ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಫಿಕ್ಸ್‌; ಬೆಲೆ ಎಷ್ಟು?

01-06-21 03:23 pm       GIZBOT Mantesh   ಡಿಜಿಟಲ್ ಟೆಕ್

ರಿಯಲ್‌ಮಿ C25s ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ. ಹಾಗೆಯೇ ಬೆಲೆ ಸಹ ಲೀಕ್ ಆಗಿದೆ.

ರಿಯಲ್‌ ಮಿ ಮೊಬೈಲ್ ತಯಾರಿಕಾ ಸಂಸ್ಥೆಯು ಇತ್ತೀಚಿಗಷ್ಟೆ ರಿಯಲ್‌ ಮಿ C ಸರಣಿಯಲ್ಲಿ ಹಲವು ಬಜೆಟ್‌ ದರದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಅವುಗಳಲ್ಲಿ ರಿಯಲ್‌ಮಿ C25 ಗ್ರಾಹಕರ ಗಮನ ಸೆಳೆದಿದೆ. ಕಂಪನಿಯು ಅದರ ಅಪ್‌ಡೇಟ್‌ ಆವೃತ್ತಿಯಾಗಿ ಈಗ ರಿಯಲ್‌ಮಿ C25s ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ. ಹಾಗೆಯೇ ಬೆಲೆ ಸಹ ಲೀಕ್ ಆಗಿದೆ.

ಹೌದು, ರಿಯಲ್ ಮಿ ಕಂಪನಿಯು ತನ್ನ ಬಹುನಿರೀಕ್ಷಿತ ರಿಯಲ್‌ಮಿ C25s ಸ್ಮಾರ್ಟ್‌ಫೋನ್‌ಸ್ಮಾರ್ಟ್‌ಫೋನ್‌ ಇದೇ ಜೂನ್ 12ರಂದು ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಅನಾವರಣ ಮಾಡಲಿದೆ ಎನ್ನಲಾಗಿದೆ. ಈ ಸರಣಿಯು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಇದರೊಂದಿಗೆ 64GB ಸ್ಟೋರೇಜ್ ಹಾಗೂ 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿರಲಿದೆ. ಇನ್ನು ಈ ಫೋನಿನ ಬೇಸ್‌ ವೇರಿಯಂಟ್‌ ದರವು $170 (ಭಾರತದಲ್ಲಿ ಅಂದಾಜು 12,300ರೂ. ಎನ್ನಲಾಗಿದೆ) ಹಾಗಾದರೇ ಲೀಕ್ ಮಾಹಿತಿಯಂತೆ ರಿಯಲ್‌ಮಿ C25s ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.



ಡಿಸ್‌ಪ್ಲೇ ಡಿಸೈನ್

ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ LCD ಪೂರ್ಣ ಹೆಚ್‌ಡಿ ಪ್ಲಸ್‌ ಹೊಂದಿರಲಿದೆ. ಈ ಡಿಸ್‌ಪ್ಲೇಯ ಟೀಯರ್‌ಟ್ರಾಪ್ ಸ್ಟೈಲ್ ನಾಚ್ ಮಾದರಿಯಲ್ಲಿರಲಿದೆ.



ಪ್ರೊಸೆಸರ್ ಬಲ

ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್‌ ಅನ್ನು ಹೊಂದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಇರಲಿದೆ. ಇದರೊಂದಿಗೆ 64GB ಸ್ಟೋರೇಜ್ ಹಾಗೂ 128GB ವೇರಿಯಂಟ್ ಆಯ್ಕೆ ಹೊಂದಿರಲಿದ್ದು, 4GB RAM ಸಪೋರ್ಟ್‌ ಇರಲಿದೆ.



ಕ್ವಾಡ್‌ ಕ್ಯಾಮೆರಾ ರಚನೆ

ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿರಲಿದೆ. ಇನ್ನು ತೃತೀಯ ಕ್ಯಾಮೆರಾ 2ಎಂಪಿ ಸೆನ್ಸಾರ್ ಹಾಗೂ ನಾಲ್ಕನೇ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಪಡೆದಿರಲಿದೆ. ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿರಲಿದೆ.



ಬ್ಯಾಟರಿ ಲೈಫ್

ರಿಯಲ್‌ಮಿ C25s ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯವನ್ನು ಹೊಂದಿದ್ದು, 18W ಸಾಮರ್ಥ್ಯದ ಫ್ಲ್ಯಾಶ್‌ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ. ಇದರರೊಂದಿಗೆ ಕನೆಕ್ಟಿವಿಟಿಗಾಗಿ ಫೋನ್ 4 ಜಿ ವೋಲ್ಟಿಇ, ಜಿಪಿಎಸ್, ವೈ-ಫೈ, ಬ್ಲೂಟೂತ್ ಅನ್ನು ಬೆಂಬಲಿಸುತ್ತದೆ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಹೊಂದಿದೆ.

(Kannada Copy of  Gizbot Kannada)