ಒಲಾ ಸಂಸ್ಥೆಯ ಈ ನಿರ್ಧಾರಕ್ಕೆ ನೀವು ಭೇಷ್‌ ಎನ್ನಲೇಬೇಕು?

11-05-21 11:24 am       GIZBOT Mutthuraju H M   ಡಿಜಿಟಲ್ ಟೆಕ್

ಓಲಾ ಅಪ್ಲಿಕೇಶನ್ ಬಳಕೆದಾರರು ಶೀಘ್ರದಲ್ಲೇ ಕೆಲವು ಮೂಲಭೂತ ವಿವರಗಳನ್ನು ನೀಡುವ ಮೂಲಕ ಫ್ರೀ ಆಕ್ಸಿಜನ್‌ ಸಾಂದ್ರಕಗಳು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಮೊಬೈಲ್‌ ಆಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಒಲಾ ಕಂಪೆನಿ ಭಾರತದದ ಟ್ಯಾಕ್ಸಿ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ತನ್ನ ಸೇವೆಯಿಂದ ಜನಮನ್ನಣೆ ಗಳಿಸಿರುವ ಒಲಾ ಕಂಪೆನಿ ಕರೊನಾ ಎರಡನೇ ಅಲೆಯ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬಂದಿದೆ. ಸದ್ಯ ರೈಡ್-ಹೇಲಿಂಗ್ ಕಂಪನಿ ಒಲಾ ತನ್ನ ಬಳಕೆದಾರರಿಗೆ ಆಕ್ಸಿಜನ್‌ ಒದಗಿಸುವ ಸೇವೆ ನೀಡಲು ಮುಂದಾಗಿದೆ. ಓಲಾ ಅಪ್ಲಿಕೇಶನ್ ಬಳಕೆದಾರರು ಶೀಘ್ರದಲ್ಲೇ ಕೆಲವು ಮೂಲಭೂತ ವಿವರಗಳನ್ನು ನೀಡುವ ಮೂಲಕ ಫ್ರೀ ಆಕ್ಸಿಜನ್‌ ಸಾಂದ್ರಕಗಳು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಹೌದು, ಜನಪ್ರಿಯ ಒಲಾ ಕಂಪೆನಿ ತನ್ನ ಆಪ್‌ ಬಳಕೆದಾರರಿಗೆ ಉಚಿತ ಆಕ್ಸಿಜನ್‌ ಸಾಂದ್ರಕಗಳನ್ನು ತಲುಪಿಸುವ ಸೇವೆ ನೀಡುವುದಾಗಿ ಘೋಷಿಸಿದೆ. ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಅಗತ್ಯವಾದ ಮಾಹಿತಿ ನೀಡಿ ಆಕ್ಸಿಜನ್‌ ಸಾಂದ್ರಕಗಳಿಗಾಗಿ ಮನವಿ ಮಾಡಿಕೊಂಡರೆ ಮನೆ ಬಾಗಿಲಿಗೆ ಆಕ್ಸಿಜನ್‌ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಓಲಾ ಮೊಬೈಲ್ ಆಪ್ ಮೂಲಕ ಅಗತ್ಯವಿರುವವರಿಗೆ ಉಚಿತ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲು ಓಲಾ ಫೌಂಡೇಶನ್ ಗಿವ್ ಇಂಡಿಯಾದೊಂದಿಗೆ ಪಾಲುದಾರಿಕೆ ಹೊಂದಿದೆ.



ಒಲಾ ಸಂಸ್ಥೆ ತನ್ನ ಬಳಕೆದಾರರಿಗೆ ನೀಡುವ ಆಕ್ಸಿಜನ್‌ ಸೇವೆಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ. ಅಲ್ಲದೆ ಆದರ ಆಕ್ಸಿಜನ್‌ ಸಾಂದ್ರಕವನ್ನು ಸಾಗಣೆ ಮಾಡುವುದಕ್ಕೂ ಸಹ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಪ್ರಕಟಿಸಿದೆ. ಇನ್ನು ಈ ಸೇವೆ ಮುಂದಿನ ವಾರ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ವಾರಗಳಲ್ಲಿ ಭಾರತದಾದ್ಯಂತ ವಿಸ್ತರಿಸಲಿದೆ. ಇದಲ್ಲದೆ ಈ ಸೇವೆಯ ಬಗ್ಗೆ ಟ್ವಿಟ್ಟರ್‌ನ್ಲಿಲ್ಲಿ ಓಲಾ ಸಹ-ಸಂಸ್ಥಾಪಕ ಭಾವೀಶ್ ಅಗರ್ವಾಲ್ "ಈ ಸಮಯದಲ್ಲಿ ನಾವು ಒಗ್ಗೂಡಿ ನಮ್ಮ ಸಮುದಾಯಗಳಿಗೆ ಸಹಾಯ ಮಾಡಬೇಕು. ಅಗತ್ಯವಿರುವವರಿಗೆ ಆಮ್ಲಜನಕ ಸಾಂದ್ರತೆಗಳಿಗೆ ಉಚಿತ ಮತ್ತು ಸುಲಭ ಪ್ರವೇಶವನ್ನು ಒದಗಿಸಲು ಇಂದು ನಾವು @GiveIndia ಸಹಭಾಗಿತ್ವದಲ್ಲಿ O2forIndia ಉಪಕ್ರಮವನ್ನು ಘೋಷಿಸುತ್ತಿದ್ದೇವೆ. @foundation_ola #O2forIndia." ಎಂದು ಟ್ವೀಟ್‌ ಮಾಡಿದ್ದಾರೆ.



ಇನ್ನು ಆಕ್ಸಿಜನ್‌ ಸಿಲಿಂಡರ್‌ ಅಗತ್ಯವಿದ್ದಲ್ಲಿ ಓಲಾ ಅಪ್ಲಿಕೇಶನ್ ಬಳಕೆದಾರರು ಓಲಾ ಅಪ್ಲಿಕೇಶನ್‌ನಲ್ಲಿ ಆಕ್ಸಿಜನ್‌ ಸಾಂದ್ರತೆಗಾಗಿ ರಿಕ್ವೆಸ್ಟ್‌ ಕಳುಹಿಸಬಹುದು. ಬಳಕೆದಾರರ ವಿನಂತಿಯನ್ನು ಮೌಲ್ಯೀಕರಿಸಿದ ನಂತರ, ಓಲಾ ಆಕ್ಸಿಜನ್‌ ಸಾಂದ್ರತೆಯನ್ನು ಬಳಕೆದಾರರ ಮನೆ ಬಾಗಿಲಿಗೆ ತಲುಪಿಸುತ್ತದೆ. ಅಲ್ಲದೆದ ಬಳಕೆದಾರರಿಗೆ ಅಗತ್ಯವಿಲ್ಲದಿದ್ದಾಗ ಅದನ್ನು ವಾಪಾಸ್‌ ಕೂಡ ಪಡೆದುಕೊಳ್ಳಲಿದೆ. ಸದ್ಯ ಓಲಾ ಬೆಂಗಳೂರಿನಲ್ಲಿ ಆರಂಭಿಕ 500 ಆಮ್ಲಜನಕ ಸಾಂದ್ರಕಗಳೊಂದಿಗೆ ಸೇವೆಯನ್ನು ಹೊರತರುತ್ತದೆ.



ಇದಲ್ಲದೆ ಓಲಾ ಮತ್ತು ಗಿವ್‌ಇಂಡಿಯಾ ಮುಂಬರುವ ವಾರಗಳಲ್ಲಿ ದೇಶಾದ್ಯಂತ 10,000 ಯುನಿಟ್‌ಗಳವರೆಗೆ ಸಾಂದ್ರತೆಯನ್ನು ನೀಡುವುದಕ್ಕೆ ಸಿದ್ದತೆ ಕೂಡ ನಡೆಸಿದೆ. ಈ ಮೂಲಕ ದೆಸದಲ್ಲಿ ಉಂಟಾಗಿರುವ ಆಕ್ಸಿಜನ್‌ ಸಿಲಿಂಡರ್‌ ಕೊರತೆ ನೀಗಿಸುವ ನಿಟ್ಟಿನಲ್ಲಿ ದೃಡ ಹೆಜ್ಜೆಯನ್ನು ಒಲಾ ಸಂಸ್ಥೆ ಇಟ್ಟಿದೆ. ಅಷ್ಟೇ ಅಲ್ಲ ತನ್ನ ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಮತ್ತು ಅವಲಂಬಿತರಿಗೆ COVID-19 ವ್ಯಾಕ್ಸಿನೇಷನ್ ವೆಚ್ಚವನ್ನು ಸಹ ಓಲಾ ಭರಿಸಿದೆ.



ಒಲಾ ಸಂಸ್ಥೆ ಮಾತ್ರವಲ್ಲದೆ ರೈಡ್-ಹೇಲಿಂಗ್ ಮತ್ತು ಬೈಕು-ಟ್ಯಾಕ್ಸಿ ಕಂಪೆನಿಗಳಾದ ಉಬರ್ ಮತ್ತು ರಾಪಿಡೊ ಸಹ ಸಾಂಕ್ರಾಮಿಕ ರೋಗದಲ್ಲಿ ತನ್ನ ಬಳಕೆದಾರರಿಗೆ ಸಹಾಯ ಮಾಡಲು ಮತ್ತು ಸಹಾಯ ಮಾಡಲು ಮುಂದಾಗಿವೆ. ಉಬರ್ ಮತ್ತು ರಾಪಿಡೊ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಮತ್ತು ಅಲ್ಲಿಂದ ಅರ್ಹ ಬಳಕೆದಾರರಿಗೆ ಉಚಿತ ಸವಾರಿಗಳನ್ನು ನೀಡುತ್ತವೆ. ಉಬರ್ ಬಳಕೆದಾರರು ತಮ್ಮ ಉಬರ್ ಅಪ್ಲಿಕೇಶನ್‌ನ ವ್ಯಾಲೆಟ್ ವಿಭಾಗದಲ್ಲಿ ಪ್ರೋಮೋ ಕೋಡ್ 10 ಎಂ 21 ವಿ ಅನ್ನು ಸೇರಿಸಬಹುದು. ಬಳಕೆದಾರರು ಕೋಡ್ ಅನ್ನು ನಮೂದಿಸಿದ ನಂತರ, ಅವರ ಸವಾರಿಗೆ ಪ್ರೋಮೋ ಸೇರಿಸಲಾಗುತ್ತದೆ.

(Kannada Copy of  Gizbot Kannada)