ಒಪ್ಪೋ K9 5G ಸ್ಮಾರ್ಟ್‌ಫೋನ್‌ ಬಿಡುಗಡೆ! ವಿಶೇಷತೆ ಏನು?

07-05-21 03:05 pm       GIZBOT Mutthuraju H M   ಡಿಜಿಟಲ್ ಟೆಕ್

ಒಪ್ಪೋ ಸಂಸ್ಥೆ ಒಪ್ಪೋ K9 5G ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ.

ಜನಪ್ರಿಯ ಒಪ್ಪೋ ಕಂಪೆನಿ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ಒಪ್ಪೋ K9 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 768G SoC ಪ್ರೊಸೆಸರ್‌ ಅನ್ನು ಹೊಂದಿದೆ. ಜೊತೆಗೆ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಒಳಗೊಂಡಿದೆ.

ಹೌದು, ಒಪ್ಪೋ ಸಂಸ್ಥೆ ಒಪ್ಪೋ K9 5G ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌-ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. 



ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒಪ್ಪೊ K9 5G ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಫುಲ್‌-ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. 91.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 20:9 ಡಿಸ್‌ಪ್ಲೇ ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 410ಪಿಪಿಪಿ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ.



ಪ್ರೊಸೆಸರ್‌

ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 768G SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.



ಕ್ಯಾಮೆರಾ ವಿಶೇಷ

ಒಪ್ಪೋ K9 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.



ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 5, 5G, ಬ್ಲೂಟೂತ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದು ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಒಪ್ಪೋ K9 5G ಸ್ಮಾರ್ಟ್‌ಫೋನ್‌ 8GB RAM + 128GB ಶೇಖರಣಾ ರೂಪಾಂತರದ ಬೆಲೆ ಸಿಎನ್‌ವೈ 1,899 (ಸರಿಸುಮಾರು ರೂ. 21,600), ಮತ್ತು 8GB RAM + 256GB ಶೇಖರಣಾ ಮಾದರಿಯನ್ನು ಸಿಎನ್‌ವೈ 2,199 (ಸರಿಸುಮಾರು 25 ಸಾವಿರ ರೂ.) ಬೆಲೆಯಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಮೇ 11 ರಿಂದ ಕಪ್ಪು ಮತ್ತು ಗ್ರೇಡಿಯಂಟ್ ಬಣ್ಣ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಇದು ಭಾರತದಲ್ಲಿ ಯಾವಾಗ ಲಬ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

(Kannada Copy of  Gizbot Kannada)