ಸ್ಯಾಮ್‌ಸಂಗ್‌ ಸಂಸ್ಥೆಯಿಂದ ಹೊಸ ಗ್ಯಾಲಕ್ಸಿ ಟ್ಯಾಬ್‌ A7 ಲೈಟ್‌ ಅನಾವರಣ!

28-05-21 03:55 pm       GIZBOT Mutthuraju H M   ಡಿಜಿಟಲ್ ಟೆಕ್

ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ ಅನ್ನು ಹೊಸ "ಗೋ-ಟು ಆಪ್ಶನ್‌" ಎಂದು ಅನಾವರಣಗೊಳಿಸಲಾಗಿದೆ.

ದಕ್ಷಿಣ ಕೋರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಸಂಸ್ಥೆ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಲ್ಲೂ ತನ್ನ ಕಮಾಲ್‌ ತೋರಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ ಟ್ಯಾಬ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಲವು ಆಕರ್ಷಕ ಟ್ಯಾಬ್‌ಗಳನ್ನು ಪರಿಚಯಿಸಿರುವ ಸ್ಯಾಮ್‌ಸಂಗ್‌ ಇದೀಗ ಹೊಸ ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ ಅನ್ನು ಹೊಸ "ಗೋ-ಟು ಆಪ್ಶನ್‌" ಎಂದು ಅನಾವರಣಗೊಳಿಸಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಹೊಸ ಗ್ಯಾಲಕ್ಸಿ ಟ್ಯಾಬ್‌ A7 ಲೈಟ್‌ ಅನ್ನು ಬಿಡುಗಡೆ ಮಾಡಿದೆ. ಇದು ಹೆಸರೇ ಸೂಚಿಸುವಂತೆ, ಗ್ಯಾಲಕ್ಸಿ ಟ್ಯಾಬ್ A7 ಲೈಟ್ ಮೂಲ ಗ್ಯಾಲಕ್ಸಿ ಟ್ಯಾಬ್ A7 ನ ವಾಟರ್‌ ಡೌನ್‌ನ ಆವೃತ್ತಿಯಾಗಿದೆ. ಇನ್ನು ಈ ಹೊಸ ಟ್ಯಾಬ್ಲೆಟ್ ಮೆಟಲ್‌ ಕವರ್‌ ಮತ್ತು ಡಾಲ್ಬಿ ಅಟ್ಮೋಸ್ ಮತ್ತು 64 ಜಿಬಿ ವರೆಗೆ ಡ್ಯುಯಲ್ ಸ್ಪೀಕರ್‌ಗಳಂತಹ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದ್ರೆ ಗ್ಯಾಲಕ್ಸಿ ಟ್ಯಾಬ್‌ A7 ಲೈಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.



ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A7 ಲೈಟ್‌ ಡಿಸ್‌ಪ್ಲೇ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A7 ಲೈಟ್ 1,340x800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 8.7-ಇಂಚಿನ WXGA + (ಗಳು) ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 15:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇ 81.25 % ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಒಳಗೊಂಡಿದೆ.



ಪ್ರೊಸೆಸರ್‌

ಈ ಟ್ಯಾಬ್ಲೆಟ್ ಮೀಡಿಯಾ ಟೆಕ್ ಹೆಲಿಯೊ P22T SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಒನ್ ಯುಐ ಕೋರ್ 3.1 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 3GBRAM ಮತ್ತು 32GB ಹಾಗೂ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿವೆ. ಇದು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1 ಟಿಬಿ ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.



ಕ್ಯಾಮೆರಾ ವಿಶೇಷ

ಗ್ಯಾಲಕ್ಸಿ ಟ್ಯಾಬ್ A7 ಲೈಟ್ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್‌ ಜೂಮ್‌ ಮತ್ತು ಆಟೋ ಫ್ಲ್ಯಾಶ್‌ ಅನ್ನು ಹೊಂದಿದೆ.



ಬ್ಯಾಟರಿ ಮತ್ತು ಇತರೆ

ಗ್ಯಾಲಕ್ಸಿ ಟ್ಯಾಬ್ A7 ಲೈಟ್‌ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ ಎಲ್ ಟಿಇ, ವೈ-ಫೈ 802.11 ಎಸಿ, ಬ್ಲೂಟೂತ್ ವಿ 5, ಜಿಪಿಎಸ್, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇನ್ನು ಈ ಟ್ಯಾಬ್ಲೆಟ್ ಡಾಲ್ಬಿ ಅಟ್ಮೋಸ್ ಬೆಂಬಲಿತ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಬರುತ್ತದೆ.



ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A7 ಲೈಟ್ ಬೆಲೆ ಜಿಬಿಪಿ 149 (ಸುಮಾರು 15,300 ರೂ.) ನಿಂದ ಪ್ರಾರಂಭವಾಗುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A7 (ಎಲ್‌ಟಿಇ) ಮಾದರಿಯೂ ಇದೆ, ಇದರ ಬೆಲೆ ಜಿಬಿಪಿ 179 (ಸರಿಸುಮಾರು ರೂ. 18,400). ಇನ್ನು ಈ ಟ್ಯಾಬ್ಲೆಟ್ ಗ್ರೇ ಮತ್ತು ಸಿಲ್ವರ್ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇದು ಇದೇ ಜೂನ್ 18 ರಿಂದ ಯುಕೆ ನಲ್ಲಿ ಮಾರಾಟವಾಗಲಿದೆ. ಆದರೆ, ಭಾರತದಲ್ಲಿ ಇದು ಯಾವಾಗ ಲಾಂಚ್‌ ಆಗಲಿದೆ ಎಂಬುದರ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ.

(Kannada Copy of  Gizbot Kannada)