ಭಾರತದ ಬಳಕೆದಾರರಿಗಾಗಿ ಕೋವಿಡ್ ಹಾಸ್ಪಿಟಲ್‌ ಡೈರೆಕ್ಟರಿ ಪ್ರಾರಂಭಿಸಿದ ಟ್ರೂಕಾಲರ್!

28-04-21 05:44 pm       Source: Gizbot Bureau   ಡಿಜಿಟಲ್ ಟೆಕ್

ಪ್ರಸ್ತುತ ದಿನಗಳಲ್ಲಿ ನಿಮಗೆ ತಿಳಿಯದ ಸಂಖ್ಯೆಯಿಂದ ಕರೆ ಬಂದರೆ ಮೊದಲು ನೆನಾಪಾಗೋದೆ ಟ್ರೂ ಕಾಲರ್‌ ಅಪ್ಲಿಕೇಶನ್‌. ಟ್ರೂ ಕಾಲರ್‌ ಅಪ್ಲಿಕೇಶನ್‌ ನಿಮ್ಮ ಮೊಬೈಲ್‌ ಸಂಖ್ಯೆಗ ಬರುವ ಅನಧಿಕೃತ ಸಂಪರ್ಕದ ಹೆಸರನ್ನು ಪತ್ತೆ ಹಚ್ಚಲು ಸಾಕಷ್ಟು ಸಹಾಯಕವಾಗಿದೆ.

ಪ್ರಸ್ತುತ ದಿನಗಳಲ್ಲಿ ನಿಮಗೆ ತಿಳಿಯದ ಸಂಖ್ಯೆಯಿಂದ ಕರೆ ಬಂದರೆ ಮೊದಲು ನೆನಾಪಾಗೋದೆ ಟ್ರೂ ಕಾಲರ್‌ ಅಪ್ಲಿಕೇಶನ್‌. ಟ್ರೂ ಕಾಲರ್‌ ಅಪ್ಲಿಕೇಶನ್‌ ನಿಮ್ಮ ಮೊಬೈಲ್‌ ಸಂಖ್ಯೆಗ ಬರುವ ಅನಧಿಕೃತ ಸಂಪರ್ಕದ ಹೆಸರನ್ನು ಪತ್ತೆ ಹಚ್ಚಲು ಸಾಕಷ್ಟು ಸಹಾಯಕವಾಗಿದೆ. ಆದರೆ ಇದೇ ಟ್ರೂ ಕಾಲರ್‌ ಅಪ್ಲಿಕೇಶನ್‌ ಭಾರತದಲ್ಲಿ ಬಳಕೆದಾರರಿಗಾಗಿ ಕೋವಿಡ್ ಆಸ್ಪತ್ರೆ ಡೈರೆಕ್ಟರಿಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಡೈರೆಕ್ಟರಿ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಬಳಕೆದಾರರು ಇದನ್ನು ಮೆನು ಅಥವಾ ಡಯಲರ್ ಮೂಲಕ ಪ್ರವೇಶಿಸಬಹುದು ಎಂದು ಹೇಳಿದೆ.

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಭಾರತದಲ್ಲಿ ಕೊರೊನಾ ಸೊಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಸ್ಪಿಟಲ್‌ ಡೈರೆಕ್ಟರಿಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹೆಸರೇ ಸೂಚಿಸುವಂತೆ, ಈ ಡೈರೆಕ್ಟರಿಯು ದೇಶಾದ್ಯಂತ ಅನೇಕ ರಾಜ್ಯಗಳಿಂದ ಕೋವಿಡ್ ರೋಗಿಗಳಿಗಾಗಿ ಗೊತ್ತುಪಡಿಸಿದ ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು ಮತ್ತು ವಿಳಾಸಗಳನ್ನು ನೀಡುತ್ತದೆ. ಇದನ್ನು ಅಧಿಕೃತ ಸರ್ಕಾರಿ ಮೂಲಗಳಿಂದ ಪಡೆಯಲಾಗುತ್ತದೆ ಎಂದು ಟ್ರೂಕಾಲರ್ ಹೇಳಿದೆ. ಹಾಗಾದ್ರೆ ಟ್ರೂ ಕಾಲರ್‌ ಪರಿಚಯಿಸಿರುವ ಡೈರೆಕ್ಟರಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ರೂ ಕಾಲರ್‌

ಟ್ರೂ ಕಾಲರ್‌ ಕೋವಿಡ್‌ ರೋಗಿಗಳು ಹತ್ತಿರದಲ್ಲಿರುವ ಕೋವಿಡ್‌ ಆಸ್ಪತ್ರೆಗಳ ಬಗ್ಗೆ ಮಾಹಿತಿ ತಿಳಿಯಲು ಉಪಯೋಗವಾಗುವಂತೆ ಹಾಸ್ಪಿಟಲ್‌ ಡೈರೆಕ್ಟರಿ ಪರಿಚಯಿಸಿದೆ. ಇದು ಕೋವಿಡ್-ಸಂಬಂಧಿತ ಸೇವೆಗಳಿಗಾಗಿ ಪ್ರಮುಖ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಲಿದೆ. ಆದರೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳ ಬಗ್ಗೆ ಇದರಲ್ಲಿ ಮಾಹಿತಿ ದೊರೆಯುವುದಿಲ್ಲ. ಇನ್ನು ಈ ಡೈರೆಕ್ಟರಿಯಲ್ಲಿ ಆಸ್ಪತ್ರೆಯ ಪಟ್ಟಿಯನ್ನು ನೀಡಲಾಗಿದೆ. ಶೀಘ್ರದಲ್ಲೇ ಇನ್ನು ಹೆಚ್ಚಿನ ಪರಿಶೀಲನೆ ನಡೆಸಿದ ಮಾಹಿತಿಯನ್ನು ಇದರಲ್ಲಿ ಸೇರಿಸುವ ಕೆಲಸವನ್ನು ಟ್ರೂ ಕಾಲರ್‌ ಮಾಡುತ್ತಿದೆ.

ಟ್ರೂ ಕಾಲರ್‌

ಇದೀಗ ಹೆಸರೇ ಸೂಚಿಸುವಂತೆ, ಟ್ರೂ ಕಾಲರ್‌ನ ಹಾಸ್ಪಿಟಲ್‌ ಡೈರೆಕ್ಟರಿಯು ದೇಶಾದ್ಯಂತ ಅನೇಕ ರಾಜ್ಯಗಳಿಂದ ಕೋವಿಡ್ ರೋಗಿಗಳಿಗಾಗಿ ಗೊತ್ತುಪಡಿಸಿದ ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು ಮತ್ತು ವಿಳಾಸಗಳನ್ನು ನೀಡುತ್ತದೆ. ಇದನ್ನು ಅಧಿಕೃತ ಸರ್ಕಾರಿ ಮೂಲಗಳಿಂದ ಪಡೆಯಲಾಗುತ್ತದೆ ಎಂದು ಟ್ರೂಕಾಲರ್ ಹೇಳಿದೆ. ಅಲ್ಲದೆ ಈ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ನೀವು ಪಡೆದುಕೊಳ್ಳುವುದರಿಂದ ವೇಗವಾಗಿ ನಿಮ್ಮ ಹತ್ತಿರದ ಆಸ್ಪತ್ರೆಗಳನ್ನು ಸಂಪರ್ಕಿಸಲು ಸಾಧ್ಯವಾಗಲಿದೆ.

ಟ್ವಿಟರ್

ಇನ್ನು ಇತ್ತೀಚಿಗಷ್ಟೇ ಟ್ವಿಟರ್ ಬಳಕೆದಾರರ ಟೈಮ್‌ಲೈನ್‌ಗಳಲ್ಲಿ ಕೋವಿಡ್ -19 ಲಸಿಕೆ ಫ್ಯಾಕ್ಟ್ ಬಾಕ್ಸ್ ಅನ್ನು ಪರಿಚಯಿಸಿತು. ಲಸಿಕೆ ಪಡೆಯಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುವ ಗುರಿಯನ್ನು ಬಾಕ್ಸ್ ಹೊಂದಿದೆ. ಸದ್ಯ ದೇಶದಲ್ಲಿ COVID-19 ವ್ಯಾಕ್ಸಿನೇಷನ್‌ವ್ಯಾಪಕವಾಗಿ ಲಭ್ಯವಾಗುತ್ತಿದ್ದಂತೆ, ದೇಶದಲ್ಲಿನ ಇತ್ತೀಚಿನ ಲಸಿಕೆ ಮಾಹಿತಿಯನ್ನು ಬಳಕೆದಾರರು ತಿಳಿದುಕೊಳ್ಳಬೇಕೆಂದು ಬಯುಸುತ್ತೇವೆ ಎಂದು ಟ್ವೀಟರ್‌ ಹೇಳಿದೆ. ಇನ್ನು ಲಸಿಕೆ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ಸುದ್ದಿಗಳ ಕುರಿತು ಮೂಲಗಳಿಗೆ ಲಿಂಕ್ ಮಾಡುವ ಪ್ರಾಂಪ್ಟ್ ಅನ್ನು ಈ ವಾರ ನಿಮ್ಮ ಟೈಮ್‌ಲೈನ್‌ನಲ್ಲಿ ನೀವು ನೋಡುತ್ತೀರಿ ಎಂದು ಟ್ವಿಟರ್ ಟ್ವೀಟ್‌ನಲ್ಲಿ ತಿಳಿಸಿದೆ.

This News Article Is A Copy Of GIZBOT BUREAU