ನು ಸಹ ಅನಾವರಣಗೊಳಿಸಿದೆ. ಇದು ಈಗ ಆಪಲ್ ಎ 12 ಬಯೋನಿಕ್ ಎಸ್‌ಒಸಿಯನ್ನು ಒಳಗೊಂಡಿರಲಿದೆ.
ಹೌದು, ಆಪಲ್ ಸಂಸ್ಥೆ ತನ್ನ ಸ್ಪ್ರಿಂಗ್ ಲೋಡೆಡ್ ಈವೆಂಟ್‌ನಲ್ಲಿ ಹೊಸ ಐಮ್ಯಾಕ್ ಮತ್ತು ಅಪ್ಡೇಟ್ ಮಾಡಿದ ಆಪಲ್ ಟಿವಿ 4K ಸ್ರೀಮಿಂಗ್ ಡಿವೈಸ್ ಅನ್ನು ಲಾಂಚ್ ಮಾಡಿದೆ. ಇನ್ನು ಹೊಸ ಐಮ್ಯಾಕ್ 24-ಇಂಚಿನ 4.5K ರೆಟಿನಾ ಡಿಸ್‌ಪ್ಲೇ ಹೊಂದಿದ್ದು, ಟ್ರೂ ಟೋನ್ ಟೆಕ್ ಫಾರ್ ಕಲರ್ ಬ್ಯಾಲೆನ್ಸ್ ಹೊಂದಿದೆ. ಇನ್ನುಳಿದಂತೆ ಈ ಹೊಸ ಐಮ್ಯಾಕ್ ಮತ್ತು ಹೊಸ ಆಪಲ್ ಟಿವಿ 4ಕೆ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಆಪಲ್ ಐಮ್ಯಾಕ್ 24
ಆಪಲ್ ಐಮ್ಯಾಕ್ 24 4480x2520 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 24 ಇಂಚಿನ 4.5K ರೆಟಿನಾ ಡಿಸ್‌ಪ್ಲೇ ಹೊಂದಿದೆ. M1 ಆಧಾರಿತ ಐಮ್ಯಾಕ್ ಹೊಚ್ಚ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ ಡಿಸ್ಟ್ರಕ್ಷನ್-ಫ್ರೀ-ಮ್ಯೂಟೆಡ್ ಕಲರ್ ಮತ್ತು ಹಿಂಭಾಗದಲ್ಲಿ ಬ್ರೈಟ್‌ನೆಸ್ ಕಲರ್ ಅನ್ನು ಒಳಗೊಂಡಿದೆ. ಇನ್ನು ಈ ಐಮ್ಯಾಕ್ ಆಪಲ್‌ನ ಟ್ರೂ ಟೋನ್ ಟೆಕ್ ಫಾರ್ ಕಲರ್ ಬ್ಯಾಲೆನ್ಸ್, P3 ವೈಡ್ ಕಲರ್ ಗ್ಯಾಮಟ್, 500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು ಲೋ ರಿಫ್ಲೆಕ್ಟಿವಿಟಿ ಲೇಪನ ಹೊಂದಿದೆ. ಅಲ್ಲದೆ 24 ಇಂಚಿನ ಈ ಡಿಸ್‌ಪ್ಲೇ ಹಿಂದಿನ 21.5 ಮಾದರಿಗಿಂತ ಸ್ವಲ್ಪ ದೊಡ್ಡದಾದ ಚೌಕಟ್ಟಿನಲ್ಲಿ ಹೊಂದಿಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ. ಆಲ್-ಇನ್-ಒನ್ ಪಿಸಿ ಸಹ ಹೆಚ್ಚು ಸಾಂದ್ರವಾಗಿರುತ್ತದೆ, ಕೇವಲ 11.5 ಎಂಎಂ ತೆಳ್ಳಗಿರುತ್ತದೆ. ಇದರ ಮೂಲ ಮಾದರಿ ನೀಲಿ, ಹಸಿರು, ಕೆಂಪು, ಬೆಳ್ಳಿ ಎಂಬ ನಾಲ್ಕು ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಎರಡು ಉನ್ನತ ಮಾದರಿಗಳು ಹಳದಿ, ಕಿತ್ತಳೆ ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿದೆ.
ಇದಲ್ಲದೆ ಈ ಹೊಸ ಐಮ್ಯಾಕ್ ಎಆರ್ಎಂ ಆಧಾರಿತ ವಿನ್ಯಾಸ ಮತ್ತು ಸಿಸ್ಟಮ್-ಆನ್-ಚಿಪ್ ಎಂ 1 ಚಿಪ್ ಅನ್ನು ಹೊಂದಿದೆ. ಇದು ಲಾಜಿಕ್ ಬೋರ್ಡ್ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹೊಸ ಎಐಒ ಎರಡು ಸಣ್ಣ ಫ್ಯಾನ್‌ಗಳನ್ನು ಹೊಂದಿರುವುದರಿಂದ 50% ನಿಶ್ಯಬ್ದವನ್ನು ಹೊಂದಿರಲಿದೆ. ಜೊತೆಗೆ 24 ಇಂಚಿನ ಈ ಐಮ್ಯಾಕ್‌ನಲ್ಲಿನ ಹೊಸ SoC ಪ್ರೊಸೆಸರ್ ಹಳೆಯ 21.5-ಇಂಚಿನ ಮಾದರಿಗಳಿಗಿಂತ 85 ಪ್ರತಿಶತದಷ್ಟು ವೇಗವಾಗಿ ಸಿಪಿಯು ಕಾರ್ಯಕ್ಷಮತೆ, 2x ವೇಗದ ಜಿಪಿಯು ಕಾರ್ಯಕ್ಷಮತೆ ಮತ್ತು 3x ವೇಗದ ಯಂತ್ರ ಕಲಿಕೆಯ ಕಾರ್ಯಕ್ಷಮತೆಯನ್ನು ಒಳಗೊಂಡಿದೆ.
ಹೊಸ ಐಮ್ಯಾಕ್‌ನಲ್ಲಿ 1080p ವೆಬ್‌ಕ್ಯಾಮ್ ಅನ್ನು ನೀಡಲಾಗಿದೆ. ಇದು ಫೇಸ್ ಡಿಟೆಕ್ಷನ್ ಮತ್ತು ಬೆಟರ್ ಎಕ್ಸಪೋಸರ್ ಮತ್ತು ಕಲರ್ ಬ್ಯಾಲೆನ್ಸ್‌ಗಾಗಿ M1 ನ್ಯೂರಲ್ ಇಂಜಿನ್ ಸಹಾಯ ಮಾಡಲಿದೆ. ಆಪಲ್ ಕಂಪನಿಯು ಬೀಮ್‌ಫಾರ್ಮಿಂಗ್ ತಂತ್ರಜ್ಞಾನದೊಂದಿಗೆ ಸ್ಟುಡಿಯೋ ಗುಣಮಟ್ಟದ 3-ಮೈಕ್ ಅರೇ ಮತ್ತು ಡಾಲ್ಬಿ ಅಟ್ಮೋಸ್-ಪ್ರಮಾಣೀಕೃತ 6-ಸ್ಪೀಕರ್ ವ್ಯವಸ್ಥೆಯನ್ನು ಸಹ ಒಳಗೊಂಡಿದೆ. ಇದರಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಟ್ವೀಟರ್‌ಗಳ ಜೊತೆಗೆ ಫೋರ್ಸ್-ಕ್ಯಾನ್ಸಲ್ ವೂಫರ್‌ಗಳು ಕೂಡ ಸೇರಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಿಗೆ ಸಂಬಂಧಿಸಿದಂತೆ, ಹೊಸ ಐಮ್ಯಾಕ್ ಬಳಕೆದಾರರು ನಾಲ್ಕು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳನ್ನು ಪಡೆಯಲು ಆಯ್ಕೆ ಮಾಡಬಹುದು, ಅವುಗಳಲ್ಲಿ ಎರಡು ಥಂಡರ್ಬೋಲ್ಟ್ ಆಗಿರಬಹುದು.
A12 ಬಯೋನಿಕ್ ಪ್ರೊಸೆಸರ್ ಒಳಗೊಂಡ ಆಪಲ್ ಟಿವಿ 4K
ಆಪಲ್ A12 ಬಯೋನಿಕ್ ಪ್ರೊಸೆಸರ್ ಒಳಗೊಂಡ ಹೊಸ ಆಪಲ್ ಟಿವಿ 4K ಹಿಂದಿನ ಮಾದರಿಗಿಂತ ಹೆಚ್ಚಿನ ಅಪ್ಡೇಟ್‌ಗಳನ್ನು ಹೊಂದಿದೆ. ಇದು ಹೆಚ್ಚಿನ ಫ್ರೇಮ್ ರೇಟ್ ಹೆಚ್‌ಡಿಆರ್ ವಿಷಯಕ್ಕೆ ಬೆಂಬಲಿಸಲಿದೆ. ಅಲ್ಲದೆ ಅಂತಹ ಹೆಚ್ಚಿನ ವಿಷಯವನ್ನು ಲಭ್ಯವಾಗುವಂತೆ ಮಾಡಲು, ಜಾಗತಿಕವಾಗಿ ವಿಷಯ ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ಆಪಲ್ ಹೇಳಿದೆ. ಇದರಲ್ಲಿ ಐಫೋನ್ 12 ಪ್ರೊ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್‌ಗಳನ್ನು ಬಳಸಿ ಡಾಲ್ಬಿ ವಿಷನ್ ಹೆಚ್‌ಡಿಆರ್ ವಿಷಯವನ್ನು 60fpsನಲ್ಲಿ ದಾಖಲಿಸಬಹುದು. ಇದು ಕಲರ್ ಬ್ಯಾಲೆನ್ಸ್ ಫೀಚರ್ಸ್ ಅನ್ನು ಹೊಂದಿರುವುದರಿಂದ, ಐಫೋನ್ ಹ್ಯಾಂಡ್‌ಸೆಟ್‌ಗಳನ್ನು ಹೊಂದಿರುವ ಆಪಲ್ ಟಿವಿ 4ಕೆ ಬಳಕೆದಾರರಿಗೆ ತಮ್ಮ ಟೆಲಿವಿಷನ್ ಸೆಟ್‌ಗಳ ಕಲರ್ ಬ್ಯಾಲೆನ್ಸ್ ಮಾಡಲು ಸಮತೋಲನವನ್ನು ಸರಿಹೊಂದಿಸಲು ಅನುವು ಮಾಡಿಕೊಡುತ್ತದೆ.
ಇನ್ನು ಈ ಹೊಸ ಆಪಲ್ ಟಿವಿ 4K ಹೊಚ್ಚ ಹೊಸ ಸಿರಿ ರಿಮೋಟ್ ಅನ್ನು ಸಹ ಹೊಂದಿದೆ. ಇದನ್ನು ಪ್ರತ್ಯೇಕವಾಗಿ ಖರೀದಿಸಬಹುದು ಮತ್ತು ಕೊನೆಯ ತಲೆಮಾರಿನ ಆಪಲ್ ಟಿವಿ 4K ಮತ್ತು ಆಪಲ್ ಟಿವಿ ಹೆಚ್‌ಡಿ ಮಾದರಿಗಳೊಂದಿಗೆ ಕೆಲಸ ಮಾಡಬಹುದು. ರಿಮೋಟ್‌ನಲ್ಲಿ ಟಚ್-ಎನೇಬಲ್ಡ್ ಕ್ಲಿಕ್‌ಪ್ಯಾಡ್, ಹೊರ-ರಿಂಗ್, ಇದೀಗ ವೀಡಿಯೊ ಟೈಮ್‌ಲೈನ್‌ನಲ್ಲಿ ಸರ್ಚ್ ಮಾಡಲು ಔಟರ್ ರಿಂಗ್ ಸರ್ಕ್ಯೂಲರ್ ಅನ್ನು ರೀಡ್ ಮಾಡಬಹುದು. ಇದಲ್ಲದೆ ಟಿವಿ ಸೆಟ್ ಅನ್ನು ನಿಯಂತ್ರಿಸುವ ಹೊಸ ಪವರ್ ಬಟನ್ ಮತ್ತು ಸಿರಿ ಬಟನ್‌ನ ಚಲನೆಯನ್ನು ಬದಿಗೆ ಹೊಂದಿರುತ್ತದೆ.
ಇವುಗಳ ಜೊತೆಗೆ ಆಪಲ್ ತನ್ನ ಸ್ಪ್ರಿಂಗ್ ಲೋಡೆಡ್ ಈವೆಂಟ್‌ನಲ್ಲಿ ಐಫೋನ್ 12 ಮತ್ತು ಐಫೋನ್ 12 ಮಿನಿಗಾಗಿ ಹೊಸ ಪರ್ಪಲ್ ಕಲರ್ ರೂಪಾಂತರವನ್ನು ಪ್ರಕಟಿಸಿದೆ. ಈ ವಾರದಿಂದ ಇದು ಪ್ರೀ-ಆರ್ಡರ್‌ಗೆ ಲಭ್ಯವಾಗಲಿದೆ. ನೇರಳೆ ಬಣ್ಣದ ರೂಪಾಂತರವು ಈಗಾಗಲೇ ಲಭ್ಯವಿರುವ ಕಪ್ಪು, ನೀಲಿ, ಹಸಿರು, ಕೆಂಪು ಮತ್ತು ಬಿಳಿ ಬಣ್ಣಗಳನ್ನು ಸೇರಿಕೊಳ್ಳಲಿದೆ. ಸ್ಪ್ರಿಂಗ್ ಲೋಡೆಡ್ ಈವೆಂಟ್‌ನಲ್ಲಿ ಬಹುನಿರೀಕ್ಷಿತ ಏರ್‌ಟ್ಯಾಗ್ಸ್ ಟ್ರ್ಯಾಕರ್‌ಗಳನ್ನು ಸಹ ಪರಿಚಯಿಸಲಾಗಿದೆ. ಇವುಗಳು ಫೈಂಡ್ ಮೈ ಅಪ್ಲಿಕೇಶನ್ ಒಳಗೊಂಡಿರುವ ಯಾವುದೇ ವಸ್ತುಗಳನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡಲಿದೆ. ಇನ್ನು ಈ ಏರ್‌ಟ್ಯಾಗ್‌ಗಳು ಅಲ್ಟ್ರಾ-ವೈಡ್‌ಬ್ಯಾಂಡ್ ತಂತ್ರಜ್ಞಾನವನ್ನು ಒಳಗೊಂಡಿವೆ.
ಬೆಲೆ ಮತ್ತು ಲಭ್ಯತೆ
ಆಪಲ್ M1 SoC ಅನ್ನು ಒಳಗೊಂಡಿರುವ ಎಲ್ಲಾ ಹೊಸ ಐಮ್ಯಾಕ್ ಬೆಲೆ ಯುಎಸ್‌ಲ್ಲಿ $1,299 (ಸುಮಾರು 97,900 ರೂ.) ನಿಂದ ಪ್ರಾರಂಭವಾಗಲಿದೆ. ಈ ಬೆಲೆ 8-ಕೋರ್ ಸಿಪಿಯು, 7-ಕೋರ್ ಜಿಪಿಯು , 256 ಜಿಬಿ ಸಂಗ್ರಹ, ಮ್ಯಾಜಿಕ್ ಕೀಬೋರ್ಡ್ ಮಾದರಿಯನ್ನು ಒಳಗೊಂಡಿರಲಿದೆ. ಇನ್ನು ಭಾರತದಲ್ಲಿ ಬೆಲೆ ರೂ. 1,19,900 ನಿಂದ 1,39,000 ರೂ ವರೆಗೆ ಇರಲಿದೆ. ಇನ್ನು A12 ಬಯೋನಿಕ್ SoC ಹೊಂದಿರುವ ಆಪಲ್ ಟಿವಿ 4K, 32GB ಶೇಖರಣಾ ಮಾದರಿಗೆ $ 179 (ಸುಮಾರು 13,500 ರೂ.) ಮತ್ತು 64GB ಮಾದರಿಗೆ $ 199 (ಸುಮಾರು 15,000 ರೂ.) ಬೆಲೆ ಹೊಂದಿದೆ. ಭಾರತದಲ್ಲಿ ಇದು ರೂ. 18,900 ಮತ್ತು ರೂ. 20,900 ಬೆಲೆಯನ್ನು ಹೊಂದಿದೆ. ಇವುಗಳನ್ನು ಇದೇ ಏಪ್ರಿಲ್ 30 ರಿಂದ ಪ್ರೀ ಬುಕ್ಕಿಂಗ್ ಮಾಡಬಹುದಾಗಿದೆ. ಏಪ್ರಿಲ್ 30ರ ನಂತರ 30 ದೇಶಗಳಲ್ಲಿ ಲಭ್ಯವಾಗಲಿದೆ.
This News Article Is A Copy Of GIZBOT BUREAU
23-11-24 02:15 pm
Bangalore Correspondent
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
23-11-24 05:34 pm
HK News Desk
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
23-11-24 12:20 pm
Mangalore Correspondent
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm