ಜಿಯೋದಿಂದ ಅಗ್ಗದ 5G ಜಿಯೋಫೋನ್: ನೀವು ತಿಳಿಯಬೇಕಾದ 5 ಸಂಗತಿಗಳು!

03-06-21 01:10 pm       GIZBOT Mantesh   ಡಿಜಿಟಲ್ ಟೆಕ್

ರಿಲಯನ್ಸ್ ಜಿಯೋ ಕಂಪನಿಯು ತನ್ನ ಮೊದಲ 4G ಫೋನ್ ಅನ್ನು 2017 ರಲ್ಲಿ ಬಿಡುಗಡೆ ಮಾಡಿ ಗ್ರಾಹಕರ ಗಮನ ಸೆಳೆಯಿತು.

ರಿಲಯನ್ಸ್ ಜಿಯೋ ಕಂಪನಿಯು ತನ್ನ ಮೊದಲ 4G ಫೋನ್ ಅನ್ನು 2017 ರಲ್ಲಿ ಬಿಡುಗಡೆ ಮಾಡಿ ಗ್ರಾಹಕರ ಗಮನ ಸೆಳೆಯಿತು. ನಂತರ ಅಪ್‌ಡೇಟ್ ನೋಂದಿಗೆ ಜಿಯೋ ಫೋನ್ 2 ಅನಾವರಣ ಮಾಡಿ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಿತು. ಜಿಯೋ ಫೋನ್ 2 ಬಿಡುಗಡೆಯಾದ ನಂತರ ಸಂಸ್ಥೆಯು ತನ್ನ ಗ್ರಾಹಕರಿಗೆ ಯಾವುದೇ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿಲ್ಲ. ಆದ್ರೆ ಇದೀಗ ರಿಲಯನ್ಸ್ ಜಿಯೋ ಮತ್ತು ಗೂಗಲ್ ಒಟ್ಟಿಗೆ 5G ಬೆಂಬಲಿತ ಜಿಯೋ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗಿದೆ.

ಕಳೆದ ವರ್ಷ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM), ಭಾರತದಲ್ಲಿ ಗ್ರಾಹಕರಿಗೆ ಕೈಗೆಟುಕುವ 5G ಸ್ಮಾರ್ಟ್‌ಫೋನ್ ತರಲು ರಿಲಯನ್ಸ್ ಗೂಗಲ್ ಸಹಯೋಗದೊಂದಿಗೆ ಘೋಷಿಸಿತು. ಈ ವಾರದ ಆರಂಭದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತೀಯ ಗ್ರಾಹಕರಿಗೆ ಕೈಗೆಟುಕುವ 5G ಸ್ಮಾರ್ಟ್‌ಫೋನ್ ತರಲು ಟೆಕ್ ದೈತ್ಯ ರಿಲಯನ್ಸ್ ಜಿಯೋ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.



ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಹಲವಾರು 5G ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಆದರೆ ಬರಲಿರುವ ಜಿಯೋ ಫೋನ್ 5G ವಿಶೇಷವಾಗಿರಲಿದೆ. ಏಕೆಂದರೆ ಇದು ಎರಡು ದೊಡ್ಡ ಟೆಕ್ ದೈತ್ಯ ಕಂಪನಿಗಳ ಸಹಯೋಗದ ಫಲಿತಾಂಶವಾಗಿದೆ. ಜಿಯೋ ಮತ್ತು ಗೂಗಲ್ ಒಂದು ಯೋಜನೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿರುವುದು ಇದೇ ಮೊದಲು. ಹಾಗಾದರೇ ಮುಂಬರುವ ಜಿಯೋ-ಗೂಗಲ್ 5G ಸ್ಮಾರ್ಟ್‌ಫೋನ್ ಕುರಿತು 5 ಆಸಕ್ತಿಕರ ವಿಷಯಗಳನ್ನು ತಿಳಿಯೋಣ ಬನ್ನಿರಿ.



5G ಜಿಯೋ ಫೋನ್ ಬಿಡುಗಡೆ ದಿನಾಂಕ

ರಿಲಯನ್ಸ್ AGM 2021 ಅನ್ನು ಜೂನ್ 24 ಕ್ಕೆ ನಿಗದಿಪಡಿಸಲಾಗಿದೆ. ಈ ವರ್ಷದ ಎಜಿಎಂ ಕಳೆದ ವರ್ಷಕ್ಕಿಂತ ದೊಡ್ಡದಾಗಿದೆ ಎಂದು ನಿರೀಕ್ಷಿಸಲಾಗಿದೆ. ಈವೆಂಟ್‌ನ ಪ್ರಮುಖ ಮುಖ್ಯಾಂಶಗಳಲ್ಲಿ ಒಂದು 5G ಜಿಯೋಫೋನ್ ಆಗಿರಬಹುದು.



5G ಜಿಯೋ ಫೋನ್ ಫೀಚರ್ಸ್‌

ಮುಂಬರುವ ಜಿಯೋ ಫೋನ್ ಕ್ವಾಲ್ಕಾಮ್ 4xx ಸರಣಿ ಅಥವಾ ಕೆಲವು ಅಘೋಷಿತ ಕಡಿಮೆ-ವೆಚ್ಚದ ಮೀಡಿಯಾ ಟೆಕ್ 5 ಜಿ ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. 5G ಜಿಯೋಫೋನ್ ಅನ್ನು ಆಂಡ್ರಾಯ್ಡ್ ಓಎಸ್‌ನಲ್ಲಿ ಚಲಾಯಿಸಲು ಸೂಚಿಸಲಾಗಿದೆ, ಇದು ಗೂಗಲ್‌ನೊಂದಿಗಿನ ಜಿಯೋ ಪಾಲುದಾರಿಕೆಯಿಂದಾಗಿ ಅರ್ಥಪೂರ್ಣವಾಗಿದೆ. ಜಿಯೋಫೋನ್ 4G ಯ ಪ್ರಸ್ತುತ ಆವೃತ್ತಿಗಳು KiaOS ನೊಂದಿಗೆ ಬರುತ್ತವೆ.



5G ಜಿಯೋ ಫೋನ್ ಬೆಲೆ

ಅಸ್ತಿತ್ವದಲ್ಲಿರುವ ಜಿಯೋಫೋನ್ ಆವೃತ್ತಿಗಳಂತೆಯೇ, ಮುಂಬರುವ 5G ಜಿಯೋಫೋನ್ ಸಹ ಕೈಗೆಟುಕುವ ನಿರೀಕ್ಷೆಯಿದೆ. ವದಂತಿಗಳು ಮತ್ತು ಸೋರಿಕೆಯನ್ನು ಪರಿಗಣಿಸಿದರೆ, 5G ಜಿಯೋ-ಗೂಗಲ್ ಸ್ಮಾರ್ಟ್‌ಫೋನ್‌ನ ಬೆಲೆ 2500ರೂ.ಗಳ ಆಶುಪಾಸಿನಲ್ಲಿರಲಿದೆ. ಮುಂಬರುವ ಜಿಯೋಫೋನ್‌ನ ನಿಖರವಾದ ಬೆಲೆಯನ್ನು ರಿಲಯನ್ಸ್ ಘೋಷಿಸಲು ನಾವು ಕಾಯಬೇಕಾಗಿದೆ.



5G ಜಿಯೋಫೋನ್ ವಿನ್ಯಾಸ

5G ಜಿಯೋಫೋನ್ ಅಸ್ತಿತ್ವದಲ್ಲಿರುವ ಜಿಯೋಫೋನ್ ಆವೃತ್ತಿಗಳಂತೆಯೇ ವಿನ್ಯಾಸವನ್ನು ಹೊಂದಿರಬಹುದು. ಮೊದಲ ಜಿಯೋಫೋನ್ ಆಲ್ಫಾನ್ಯೂಮರಿಕ್ ಕೀಪ್ಯಾಡ್ ಅನ್ನು ಪ್ಯಾಕ್ ಮಾಡಿದರೆ, ಜಿಯೋಫೋನ್ 2 QWERTY ಕೀಪ್ಯಾಡ್ ಅನ್ನು ಒಳಗೊಂಡಿತ್ತು. ಜಿಯೋ QWERTY ಕೀಪ್ಯಾಡ್ ಅನ್ನು ತರುವ ಸಾಧ್ಯತೆಯಿದೆ ಅಥವಾ ಮುಂಬರುವ 5G ಜಿಯೋಫೋನ್ ಗಾಗಿ ಟಚ್ ಸ್ಕ್ರೀನ್‌ನೊಂದಿಗೆ ಮುಂದುವರಿಯುತ್ತದೆ.



5G ಜಿಯೋಫೋನ್ ಪ್ಲ್ಯಾನ್ಸ್‌

ಜಿಯೋಫೋನ್ ಬಳಕೆದಾರರಿಗೆ ನಿರ್ದಿಷ್ಟವಾಗಿ ಹಲವಾರು ಯೋಜನೆಗಳು ಲಭ್ಯವಿದೆ. 5G ಜಿಯೋಫೋನ್ ಜೊತೆಗೆ ರಿಲಯನ್ಸ್ ಹೊಸ ರೀಚಾರ್ಜ್ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಟೆಲಿಕಾಂ ಪ್ರಸ್ತುತ 7 ಜಿಯೋಫೋನ್ ಯೋಜನೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 39ರೂ.ಗಳಿಂದ 749ರೂ.ವರೆಗೆ ಪ್ರೈಸ್‌ಟ್ಯಾಗ್ ಹೊಂದಿವೆ.

(Kannada Copy of  Gizbot Kannada)