ನಿಮ್ಮ ವಾಟ್ಸಾಪ್‌ ಖಾತೆಯನ್ನು ಖಾಯಂ ಆಗಿ ಡಿಲೀಟ್ ಮಾಡಲು ಹೀಗೆ ಮಾಡಿ!

25-05-21 03:53 pm       GIZBOT Mantesh   ಡಿಜಿಟಲ್ ಟೆಕ್

ವಾಟ್ಸಾಪ್‌ ತಾಣವು ಹೊಸ ಖಾತೆ ರಚಿಸುವ ಜೊತೆಗೆ ಇರುವ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವ ಆಯ್ಕೆಯನ್ನು ಹೊಂದಿದೆ.

ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರು ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್‌ ಆಗಿದ್ದು, ಹೆಚ್ಚಿನ ಸಮಯವನ್ನು ಈ ಪ್ಲಾಟ್‌ಫಾರ್ಮ್ ಗಳಲ್ಲಿ ವ್ಯಯಸುತ್ತಾರೆ. ಆ ಪೈಕಿ ಫೇಸುಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಆಪ್‌ಗಳು ಹೆಚ್ಚು ಮೋಡಿ ಮಾಡಿವೆ. ಇನ್‌ಸ್ಟಂಟ್ ಮೆಸೆಜಿಂಗ್ ಆಪ್ ವಾಟ್ಸಾಪ್‌ ಟೆಕ್ಟ್ಸ್‌, ವಿಡಿಯೋ, ಫೋಟೊ, ಫೈಲ್‌ ಶೇರ್ ಸೇರಿದಂತೆ ಹಲವು ಉಪಯುಕ್ತ ಆಯ್ಕೆಗಳನ್ನು ಅಳವಡಿಸಿಕೊಂಡು ಜನಪ್ರಿಯತೆ ಗಳಿಸಿದೆ. ಆದರೆ ಇತ್ತೀಚಿಗೆ ಹೊಸ ಪ್ರೈವಸಿ ನೀತಿಯಿಂದಾಗಿ ಹಿನ್ನಡೆ ಕಂಡಿದೆ. ಈ ತಾಣವು ಹೊಸ ಖಾತೆ ರಚಿಸುವ ಜೊತೆಗೆ ಇರುವ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವ ಆಯ್ಕೆಯನ್ನು ಹೊಂದಿದೆ.



ಹೌದು, ಸ್ಮಾರ್ಟ್‌ಪೋನ್ ಹೊಂದಿರುವ ಪ್ರತಿಯೊಬ್ಬರು ಮೊಬೈಲ್‌ನಲ್ಲಿಯೂ ಒಂದಿಲ್ಲೊಂದು ಸಾಮಾಜಿಕ ಜಾಲತಾಣದ ಆಪ್‌ ಇದ್ದೆ ಇರುತ್ತದೆ. ಅದರಲ್ಲಿ ವಾಟ್ಸಾಪ್, ಫೇಸ್‌ಬುಕ್ ಹೆಚ್ಚು ಬಳಕೆ ಮಾಡುವ ಆಪ್‌ಗಳಾಗಿ ಗುರುತಿಸಿಕೊಂಡಿವೆ. ಹಲವು ಸಾಧಕಗಳನ್ನು ಒಳಗೊಂಡಿರುವ ಈ ವಾಟ್ಸಾಪ್‌ ಕೆಲವೊಮ್ಮೆ ಕೆಲವು ಬಳಕೆದಾರರಿಗೆ ಕಿರಿಕಿರಿ ಎನಿಸಿರುತ್ತದೆ. ಮತ್ತೆ ಕೆಲವರು ಖಾಯಂ ಆಗಿ ವಾಟ್ಸಾಪ್‌ ಖಾತೆಯನ್ನೇ ಡಿಲೀಟ್ ಮಾಡಿ ಬಿಡುವ ಯೋಚನೆ ಮಾಡಿರುತ್ತಾರೆ. ಆದರೆ ಶಾಶ್ವತವಾಗಿ ಅಕೌಂಟ್ ಡಿಲೀಟ್ ಮಾಡುವುದು ಹೇಗೆ ಎಂದು ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಈ ಲೇಖನದಲ್ಲಿ ವಾಟ್ಸಾಪ್‌ ಖಾತೆಯನ್ನು ಖಾಯಂ ಆಗಿ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ



ವಾಟ್ಸಾಪ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿರಿ:

* ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ

* ನಂತರ ಬಲ ಭಾಗದ ಕಾರ್ನರ್‌ನಲ್ಲಿ ಕಾಣಿಸುವ ಮೂರು ಡಾಟ್‌ಗಳ ಮೆನು ಕ್ಲಿಕ್ ಮಾಡಿ

* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿರಿ

* ಆನಂತರ ಅಕೌಂಟ್ಸ್‌ ಆಯ್ಕೆಯನ್ನು ಕ್ಲಿಕ್ ಮಾಡಿರಿ

* ಡಿಲೀಟ್ ಮೈ ಅಕೌಂಟ್ ಆಯ್ಕೆ ಸೆಲೆಕ್ಟ್ ಮಾಡಿರಿ

* ಡಿಲೀಟ್ ಮಾಡುವ ಮುನ್ನ ಡಿಲೀಟ್ ಮಾಡುತ್ತಿರುವ ಬಗ್ಗೆ ಕಾರಣ ಕೇಳುತ್ತದೆ.

ವಾಟ್ಸಾಪ್‌ ಖಾತೆಯನ್ನು ಖಾಯಂ ಆಗಿ ಡಿಲೀಟ್ ಮಾಡುವ ಮುನ್ನ ನಿಮಗೆ ಅಗತ್ಯ ಎನಿಸುವ ವಾಟ್ಸಾಪ್‌ ಚಾಟ್‌ಗಳ ಬ್ಯಾಕ್‌ಅಪ್ ಪಡೆಯುವುದು ಸೂಕ್ತ. ನಿರ್ದಿಷ್ಟ ಹಂತಗಳನ್ನು ಅನುಸರಿಸುವ ಮೂಲಕ ಆಯ್ದ ಚಾಟ್‌ಗಳ ಮೀಡಿಯಾ ಸೇರಿದಂತೆ ವೈಯಕ್ತಿಕ ಚಾಟ್‌ಗಳನ್ನು ನೀವು ಎಕ್ಸ್‌ಪೋರ್ಟ್ ಮಾಡಬಹುದು.



ವಾಟ್ಸಾಪ್ ಚಾಟ್‌ ಎಕ್ಸ್‌ಪೋರ್ಟ್ ಮಾಡಲು ಹೀಗೆ ಮಾಡಿ:

* ನೀವು ಎಕ್ಸ್‌ಪೋರ್ಟ್ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ.

* ನಂತರ, ಬಲಗೈ ಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.

* ತದ ನಂತರ, ಮುಂದಿನ ಮೋರ್ ಆಯ್ಕೆ ಟ್ಯಾಪ್ ಮಾಡಿ,

* ಆ ನಂತರ ಅಲ್ಲಿ ಕಾಣಿಸುವ ಎಕ್ಸ್‌ಪೋರ್ಟ್‌ ಚಾಟ್‌ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

* ವಿತ್ ಮೀಡಿಯಾ ಅಥವಾ ವಿತ್ಔಟ್‌ ಮೀಡಿಯಾ ಆಯ್ಕೆಯಲ್ಲಿ ಒಂದನ್ನು ಸೆಲೆಕ್ಟ್ ಮಾಡಿರಿ

* ಇದು ಗೂಗಲ್‌ ಡ್ರೈವ್, ಜಿ-ಮೇಲ್ ಅಥವಾ ಇತರ ಶೇಖರಣಾ ಅಪ್ಲಿಕೇಶನ್‌ಗಳಿಗೆ ಚಾಟ್ ಅನ್ನು ಎಕ್ಸ್‌ಪೋರ್ಟ್‌ ಮಾಡುವ ಆಯ್ಕೆಯನ್ನು ನೀಡುತ್ತದೆ.

(Kannada Copy of  Gizbot Kannada)