ರೆಡ್ಮಿ ನೋಟ್ 10S ಫೋನ್‌ ಬದಲಿಗೆ ಈ 5 ಫೋನ್‌ಗಳಲ್ಲಿ ಒಂದನ್ನು ಖರೀದಿಸಬಹುದು!

14-05-21 04:43 pm       GIZBOT Mantesh   ಡಿಜಿಟಲ್ ಟೆಕ್

ಶಿಯೋಮಿ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್‌ ಬಜೆಟ್‌ ಪ್ರೈಸ್‌ಟ್ಯಾಗ್‌ನಿಂದ ಗ್ರಾಹಕರ ಗಮನ ಸೆಳೆದಿದೆ.

ಜನಪ್ರಿಯ ಶಿಯೋಮಿ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್‌ ಬಜೆಟ್‌ ಪ್ರೈಸ್‌ಟ್ಯಾಗ್‌ನಿಂದ ಗ್ರಾಹಕರ ಗಮನ ಸೆಳೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಇತ್ತೀಚಿಗಿನ ಟ್ರೆಂಡಿಂಗ್‌ ಫೀಚರ್ಸ್‌ಗಳಾದ 64 ಮೆಗಾಪಿಕ್ಸೆಲ್, ಮೀಡಿಯಾ ಟೆಕ್ ಹಿಲಿಯೊ G95 SoC ಪ್ರೊಸೆಸರ್, 33W ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಹಾಗೂ ಅಧಿಕ ರೆಸಲ್ಯೂಶನ್ ಇರುವ ಡಿಸ್‌ಪ್ಲೇಗಳಂತಹ ಫೀಚರ್ಸ್‌ಗಳನ್ನು ಹೊಂದಿರುವುದು ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸಿಕೊಂಡಿದೆ.

ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್‌ 15,000ರೂ.ಗಳ ಬೆಲೆಯಲ್ಲಿ ಕಾಣಸಿಕೊಂಡಿದ್ದು, ಫೋನ್‌ ಪ್ರಿಯರನ್ನು ಆಕರ್ಷಿಸಿದೆ. ಆದರೆ ಬಜೆಟ್‌ ದರದಲ್ಲಿ ಈ ಫೋನಿನಂತೆ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದ ಇತರೆ ಬ್ರ್ಯಾಂಡ್‌ನ ಕೆಲವು ಫೋನ್‌ಗಳು ಈ ಫೋನಿಗೆ ಪರ್ಯಾಯವಾಗಿ ಗುರುತಿಸಿಕೊಂಡಿವೆ. ಹಾಗಾದರೇ ಸುಮಾರು 15,000ರೂ. ಒಳಗೆ ಲಭ್ಯವಿರುವ ರೆಡ್ಮಿ ನೋಟ್ 10S ಫೋನಿಗೆ ಪರ್ಯಾಯ ಎನಿಸಿರುವ ಫೋನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.



ರಿಯಲ್‌ಮಿ ನಾರ್ಜೊ 30 ಪ್ರೊ

ರಿಯಲ್‌ಮಿ ನಾರ್ಜೊ 30 ಪ್ರೊ ಫೋನ್ 20: 9 ಆಕಾರ ಅನುಪಾತದೊಂದಿಗೆ 6.5-ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 120Hz ರೀಫ್ರೇಶ್ ರೇಟ್ ಅನ್ನು ಹೊಂದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 800 ಯು ಚಿಪ್‌ಸೆಟ್ ಹೊಂದಿದ್ದು, 8 ಜಿಬಿ RAM ಮತ್ತು 128 ಜಿಬಿ ಆನ್‌ಬೋರ್ಡ್ ಸಂಗ್ರಹದೊಂದಿಗೆ ಜೋಡಿಯಾಗಿದೆ. ಅಲ್ಲದೇ 48 ಮೆಗಾ ಪಿಕ್ಸೆಲ್ ವೈಡ್ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್, ಪವರ್ ಬಟನ್ ಫಿಂಗರ್ಪ್ರಿಂಟ್ ರೀಡರ್ ಆಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ. ಇದು 5ಜಿ ಬೆಂಬಲವನ್ನು ಹೊಂದಿದೆ. ಸ್ಟ್ಯಾಂಡರ್ಡ್ ವೇರಿಯಂಟ್ ದರವು 16,999ರೂ.ಗಳಿಂದ ಪ್ರಾರಂಭವಾಗುವ ಬೆಲೆಗೆ ಲಭ್ಯವಿದೆ.



ರೆಡ್ಮಿ ನೋಟ್ 10 ರೆಡ್ಮಿ ನೋಟ್

10 ಫೋನ್ 6.43-ಇಂಚಿನ ಪೂರ್ಣ-ಹೆಚ್‌ಡಿ + (1,080 x 2,400 ಪಿಕ್ಸೆಲ್ ರೆಸಲ್ಯೂಶನ್) ಸೂಪರ್ ಅಮೋಲೆಡ್ ಪ್ಯಾನಲ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 678 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 6 ಜಿಬಿ RAM ಮತ್ತು 128 ಜಿಬಿ ಯುಎಫ್‌ಎಸ್ 2.2 ಸಂಗ್ರಹದೊಂದಿಗೆ ಇರುತ್ತದೆ. ಫೋನ್ ಆಂಡ್ರಾಯ್ಡ್ 11 ಅನ್ನು MIUI 12 ಕಸ್ಟಮ್ ರಾಮ್ನೊಂದಿಗೆ ಚಾಲನೆ ಮಾಡುತ್ತದೆ. ಹಾಗೆಯೇ ರೆಡ್ಮಿ ನೋಟ್ 10 ಕ್ವಾಡ್ ಕ್ಯಾಮೆರಾ ಶ್ರೇಣಿಯನ್ನು 48 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿದೆ. 5,000mAh ಬ್ಯಾಟರಿ ಬಲ ಸಹ ಇದೆ. ಈ ಫೋನಿನ ಬೇಸ್ ವೇರಿಯಂಟ್ ದರವು 11,999ರೂ.ಆಗಿದೆ.



ಸ್ಯಾಮ್‌ಸಂಗ್ ಗ್ಯಾಲಕ್ಸಿ M31

ಸ್ಯಾಮ್‌ಸಂಗ್ ಗ್ಯಾಲಕ್ಸಿ M31 ಫೋನ್ 6.4-ಇಂಚಿನ ವಾಟರ್-ಡ್ರಾಪ್ ನಾಚ್ ಶೈಲಿಯ ಅಮೋಲೆಡ್ ಪ್ರದರ್ಶನವನ್ನು ಹೊಂದಿದೆ. ಜೊತೆಗೆ ಎಕ್ಸಿನೋಸ್ 9611 ಚಿಪ್‌ಸೆಟ್ ಆಗಿದ್ದು, ಇದರೊಂದಿಗೆ 6 ಜಿಬಿ RAM ಮತ್ತು 128 ಜಿಬಿ ಆಂತರಿಕ ಸಂಗ್ರಹವಿದೆ. ಇದು ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು 64 ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ನೀಡುತ್ತದೆ, ಇದರೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 5 ಮೆಗಾಪಿಕ್ಸೆಲ್ ಆಳ ಸಂವೇದಕವಿದೆ. ಸೆಲ್ಫಿಗಳಿಗಾಗಿ, 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. 6,000mAh ಬ್ಯಾಟರಿ ಹೊಂದಿದೆ. ಆರಂಭಿಕ ಬೆಲೆ 13,999 ರೂ.ಗಳು.



ಪೊಕೊ X3

ಪೊಕೊ X3 ಫೋನ್ 6.67-ಇಂಚಿನ ಫುಲ್‌ ಹೆಚ್‌ಡಿ + ಡಿಸ್ಪ್ಲೇ ಇದ್ದು, 1,080 x 2,340 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಪ್ರದರ್ಶನವು 120Hz ನ ಸ್ಕ್ರೀನ್ ರಿಫ್ರೆಶ್ ದರವನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732 ಜಿ SoC ಇರುತ್ತದೆ, ಇದು 6GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಯಾಗಿದೆ. ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಆಗಿದೆ. ಮುಂಭಾಗದಲ್ಲಿ 20 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಇದು 6,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಬೆಲೆಯು 14,999 ರೂ.



ಪೊಕೊ X3 ಪ್ರೊ

ಪೊಕೊ X3 ಪ್ರೊ ಫೋನ್ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 20: 9 ರ ಅನುಪಾತದೊಂದಿಗೆ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಡಿಸ್‌ಪ್ಲೇಯು 120Hz ನ ರಿಫ್ರೆಶ್ ದರವನ್ನು ಹೊಂದಿದೆ. ಈ ಪೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 860 ಪ್ರೊಸೆಸರ್ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 8 ಜಿಬಿ ವರೆಗೆ RAM ಆಯ್ಕೆ ಸಹ ಇದೆ. ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಆಗಿದೆ. ಮುಂದೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡುತ್ತದೆ. ಜೊತೆಗೆ 5,160mAh ಬ್ಯಾಟರಿಯನ್ನು ಒಳಗೊಂಡಿದೆ. ಆರಂಭಿಕ ಬೆಲೆಯು 18,999 ರೂ.(ರೆಡ್ಮಿ ನೋಟ್ 10s ಗಿಂತ ಬೆಲೆ ದುಬಾರಿ ಅನಿಸಿದರು ಆಕರ್ಷಕ ಫೀಚರ್ಸ್‌ ಹೊಂದಿದೆ)

(Kannada Copy of  Gizbot Kannada)