ಅಗ್ಗದ ಬೆಲೆಯಲ್ಲಿ ಲಗ್ಗೆ ಇಡಲು ಸಜ್ಜಾದ ನೋಕಿಯಾ ಹೊಸ ಸ್ಮಾರ್ಟ್‌ಫೋನ್!

04-06-21 02:44 pm       GIZBOT Mutthuraju H M   ಡಿಜಿಟಲ್ ಟೆಕ್

ನೋಕಿಯಾದ C ಸರಣಿಯ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಪ್ರೈಸ್‌ಟ್ಯಾಗ್ ಹೊಂದದ್ದು, ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಮೊಬೈಲ್‌ ಮಾರುಕಟ್ಟೆಯಲ್ಲಿ ಎವರ್‌ಗ್ರೀನ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ನೋಕಿಯಾ ಹಲವು ಶ್ರೇಣಿಯ ಫೋನ್‌ಗಳ ಮೂಲಕ ಗ್ರಾಹಕರ ಮನ ಗೆದ್ದಿದೆ. ಆ ಪೈಕಿ ಬಜೆಟ್‌ ದರದಿಂದ ಹೈ ಎಂಡ್ ಮಾಡೆಲ್‌ ವರೆಗೂ ಭಿನ್ನ ಫೋನ್‌ಗಳ ಲಿಸ್ಟ್‌ ಹೊಂದಿದೆ. ನೋಕಿಯಾದ C ಸರಣಿಯ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಪ್ರೈಸ್‌ಟ್ಯಾಗ್ ಹೊಂದದ್ದು, ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ. ಅದರ ಮುಂದಿನ ಭಾಗವಾಗಿ ಕಂಪನಿಯ C ಸರಣಿಯ ಮತ್ತೊಂದು ಅಗ್ಗದ ಫೋನ್ ಅನಾವರಣ ಮಾಡಲು ಸಜ್ಜಾಗಿದೆ.

ಹೌದು, ನೋಕಿಯಾ ಹೆಚ್‌ಎಮ್‌ಡಿ ಗ್ಲೋಬಲ್ ನೂತನವಾಗಿ ನೋಕಿಯಾ C20 ಪ್ಲಸ್‌ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಈಗಾಗಲೇ ನೋಕಿಯಾ C20 ಫೋನ್ ಫೋನ್‌ ಪ್ರಿಯರನ್ನು ಆಕರ್ಷಿಸಿದ್ದು, ಬರಲಿರುವ ಹೊಸ ನೋಕಿಯಾ C20 ಪ್ಲಸ್‌ ಸ್ಮಾರ್ಟ್‌ಫೋನ್ ಅಪ್‌ಡೇಟ್ ಫೀಚರ್ಸ್‌ಗಳೊಂದಿದೆ ಲಗ್ಗೆ ಇಡಲಿದೆ ಎನ್ನಲಾಗಿದೆ. ಈ ಪೋನಿನಲ್ಲಿ ಬಿಗ್ ಬ್ಯಾಟರಿ, ಹೆಚ್ಚಿನ ರೆಸಲ್ಯೂಶನಿನ ಡಿಸ್‌ಪ್ಲೇ, ಅಧಿಕ RAM ನಂತಹ ಫೀಚರ್ಸ್‌ಗಳು ಸೇರಿರಲಿವೆ.



Weiboದಲ್ಲಿ ಹಂಚಿಕೊಂಡಿರುವ ಪೋಸ್ಟರ್ ಪ್ರಕಾರ, ನೋಕಿಯಾ C20 ಪ್ಲಸ್‌ ರೌಂಡ್ ಕ್ಯಾಮೆರಾ ರಚನೆಯೊಂದಿಗೆ ಬರಲಿದೆ. ಇದು ಮೂರು ಕ್ಯಾಮೆರಾ ಸೆನ್ಸಾರ್ ಹೊಂದಿರಲಿದೆ. ಈ ಕ್ಯಾಮೆರಾಗಳ ರೆಸಲ್ಯೂಶನ್ ಬಗ್ಗೆ ಪೋಸ್ಟರ್ ಏನು ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಎಲ್ಇಡಿ ಫ್ಲ್ಯಾಷ್ ಇರುವುದು ಪೋಸ್ಟರ್‌ನಲ್ಲಿ ಕಾಣಿಸಿದೆ. ಭೌತಿಕ ಫಿಂಗರ್ಪ್ರಿಂಟ್ ಸಂವೇದಕವು ಇರುವ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ನೋಕಿಯಾ ಸಿ 20 ಪ್ಲಸ್ ಅನ್ನು ಅನ್ಲಾಕ್ ಮಾಡಲು ನೀವು ಪಿನ್, ಪ್ಯಾಟರ್ನ್ ಮತ್ತು ಪಾಸ್‌ಕೋಡ್‌ನೊಂದಿಗೆ ಮಾಡಬೇಕಾಗುತ್ತದೆ. ಫೇಸ್-ಅನ್ಲಾಕ್ ವೈಶಿಷ್ಟ್ಯವು ಲಭ್ಯವಾಗುವ ಸಾಧ್ಯತೆಯಿದೆ.



ಲೀಕ್ ಪೋಸ್ಟರ್ ನಲ್ಲಿ ನೋಕಿಯಾ C20 ಪ್ಲಸ್‌ ನ ಮೇಲ್ಭಾಗದಲ್ಲಿ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಇರುವುದನ್ನು ನೀವು ಕಾಣಬಹುದು. ಎಡಭಾಗದಲ್ಲಿ ಸಿಮ್ ಕಾರ್ಡ್ ಟ್ರೇಗಾಗಿ ಫ್ರೇಮ್ ಇರುವುದರಿಂದ, ಬಲವು ಖಂಡಿತವಾಗಿಯೂ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಅನ್ನು ಹೊಂದಿರುತ್ತದೆ. ಕೆಳಭಾಗದಲ್ಲಿ, ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗೆ ಮೈಕ್ರೊ ಯುಎಸ್‌ಬಿ ಪೋರ್ಟ್ ನೀಡಲಾಗಿದೆ. ನೋಕಿಯಾ C20 ಪ್ಲಸ್ ಫೋನ್‌ ಟಿಯರ್ ಡ್ರಾಪ್ ಮಾದರಿಯ ಡಿಸ್‌ಪ್ಲೇ ಒಳಗೊಂಡಿರಲಿದೆ ಎಂದು ನೀವು ನಿರೀಕ್ಷಿಸಬಹುದು.



ಇನ್ನು ಈ ಫೋನ್ Unisoc SC9863A ಚಿಪ್‌ಸೆಟ್ ಹೊಂದಿರಲಿದ್ದು, 3GB RAM ನಿಂದ ನಿಯಂತ್ರಿಸಲ್ಪಟ್ಟಿದೆ. ಇದರೊಂದಿಗೆ ನೋಕಿಯಾ C20 ಪ್ಲಸ್ ಆಂಡ್ರಾಯ್ಡ್‌ 11 ಓಎಸ್‌ನ ಸಪೋರ್ಟ್ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೇ ಈ ಫೋನ್ ಚೀನಾದಲ್ಲಿ ಇದೇ ಜೂನ್ 11 ರಂದು 10AM ಗಂಟೆಗೆ (ಅದೇ ದಿನ ಭಾರತದಲ್ಲಿ ಸಂಜೆ 7:30 ಗಂಟೆಗೆ ಅನಾವರಣ) ಮಾಡುವ ಸಾಧ್ಯತೆಗಳಿವೆ.

(Kannada Copy of  Gizbot Kannada)