ಪಿಎಫ್ ಖಾತೆದಾರರು ಈ ಸುದ್ದಿ ಓದಲೇಬೇಕು? ಜೂನ್ 1 ರಿಂದ ಜಾರಿಯಾಗಲಿದೆ ಹೊಸ ನಿಯಮ?

31-05-21 02:54 pm       GIZBOT Mutthuraju H M   ಡಿಜಿಟಲ್ ಟೆಕ್

ನೀವು ನಿಮ್ಮ ಖಾತೆಯನ್ನು ಆಧಾರ್ ಅಥವಾ ಯುಎಎನ್‌ನೊಂದಿಗೆ ಲಿಂಕ್‌ ಮಾಡಬೇಕೆಂದು ಹೇಳಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ ಉದ್ಯೋಗಿಗಳ ಪಾಲಿಗೆ ಕಷ್ಟ ಕಾಲದಲ್ಲಿ ಆರ್ಥಿಕ ನೆರವನ್ನು ನೀಡಲಿದೆ. ಸದ್ಯ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಇಪಿಎಫ್‌ಒ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಇನ್ನು ಈ ಹೊಸ ನಿಯಮವು ಪಿಎಫ್ ಖಾತೆಯಲ್ಲಿ ಅಂದರೆ ಜೂನ್ 1, 2021 ರಿಂದ ಅನ್ವಯವಾಗಲಿದೆ. ಈ ಹೊಸ ನಿಯಮದ ಅನ್ವಯ ನೀವು ನಿಮ್ಮ ಖಾತೆಯನ್ನು ಆಧಾರ್ ಅಥವಾ ಯುಎಎನ್‌ನೊಂದಿಗೆ ಲಿಂಕ್‌ ಮಾಡಬೇಕೆಂದು ಹೇಳಿದೆ.

ಹೌದು, ಭವಿಷ್ಯ ನಿಧಿ ಸಂಸ್ಥೆ ಹೊಸ ನಿರ್ಧಾರವನ್ನು ಕೈ ಗೊಂಡಿದೆ. ಫಿಎಫ್‌ ಖಾತೆ ಆಧಾರ್‌ ಅಥವಾ ಯುಎಎನ್‌ ಜೊತೆಗೆ ಲಿಂಕ್‌ ಆಗಿರಬೇಕೆಂದು ಹೇಳಿದೆ. ಒಂದು ವೇಳೆ ಲಿಂಕ್‌ ಮಾಡುವಲ್ಲಿ ವಿಫಲವಾದರೆ ನಿಮ್ಮ ಖಾತೆಗೆ ಜಮೆಯಾಗುವ ಉದ್ಯೋಗದಾತರ ಕೊಡುಗೆಯನ್ನು ನಿಲ್ಲಿಸಬಹುದು. ಆದ್ದರಿಂದ, ನಿಮ್ಮ ಪಿಎಫ್ ಖಾತೆಯನ್ನು ಸಮಯಕ್ಕೆ ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಮುಖ್ಯ. ಹಾಗೆಯೇ ಯುಎಎನ್ ಸಹ ಆಧಾರ್ ಪರಿಶೀಲಿಸಬೇಕು. ಹಾಗಾದ್ರೆ ಇಪಿಎಫ್‌ಒ ನೀಡಿರುವ ಹೊಸ ಆದೇಶ ಏನು? ಅದನ್ನು ಅನುರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.



ಇಪಿಎಫ್‌ಒ ಹೊಸ ಆದೇಶ ಏನು?

ಸಾಮಾಜಿಕ ಭದ್ರತಾ ಸಂಹಿತೆ 2020 ರ ಸೆಕ್ಷನ್ 142 ರ ಅಡಿಯಲ್ಲಿ ಇಪಿಎಫ್‌ಒ ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಜೂನ್ 1 ರ ನಂತರ, ಯಾವುದೇ ಖಾತೆಯನ್ನು ಆಧಾರ್ ಅಥವಾ ಯುಎಎನ್‌ನೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ ಆಧಾರ್ ಪರಿಶೀಲಿಸದಿದ್ದರೆ, ಅದರ ಇಸಿಆರ್-ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ತುಂಬಬಾರದು ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಪಿಎಫ್ ಖಾತೆದಾರರಿಗೆ ಉದ್ಯೋಗದಾತರ ಕೊಡುಗೆಯನ್ನು ಸಹ ನಿಲ್ಲಿಸಬಹುದು.



ಎಲ್ಲಾ ಉದ್ಯೋಗದಾತರಿಗೆ ಇಪಿಎಫ್‌ಒ ಅಧಿಸೂಚನೆ ಹೊರಡಿಸಿದ್ದು, 2021 ರ ಜೂನ್ 1 ರಿಂದ ಸದಸ್ಯರ ಖಾತೆಯನ್ನು ಆಧಾರ್‌ನೊಂದಿಗೆ ಸಂಪರ್ಕಿಸದಿದ್ದರೆ, ಇಸಿಆರ್ ಸಲ್ಲಿಸಲು ಅನುಮತಿಸುವುದಿಲ್ಲ ಎಂದು ಸುತ್ತೊಲೆಯಲ್ಲಿ ಹೇಳಿದೆ. ಅಲ್ಲದೆ, ಪಿಎಫ್ ಖಾತೆದಾರರ ಖಾತೆಗಳು ಆಧಾರ್‌ನೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ, ಅವರು ಇಪಿಎಫ್‌ಒ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಪಿಎಫ್ ಅನ್ನು ಆಧಾರ್‌ನೊಂದಿಗೆ ಜೋಡಿಸುವ ಕ್ರಮಗಳು ಏನು?

  • ಹಂತ 1: www.epfindia.gov.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಧಿಕೃತ ಇಪಿಎಫ್‌ಒ ವೆಬ್‌ಸೈಟ್‌ಗೆ ಹೋಗಿ ಮತ್ತು ಲಾಗ್ ಇನ್ ಮಾಡಿ.
  • ಹಂತ 2: ಆನ್‌ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಿ - ಇ-ಕೆವೈಸಿ ಪೋರ್ಟಲ್ - ಲಿಂಕ್ ಯುಎಎನ್ ಆಧಾರ್.
  • ಹಂತ 3: ಯುಎಎನ್ ಖಾತೆಯಲ್ಲಿ ನೋಂದಾಯಿಸಲಾದ ನಿಮ್ಮ ಯುಎಎನ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್‌ಲೋಡ್ ಮಾಡಿ.
  • ಹಂತ 4: ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ನೀವು ಒಟಿಪಿ ಸಂಖ್ಯೆಯನ್ನು ಪಡೆಯುತ್ತೀರಿ. ಒಟಿಪಿ ಪೆಟ್ಟಿಗೆಯಲ್ಲಿ ಒಟಿಪಿ ಸಂಖ್ಯೆಯನ್ನು ನಮೂದಿಸಿ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ. ನಂತರ ಪ್ರಪೋಸ್ಡ್ ಟು ಒಟಿಪಿ ಪರಿಶೀಲನೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 5: ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಲು ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೇಲ್‌ನಲ್ಲಿ ಒಟಿಪಿ ರಚಿಸಿ. ಪರಿ

(Kannada Copy of  Gizbot Kannada)