Instagram: ಪ್ರೊಫೈಲ್‌ ಸೆಟ್ಟಿಂಗ್ಸ್‌ನಲ್ಲಿ ಹೊಸ ಫೀಚರ್ಸ್‌ ಸೇರ್ಪಡೆ!

13-05-21 04:50 pm       GIZBOT Mantesh   ಡಿಜಿಟಲ್ ಟೆಕ್

ಇನ್‌ಸ್ಟಾಗ್ರಾಮ್‌ ನಿಮ್ಮ ಪ್ರೊಫೈಲ್‌ಗಳಿಗೆ ಸರ್ವನಾಮಗಳನ್ನು ಸೇರಿಸಲು ಅನುವು ಮಾಡಿಕೊಡುವ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಸೇರಿದೆ. ಬಳಕೆದಾರರ ನೆಚ್ಚಿನ ಫೋಟೋ ಶೇರಿಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಇನ್‌ಸ್ಟಾಗ್ರಾಮ್‌ ನಿಮ್ಮ ಪ್ರೊಫೈಲ್‌ಗಳಿಗೆ ಸರ್ವನಾಮಗಳನ್ನು ಸೇರಿಸಲು ಅನುವು ಮಾಡಿಕೊಡುವ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಹೌದು, ಇನ್‌ಸ್ಟಾಗ್ರಾಮ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗೆ ಸರ್ವನಾಮಗಳನ್ನು ಸೇರಿಸಲು ಅನುವು ಮಾಡಿಕೊಡಲಿದೆ. ಇದೀಗ ನೀವು ನಿಮ್ಮ ಫ್ರೊಫೈಲ್‌ಗೆ ನಾಲ್ಕು ಸರ್ವನಾಮಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ಇನ್‌ಸ್ಟಾಗ್ರಾಮ್ ಬಳಕೆದಾರ ಹೆಸರಿನ ಪಕ್ಕದಲ್ಲಿ ಕಾಣಿಸುತ್ತದೆ.



ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಇದೀಗ ಸರ್ವನಾಮಗಳನ್ನು ಸೇರಿಸಬಹುದಾಗಿದೆ. ಬಳಕೆದಾರರು ತಮ್ಮ ಸರ್ವನಾಮಗಳನ್ನು ತಮ್ಮ ಪ್ರೊಫೈಲ್‌ನಲ್ಲಿ ಪಬ್ಲಿಕ್‌ ಆಗಿ ಕಾಣುವಂತೆ ಇಲ್ಲವೇ ನಿಮ್ಮ ಸ್ನೇಹಿತರಿಗೆ ಮಾತ್ರ ಕಾಣುವಂತೆ ಮಾಡುವ ಅವಕಾಶವನ್ನು ಸಹ ಒಳಗೊಂಡಿದೆ. ಇನ್‌ಸ್ಟಾಗ್ರಾಮ್‌ ತಮ್ಮ ಬಳಕೆದಾರರ ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ಗೆ ಸೇರಿಸಲು ಆಯ್ಕೆ ಮಾಡಬಹುದಾದ ವಿಭಿನ್ನ ಸರ್ವನಾಮಗಳನ್ನು ನೀಡುತ್ತದೆ. ಇನ್‌ಸ್ಟಾಗ್ರಾಮ್ ಒದಗಿಸುವ ಆಯ್ಕೆಗಳ ಡೀಫಾಲ್ಟ್ ಪಟ್ಟಿಯಲ್ಲಿ ಲಭ್ಯವಿಲ್ಲದ ಸರ್ವನಾಮಗಳನ್ನು ಸೇರಿಸಲು ಬಳಕೆದಾರರಿಗೆ ಫಾರ್ಮ್ ಅನ್ನು ಭರ್ತಿ ಮಾಡಲು ಅನುಮತಿಸುವ ಹೆಚ್ಚುವರಿ ಆಯ್ಕೆಯನ್ನು ಸಹ ನೀಡಿದೆ.



ಇನ್ನು ಈ ಫೀಚರ್ಸ್‌ ಲಭ್ಯವಿರುವ ನಿಖರವಾದ ಪ್ರದೇಶಗಳ ಬಗ್ಗೆ ಇನ್‌ಸ್ಟಾಗ್ರಾಮ್ ಇನ್ನೂ ದೃಡೀಕರಿಸಿಲ್ಲ. ಆದರೆ ಈ ಹೊಸ ಫೀಚರ್ಸ್‌ ಈಗಾಗಲೇ "ಕೆಲವು ದೇಶಗಳಲ್ಲಿ" ಲಭ್ಯವಿದೆ ಎಂದು ಹೇಳಲಾಗಿದೆ. ಒಂದು ವೇಳೆ ಇದು ನಿಮಗೂ ಕೂಡ ಲಭ್ಯವಾದರೆ ನೀವು ‘ಪ್ರೊಫೈಲ್ ಎಡಿಟ್‌ ' ವಿಭಾಗದ ಅಡಿಯಲ್ಲಿ ಹೊಸ ‘ಪ್ರೊನೌನ್ಸ್‌ ಟ್ಯಾಬ್' ಅನ್ನು ನೋಡಲು ಸಾಧ್ಯವಾಗುತ್ತದೆ. ನಂತರ ನೀವು ಬಯಸುವ ಸರ್ವನಾಮಗಳನ್ನು ಟೈಪ್ ಮಾಡಬಹುದು ಮತ್ತು ಲಭ್ಯವಿರುವ ಆಯ್ಕೆಗಳ ಪಟ್ಟಿಯಿಂದ ಇನ್‌ಸ್ಟಾಗ್ರಾಮ್ ಸರ್ವನಾಮಗಳನ್ನು ಸೂಚಿಸುತ್ತದೆ. ನಿಮ್ಮ ಪ್ರೊಫೈಲ್‌ನಲ್ಲಿ ಗೋಚರಿಸುವ ನಾಲ್ಕು ಸರ್ವನಾಮಗಳನ್ನು ಆಯ್ಕೆ ಮಾಡಲು ಇನ್‌ಸ್ಟಾಗ್ರಾಮ್‌ ನಿಮಗೆ ಅನುಮತಿಸುತ್ತದೆ.



ಇನ್‌ಸ್ಟಾಗ್ರಾಮ್‌ನ ಈ ಹೊಸ ಫೀಚರ್ಸ್‌ ಬಳಕೆದಾರರನ್ನು ತಮ್ಮ ಬಯೋಸ್‌ನ ಭಾಗವಾಗಿಸುವ ಬದಲು ಸರ್ವನಾಮಗಳನ್ನು ನೇರವಾಗಿ ತಮ್ಮ ಪ್ರೊಫೈಲ್‌ಗಳಿಗೆ ಸೇರಿಸಲು ಆಯ್ಕೆ ಮಾಡಲು ಅನುಮತಿಸುತ್ತದೆ. ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ಸರ್ವನಾಮಗಳನ್ನು ಸೇರಿಸಲು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸಹ ಇದೇ ರೀತಿಯ ಫೀಚರ್ಸ್‌ ಪರಿಚಯಿಸಿರೋದನ್ನು ನಾವು ಗಮನಿಸಬಹುದಾಗಿದೆ.

(Kannada Copy of  Gizbot Kannada)