ಮೆಸೆಂಜರ್‌ನಲ್ಲಿ ಹೊಸ ಚಾಟ್‌ ಥೀಮ್‌ ಪರಿಚಯಿಸಿದ ಫೇಸ್‌ಬುಕ್‌ !

07-05-21 03:16 pm       GIZBOT Mutthuraju H M   ಡಿಜಿಟಲ್ ಟೆಕ್

ಸಾಮಾಜಿಕ ಜಾಲತಾಣ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ಹೊಸ ಮೆಸೇಜಿಂಗ್ ಫೀಚರ್ಸ್‌ ಗ್ರೂಪ್‌ ಅನ್ನು ಪ್ರಕಟಿಸಿದೆ.

ಸಾಮಾಜಿಕ ಜಾಲತಾಣ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ಹೊಸ ಮೆಸೇಜಿಂಗ್ ಫೀಚರ್ಸ್‌ ಗ್ರೂಪ್‌ ಅನ್ನು ಪ್ರಕಟಿಸಿದೆ. ಇದರಲ್ಲಿ ಎರಡು ಹೊಸ ಚಾಟ್ ಥೀಮ್‌ಗಳು ಕೂಡ ಸೇರಿವೆ. ಹ್ಯಾಂಡ್ಸ್ ಫ್ರೀ ಆಡಿಯೊ ರೆಕಾರ್ಡಿಂಗ್, ನ್ಯೂ ಸೀನ್‌ ಸ್ಟೇಟಸ್‌ ಮತ್ತು ಇನ್ನಷ್ಟು ಫೀಚರ್ಸ್‌ ಸೇರಿವೆ. ಇನ್ನು ಫೇಸ್‌ಬುಕ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಅನ್ನು ಮರ್ಜ್‌ ಮಾಡಿದೆ. ಇದು ಎಲ್ಲಾ ಮೆಸೆಂಜರ್ ಫೀಚರ್ಸ್‌ಗಳನ್ನು ಇನ್‌ಸ್ಟಾಗ್ರಾಮ್‌ಗೆ ಮತ್ತು ಕ್ರಾಸ್ ಪ್ಲಾಟ್‌ಫಾರ್ಮ್ ಮೆಸೇಜಿಂಗ್‌ಗೆ ಸೇರಿಸಿತ್ತು. ಸದ್ಯ ಫೇಸ್‌ಬುಕ್‌ ಮೆಸೆಂಜರ್‌ ಬಳಕೆದಾರರು ಇನ್‌ಸ್ಟಾಗ್ರಾಮ್‌ ಫೀಚರ್ಸ್‌ಗಳನ್ನು ಸಹ ಹೊಂದಿರುತ್ತಾರೆ.

ಹೌದು, ಫೇಸ್‌ಬುಕ್‌ ತನ್ನ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಹೊಸ ಮೆಸೇಜಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈಗ ಈ ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಬಳಕೆದಾರರು ಹೊಸ ಚಾಟ್ ಥೀಮ್‌ಗಳನ್ನು ಬಳಸಬಹುದಾಗಿದೆ. ಇದರಲ್ಲಿ ಸ್ಟಾರ್ ವಾರ್ಸ್ ಮತ್ತು ನೆಟ್‌ಫ್ಲಿಕ್ಸ್ ಸೆಲೆನಾ: ದಿ ಸೀರೀಸ್ ಥೀಮ್‌ ಅನ್ನು ಹೊಂದಿವೆ. ಈ ಹೊಸ ಥೀಮ್ ಅನ್ನು ‘ಥೀಮ್' ಅಡಿಯಲ್ಲಿ ಚಾಟ್ ಸೆಟ್ಟಿಂಗ್‌ಗಳಿಂದ ಸಕ್ರಿಯಗೊಳಿಸಬಹುದು.



ಇನ್ನು ಹೊಸ ಫೀಚರ್ಸ್‌ ಮೂಲಕ ಇನ್‌ಸ್ಟಾಗ್ರಾಮ್ ಬಳಕೆದಾರರು ಈಗ ಡೈರೆಕ್ಟ್‌ ಮೆಸೇಜ್‌ಗಳಲ್ಲಿ ವಿಶ್ಯೂಯಲ್‌ ಉತ್ತರವನ್ನು ಕಳುಹಿಸಬಹುದು. ಈ ಫೀಚರ್ಸ್‌ ಈಗಾಗಲೇ ಸ್ಟೋರಿಗಳಲ್ಲಿ ಲಭ್ಯವಿದೆ. ಬಳಕೆದಾರರು ಮತ್ತೊಂದು ಫೋಟೋ ಅಥವಾ ವೀಡಿಯೊದೊಂದಿಗೆ ಪ್ರತ್ಯುತ್ತರವನ್ನು ಕಳುಹಿಸಲು ಇದು ಅನುಮತಿಸುತ್ತದೆ. ಸದ್ಯ ಈ ಫೀಚರ್ಸ್‌ ಐಒಎಸ್‌ ಮಾರಿಯಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಆಂಡ್ರಾಯ್ಡ್‌ನಲ್ಲಿ ಲಭ್ಯವಾಗಲಿದೆ.



ಇದಲ್ಲದೆ ಮೆಸೆಂಜರ್‌ನಲ್ಲಿ ಆಡಿಯೊ ಮೆಸೇಜ್‌ಗಳನ್ನು ಕಳುಹಿಸುವುದನ್ನು ಫೇಸ್‌ಬುಕ್ ಇದೀಗ ಇನ್ನಷ್ಟು ಸುಲಭಗೊಳಿಸಿದೆ. ನೀವು ಈಗ ಮೈಕ್ರೊಫೋನ್ ಬಟನ್ ಟ್ಯಾಪ್ ಮಾಡಿ ಮತ್ತು ನಿಮ್ಮ ಸಂದೇಶವನ್ನು ಫ್ರೀಯಾಗಿ ರೆಕಾರ್ಡ್ ಮಾಡಬಹುದು. ಈ ಫೀಚರ್ಸ್‌ ಅನ್ನು ಶೀಘ್ರದಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡುವುದಾಗಿ ಫೇಸ್‌ಬುಕ್ ತಿಳಿಸಿದೆ. ಇದರ ಜೊತೆಗೆ ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಸಂದೇಶಗಳನ್ನು ಓದಲಾಗಿದೆಯೇ ಎಂದು ಪರಿಶೀಲಿಸುವ ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ. ಇದರ ಮೂಲಕ ನಿಮ್ಮ ಸಂದೇಶವನ್ನು "ಯಾವಾಗ" ನೋಡಲಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.



ಇನ್ನು ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ, "ಆರ್ಕೈವ್‌ಗೆ ಸ್ವೈಪ್" ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ಸುಲಭವಾಗಿ ಚಾಟ್‌ಗಳನ್ನು ಆರ್ಕೈವ್ ಮಾಡಬಹುದು. ಮೆಸೆಂಜರ್‌ನಲ್ಲಿ ಹೊಸ ‘ಆರ್ಕೈವ್ ಮಾಡಿದ ಚಾಟ್‌ಗಳು' ಫೋಲ್ಡರ್ ಸಹ ಇದೆ. ಆದ್ದರಿಂದ ಬಳಕೆದಾರರು ತಮ್ಮ ಎಲ್ಲಾ ಆರ್ಕೈವ್ ಮಾಡಿದ ಚಾಟ್‌ಗಳನ್ನು ಒಂದೇ ಸ್ಥಳದಲ್ಲಿ ಕಾಣಬಹುದು. ಜೊತೆಗೆ ಏಷ್ಯನ್ ಮತ್ತು ಪೆಸಿಫಿಕ್ ದ್ವೀಪವಾಸಿಗಳ (ಎಪಿಐ) ಸಮುದಾಯವನ್ನು ಪ್ರತಿನಿಧಿಸುವ ಕ್ಯಾಮೆರಾ ಸ್ಟಿಕ್ಕರ್‌ಗಳನ್ನು ಸಹ ಫೇಸ್‌ಬುಕ್ ಹೊರತಂದಿದೆ. ಈ ಸ್ಟಿಕ್ಕರ್‌ಗಳನ್ನು ಮೆಸೆಂಜರ್ ಮತ್ತು ಮೆಸೆಂಜರ್ ನಲ್ಲಿ ಬಳಸಬಹುದಾಗಿದೆ.

(Kannada Copy of  Gizbot Kannada)