ಆನ್‌ಲೈನ್‌ನಲ್ಲಿ ಲಭ್ಯವಿರುವ ಅತ್ಯುತ್ತಮ BP ಮಾನಿಟರ್ ಸಾಧನಗಳು!

04-06-21 03:25 pm       GIZBOT Mutthuraju H M   ಡಿಜಿಟಲ್ ಟೆಕ್

ಆನ್‌ಲೈನ್‌ನಲ್ಲಿ ಕೆಲವು ಡಿಜಿಟಲ್ ಬಿಪಿ ಮಾನಿಟರ್‌ ಮಾಡುವ ಡಿವೈಸ್‌ಗಳು ಲಭ್ಯವಿವೆ. ಈ ಡಿವೈಸ್‌ ಮೂಲಕ ಮನೆಯಲ್ಲಿಯೇ ಬಿಪಿ ಮಾನಿಟರ್ ಮಾಡಬಹುದಾಗಿದೆ.

ಕಳೆದ ಒಂದು ವರ್ಷದಿಂದ ಇಡೀ ಜಗತ್ತು ಕೋವಿಡ್ -19 ಸೋಂಕಿನ ವಿರುದ್ಧ ಹೋರಾಡುತ್ತಿದೆ. ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಪರಿಣಾಮ ಬೀರಿದೆ. ಇದಲ್ಲದೆ, ಕರೋನ ವೈರಸ್‌ನ ಎರಡನೇ ಅಲೆಯು ಯುವಕರನ್ನೂ ಒಳಗೊಂಡಂತೆ ಮೊದಲಿಗಿಂತ ಹೆಚ್ಚಿನ ಜೀವಗಳನ್ನು ಅಪಾಯಕ್ಕೆ ದೂಡಿದೆ. ಮುಖ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಇತರ ದೀರ್ಘಾವಧಿಯ ಕಾಯಿಲೆಗಳನ್ನು ಹೊಂದಿರುವ ಜನರು ಅಪಾಯ ಹೆಚ್ಚಿದ್ದು, ಈ ಆರೋಗ್ಯ ಸಮಸ್ಯೆಯಿಂದ ಬಳಲುವವರು ಸೋಂಕಿಗೆ ಒಳಗಾಗಿದ್ದರೆ ಗಂಭೀರ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ, ಸಾಂಕ್ರಾಮಿಕ ಸಮಯದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸಲು ಮತ್ತು ಆರೋಗ್ಯವಾಗಿರಲು ನೀವು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಜನರು ಕೋವಿಡ್ -19 ರ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಮತ್ತು ಇದು ರೋಗಿಗಳಲ್ಲಿ ಕಾಯಿಲೆ ಮತ್ತು ಮರಣ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗಬಹುದು.



ಆದ್ದರಿಂದ, ಈ ಸಂದರ್ಭದಲ್ಲಿ ನಿಮ್ಮ ಬಿಪಿ ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಸದ್ಯ ಲಾಕ್‌ಡೌನ್‌ ಹಾಗೂ ಕೋವಿಡ್‌ ಸಾಂಕ್ರಾಮಿಕದ ಭೀತಿಯಿಂದಾಗಿ ಅನೇಕರು ಆಸ್ಪತ್ರೆಗಳಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಾರೆ. ಆದರೆ ಆನ್‌ಲೈನ್‌ನಲ್ಲಿ ಕೆಲವು ಡಿಜಿಟಲ್ ಬಿಪಿ ಮಾನಿಟರ್‌ ಮಾಡುವ ಡಿವೈಸ್‌ಗಳು ಲಭ್ಯವಿವೆ. ಈ ಡಿವೈಸ್‌ ಮೂಲಕ ಮನೆಯಲ್ಲಿಯೇ ಬಿಪಿ ಮಾನಿಟರ್ ಮಾಡಬಹುದಾಗಿದೆ. ಹಾಗಾದರೇ ಆನ್‌ಲೈನ್‌ನಲ್ಲಿ ಲಭ್ಯವಿರುವ ಕೆಲವು ಬಿಪಿ ಮಾನಿಟರ್ ಉಪಕರಣಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.



Dr. Morepen Bp02 ಮಾನಿಟರ್

ಡಾ ಮೊರೆಪೆನ್ ಬಿಪಿ 02 ಸ್ವಯಂಚಾಲಿತ ರಕ್ತದೊತ್ತಡ ಮಾನಿಟರ್ ಅಮೆಜಾನ್, ಫ್ಲಿಪ್‌ಕಾರ್ಟ್‌, 1MG ತಾಣಗಳ ಮೂಲಕ ಖರೀದಿಗೆ ಲಭ್ಯವಿದೆ. ಇದು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತ-ಒತ್ತಡ ಮತ್ತು ನಾಡಿ ಆವರ್ತನದ ಅತ್ಯಂತ ವೇಗವಾಗಿ ಮತ್ತು ವಿಶ್ವಾಸಾರ್ಹ ಅಳತೆಯನ್ನು ಒದಗಿಸುತ್ತದೆ. ಸೂಚನೆಯಂತೆ ಸರಳವಾಗಿ ಪಟ್ಟಿಯ ಮೇಲೆ ಹಾಕಿ ಮತ್ತು ಗುಂಡಿಯನ್ನು ಒತ್ತಿ. ಇದರ ಬೆಲೆಯು 1,250ರೂ.ಗಳಿಂದ 1,500ರೂ.ಗಳಲ್ಲಿ ಲಭ್ಯವಾಗಲಿದೆ.

OMRON HEM-6161 ರಕ್ತದೊತ್ತಡ ಮಾನಿಟರ್

OMRON HEM-6161 ರಕ್ತದೊತ್ತಡ ಮಾನಿಟರ್ ಇದು ಕಫ್ ಮತ್ತು ಟ್ಯೂಬ್‌ಗಳ ಸಾಮಾನ್ಯ ಸಂಗ್ರಹದೊಂದಿಗೆ ಬರುವುದಿಲ್ಲ. ಬದಲಾಗಿ, ಪಟ್ಟಿಯನ್ನು ನೇರವಾಗಿ ಸಾಧನಕ್ಕೆ ಜೋಡಿಸಲಾಗಿದೆ ಮತ್ತು ಪ್ರಯಾಣ ಮಾಡುವಾಗ ಅಥವಾ ಕೆಲಸ ಮಾಡುವಾಗ ರಕ್ತದೊತ್ತಡವನ್ನು ಅಳೆಯಲು ಬಯಸುವವರಿಗೆ ಹೆಚ್ಚುವರಿ ಅನುಕೂಲವನ್ನು ನೀಡುವ ಮಣಿಕಟ್ಟಿನ ಮೇಲೆ ಧರಿಸಲು ವಿನ್ಯಾಸಗೊಳಿಸಲಾಗಿದೆ. ಈ OMRON HEM-6161 ರಕ್ತದೊತ್ತಡ ಮಾನಿಟರ್ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ. ಇನ್ನು ಇದರ ಬೆಲೆಯು 1,699ರೂ.ಗಳಿಂದ 1,799ರೂ.ಗಳ ಅಂತರದಲ್ಲಿ ಇದೆ.



BEURER 658.18 BM 27 ರಕ್ತದೊತ್ತಡ ಮಾನಿಟರ್

ಬ್ಯೂರರ್ 658.18 ಬಿಎಂ 27 ರಕ್ತದೊತ್ತಡ ಮಾನಿಟರ್ ಸಂಪೂರ್ಣ ಸ್ವಯಂಚಾಲಿತ ರಕ್ತದೊತ್ತಡ ಮತ್ತು ನಾಡಿ ಅಳತೆ ಸಾಧನವಾಗಿದೆ. ಸಂಭವನೀಯ ಆರ್ಹೆತ್ಮಿಯಾ ಬಳಕೆದಾರರನ್ನು ಇದು ಪತ್ತೆ ಮಾಡುತ್ತದೆ ಮತ್ತು ಎಚ್ಚರಿಸಬಹುದು. ಬ್ಯೂರರ್ 658.18 ಬಿಎಂ 27 ರಕ್ತದೊತ್ತಡ ಮಾನಿಟರ್ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು 1 ಎಂಜಿ ತಾಣಗಳ ಮೂಲಕ ಖರೀದಿಗೆ ಲಭ್ಯವಿದೆ. ಇನ್ನು ಇದರ ಬೆಲೆಯು 1,500ರೂ.ಗಳಿಂದ 1,799ರೂ.ಗಳ ಅಂತರದಲ್ಲಿ ಇದೆ.

(Kannada Copy of  Gizbot Kannada)