ಬ್ರೇಕಿಂಗ್ ನ್ಯೂಸ್
01-06-21 03:05 pm GIZBOT Mantesh ಡಿಜಿಟಲ್ ಟೆಕ್
ಪ್ರಸ್ತುತ ದೇಶದಲ್ಲಿ ಆನ್‌ಲೈನ್ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ನೆಲೆ ಕಂಡುಕೊಳ್ಳುತ್ತಿದೆ. ಅದರಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಜಾರಿ ಮಾಡಿರುವ ಲಾಕ್‌ಡೌನ್‌ನಲ್ಲಿ ಬಹುತೇಕ ಕೆಲಸಗಳು ಆನ್‌ಲೈನ್ ನಡೆಯುತ್ತಿವೆ. ಹೀಗಾಗಿ ಯುಪಿಐ ಪೇಮೆಂಟ್ ಆಪ್‌ಗಳು ಹೆಚ್ಚು ಜನಪ್ರಿಯವಾಗಿವೆ. ಈ ಪ್ಲಾಟ್‌ಫಾರ್ಮ್ ಗಳಲ್ಲಿ ಯಾರಿಗಾದರೂ ಹಣ ವರ್ಗಾವಣೆ ಮಾಡಬೇಕಿದ್ದರು ಡಿಜಿಟಲ್ ಟ್ರಾನ್ಸಾಕ್ಶನ್ ಮಾಡಬಹುದು, ಬಿಲ್ ಪೇಮೆಂಟ್, ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್ ಸಹ ಮಾಡಬಹುದಾಗಿದೆ.
ಹೌದು, ಯುಪಿಐ ಪೇಮೆಂಟ್ ತಾಣಗಳಲ್ಲಿ ಗೂಗಲ್ ಪೇ, ಪೇಟಿಎಮ್ ಹಾಗೂ ಫೋನ್‌ಪೇ ಆಪ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇವು ಹೆಚ್ಚು ಬಳಕೆದಾರರನ್ನು ಹೊಂದಿದೆ. ಈ ತಾಣಗಳು ಗ್ರಾಹಕರಿಗೆ ಟ್ರಾನ್ಸಾಕ್ಶನ್ ಮಾಡಿದಾಗ ರಿವಾರ್ಡ್ ಸ್ಕ್ರಾಚ್ ಕಾರ್ಡ್, ಕ್ಯಾಶ್‌ಬ್ಯಾಕ್, ಕೂಪಲ್‌ನಂತಹ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆದಿದೆ. ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವು ಅಥವಾ ಮೊಬೈಲ್ ನಂಬರ್ ನಮೂದಿಸುವ ಮೂಲಕ ಸುಲಭವಾಗಿ ಹಣ ಟ್ರಾನ್ಸ್‌ಫರ್ ಮಾಡಬಹುದಾಗಿದೆ. ಹೀಗೆ ಒಂದೇ ಅಪ್ಲಿಕೇಶನ್ ನಲ್ಲಿ ಹತ್ತು ಹಲವು ಅನುಕೂಲಗಳನ್ನು ಹೊಂದಿರುವ ಯುಪಿಐ ಆಪ್‌ಗಳು ಗ್ರಾಹಕರಿಗೆ ಬಹು ಉಪಯುಕ್ತವಾಗಿವೆ. ಹಾಗಾದರೆ ಸದ್ಯ ಜನಪ್ರಿಯವಾಗಿರುವ ಕೆಲವು ಯುಪಿಐ ಪೇಮೆಂಟ್ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಗೂಗಲ್ ಪೇ ಆಪ್ - Google Pay
ಗೂಗಲ್ ಪ್ಲೇ ಸ್ಟೋರ್‌ನಿಂದ ಗೂಗಲ್ ಪೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು. ಗೂಗಲ್ ಪೇ ಈಗಾಗಲೇ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಪೇಮೆಂಟ್ ಮಾಡಲು ಹಲವು ಆಯ್ಕೆಗಳಿವೆ. ಕ್ಯೂಆರ್-QR ಕೋಡ್ ಸ್ಕ್ಯಾನ್ ಸೌಲಭ್ಯವು ಸಹ ಇದೆ. ಹಾಗೆಯೇ ಹಲವು ಭಾಷೆಗಳ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರ ಕೆಲವು ಟ್ರಾನ್ಸಾಕ್ಶನ್‌ಗಳಿಗೆ ಕೂಪನ್ ಕೊಡುಗೆಗಳು ಲಭ್ಯವಾಗುತ್ತವೆ. ವಿದ್ಯುತ್ ಬಿಲ್, ನೀರಿನ ಬಿಲ್, ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಇನ್ಶೂರೆನ್ಸ್ ಪಾವತಿಯಂತಹ ಹಲವು ಪೇಮೆಂಟ್‌ಗಳನ್ನು ಮಾಡಬಹುದಾಗಿದೆ. ಗ್ರಾಹಕರು ಯುಪಿಐ ಪಿನ್ ಬದಲಿಸಬಹುದಾಗಿದೆ. ಪಾಸ್‌ಬುಕ್, ಬ್ಯಾಂಕ್ ಬ್ಯಾಲೆನ್ಸ್, ಟ್ರಾನ್ಸಾಕ್ಶನ್ ಹಿಸ್ಟರಿ ಸೌಲಭ್ಯಗಳು ಇವೆ.
ಫೋನ್ ಪೇ ಆಪ್ - PhonePe app
ಗೂಗಲ್ ಪೇ ಆಪ್‌ನಂತೆಯೇ ಸೇವೆ ಒದಗಿಸುತ್ತಿರುವ 'ಪೋನ್ ಪೇ' ಆಪ್ ಈಗಾಗಲೇ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಈ ಆಪ್‌ನಲ್ಲಿಯೂ ಪೇಮೆಂಟ್ ಮಾಡಲು ಹಲವು ಆಯ್ಕೆಗಳಿವೆ. ಕ್ಯೂಆರ್-QR ಕೋಡ್ ಸ್ಕ್ಯಾನ್ ಸೌಲಭ್ಯವು ಸಹ ಇದೆ. ಫೋನ್ ಪೇ ಹಲವು ಭಾಷೆಗಳ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರ ಕೆಲವು ಟ್ರಾನ್ಸಾಕ್ಶನ್‌ಗಳಿಗೆ ಕ್ಯಾಶ್‌ಬ್ಯಾಕ್/ಕೂಪನ್ ಕೊಡುಗೆಗಳು ಲಭ್ಯವಾಗುತ್ತವೆ. ಗ್ರಾಹಕರು ಬ್ಯಾಂಕ್‌ಗೆ ನೊಂದಾಯಿತ ಮೊಬೈಲ್‌ನಂಬರ್‌ನಿಂದ ಫೋನ್ ಪೇ ಖಾತೆ ಹೊಂದುವುದು. ಸೆಕ್ಯುರಿಟಿಗಾಗಿ ನಾಲ್ಕು ನಂಬರ್ನ ಪಿನ್‌ಸೆಟ್ ಮಾಡಿಕೊಳ್ಳುವ(UPI PIN) ಆಯ್ಕೆ ಇದೆ. ಪಾಸ್‌ಬುಕ್, ಬ್ಯಾಂಕ್ ಬ್ಯಾಲೆನ್ಸ್, ಟ್ರಾನ್ಸಾಕ್ಶನ್ ಹಿಸ್ಟರಿ ಸೌಲಭ್ಯಗಳು ಇವೆ.
ಪೇಟಿಎಮ್ ಆಪ್ - Paytm
ಪೇಟಿಎಮ್ ಆಪ್ ಸಹ ಈಗಾಗಲೇ ಡಿಜಿಟಲ್ ಪೇಮೆಂಟ್‌ನಲ್ಲಿ ಗುರುತಿಸಿಕೊಂಡಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಫೋನ್‌ಗಳಲ್ಲಿ ಲಭ್ಯವಿದೆ. ಕ್ಯಾಶ್‌ಬ್ಯಾಕ್, ಡಿಸ್ಕೌಂಟ್, ಆಫರ್, ಗಿಫ್ಟ್ ವೊಚರ್‌ನಂತಹ ಸೌಲಭ್ಯಗಳು ಪೇಟಿಎಮ್‌ನಲ್ಲಿ ಲಭ್ಯವಾಗಲಿವೆ. ಗ್ರಾಹಕರು ಲೋನ್ ಪೇಮೆಂಟ್, ಬಿಲ್ ಪೇಮೆಂಟ್, ಫೋನ್ ರೀಚಾರ್ಜ್, ಆನ್‌ಲೈನ್ ಶಾಪಿಂಗ್ ಮಾಡಬಹುದು. ಸಣ್ಣ ಪುಟ್ಟ ಅಂಗಡಿಗಳಿಲ್ಲಿಯೂ ಸಹ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ವರ್ಗಾವಣೆ ಮಾಡಬಹುದು.
ಭೀಮ್ ಆಪ್ - BHIM
ಭೀಮ್ ಆಪ್ ಸಹ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್ ಆಗಿದ್ದು, Unified Payments Interface (UPI) ಯುಪಿಐ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಗೂಗಲ್ ಪೇನಂಯತೆ UPI ID ಮತ್ತು QR ಕೋಡ್ ಬಳಸಿ ಭೀಮ್ ಆಪ್‌ನಲ್ಲಿ ಸಹ ನೇರವಾಗಿ ಖಾತೆಗೆ ಹಣ ಟ್ರಾನ್ಸ್‌ಫರ್ ಮಾಡಬಹುದಾಗಿದೆ. ಗೂಗಲ್ ಪೇ ಸ್ಟೋರ್‌ನಲ್ಲಿ ಭೀಮ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗ್ರಾಹಕರು ಅವರಿಗೆ ಸೂಕ್ತವಾಗ ಭಾಷೆ ಸೆಟ್ ಮಾಡುವ ಆಯ್ಕೆ ಇದೆ. ನಾಲ್ಕು ನಂಬರ್ ಪಿನ್ ನಂಬರ್ ಸೆಟ್ ಮಾಡುವ ಆಯ್ಕೆ ಸಹ ಇದೆ.
(Kannada Copy of Gizbot Kannada)
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm