ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಬ್ಲೂ ಟಿಕ್ ಮಾರ್ಕ್ ಮಾಯ ; ಟ್ವಿಟ್ಟರ್ ಕಿತಾಪತಿ

05-06-21 12:22 pm       GIZBOT Mutthuraju H M   ಡಿಜಿಟಲ್ ಟೆಕ್

ಭಾರತದ ಮಾನ್ಯ ಉಪರಾಷ್ಟ್ರಪತಿಗಳ ಟ್ವೀಟರ್‌ ಖಾತೆಯಿಂದ ಬ್ಲೂ ಬ್ಯಾಡ್ಜ್‌ ಅನ್ನು ತೆಗೆದುಹಾಕಿದೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್​ ಖಾತೆಯ ದೃಢೀಕರಣ ಬ್ಯಾಡ್ಜ್​ ಅಂದರೆ ಬ್ಲ್ಯೂ ಟಿಕ್​ (ನೀಲಿ ಟಿಕ್​)ನ್ನು ಟ್ವಿಟರ್​ ತೆಗೆದುಹಾಕಿತ್ತು. 

ಸಾಮಾನ್ಯವಾಗಿ ಗಣ್ಯರು, ಸಿನಿಮಾ ಕ್ಷೇತ್ರದಲ್ಲಿರುವ ಪ್ರಮುಖರು, ರಾಜಕಾರಿಗಳ ಸೋಷಿಯಲ್​ ಮೀಡಿಯಾ ಖಾತೆಗೆ ಬ್ಲ್ಯೂಟಿಕ್​ ಇರುತ್ತದೆ. ಅವರ ಹೆಸರಲ್ಲಿ ಹಲವು ಖಾತೆಗಳು ಇರುವ ಕಾರಣ, ಅಧಿಕೃತ ಖಾತೆಯೆ ಬಗ್ಗೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಈ ದೃಢೀಕರಣ ಬ್ಯಾಡ್ಜ್​​ನ್ನು ನೀಡಲಾಗುತ್ತದೆ. ಆದರೆ ಸದ್ಯ ಎಂ.ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್​ ಖಾತೆ (@MVenkaiahNaidu)ಗೆ ನೀಡಲಾಗಿದ್ದ ಈ ಬ್ಲ್ಯೂಟಿಕ್​ ತೆಗೆದುಹಾಕಲ್ಪಟ್ಟಿತ್ತು. ಆದರೆ ಅವರ ಕಚೇರಿಯ ಟ್ವಿಟರ್ ಖಾತೆ (@VPSecretariat)ದ ಬ್ಲ್ಯೂಟಿಕ್​ ಇನ್ನೂ ಹಾಗೇ ಉಳಿಸಿತ್ತು.

ಕಾರಣವೇನು? 

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್​ ಖಾತೆಯ ದೃಢೀಕರಣ ಬ್ಯಾಡ್ಜ್​ ತೆಗೆದುಹಾಕಲ್ಪಟ್ಟಿದ್ದಕ್ಕೆ ಉಪರಾಷ್ಟ್ರಪತಿ ಕಚೇರಿ ಸ್ಪಷ್ಟೀಕರಣ ನೀಡಿದೆ. ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆ ಕಳೆದ ಆರು ತಿಂಗಳಿಂದಲೂ ನಿಷ್ಕ್ರಿಯವಾಗಿತ್ತು. ಅಲ್ಲಿಂದ ಯಾವುದೇ ಟ್ವೀಟ್​ಗಳನ್ನೂ ಮಾಡಲಾಗಿಲ್ಲ. ಹಾಗಾಗಿ ಬ್ಲ್ಯೂಟಿಕ್​ ತೆಗೆಯಲ್ಪಟ್ಟಿದೆ ಎಂದು ತಿಳಿಸಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದ ಬಳಿಕ ಟ್ವಿಟರ್​ ಬ್ಲ್ಯೂಟಿಕ್ ವಾಪಸ್​ ಕೊಟ್ಟಿದೆ ಎಂದೂ ಮಾಹಿತಿ ನೀಡಿದೆ.

ಇನ್ನು ಟ್ವಿಟರ್​​ನ ಈ ಕ್ರಮದ ವಿರುದ್ಧ ಬಿಜೆಪಿ ನಾಯಕ ಸುರೇಶ್​ ನಖುವಾ ಕಿಡಿ ಕಾರಿದ್ದಾರೆ. ಭಾರತದ ಸಂವಿಧಾನಕ್ಕೆ ಟ್ವಿಟರ್​ ಅವಮಾನ ಮಾಡಿದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲ್ಯೂಟಿಕ್​ ತೆಗೆದಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

ದೃಢೀಕರಣ ಬ್ಯಾಡ್ಜ್​ ಯಾವಾಗ ರದ್ದಾಗುತ್ತದೆ?

ಟ್ವಿಟರ್​ ಬ್ಲ್ಯೂಟಿಕ್​ ದೃಢೀಕರಣ ಬ್ಯಾಡ್ಜ್​ ನೀಡಿದ ಬಳಿಕ ಆ ಅಕೌಂಟ್​ ಸಂಪೂರ್ಣವಾಗಿ ಬಳಕೆಯಾಗುತ್ತಿರಬೇಕು ಅಂದರೆ ಸಕ್ರಿಯವಾಗಿರಬೇಕು. ಅದಿಲ್ಲದಿದ್ದರೆ ಅದನ್ನು ತೆಗೆಯುತ್ತದೆ. ಇನ್ನು ಬ್ಲ್ಯೂಟಿಕ್​ ಪಡೆದ ಯಾರಾರೂ ಯೂಸರ್​ ನೇಮ್​ (ಬಳಕೆದಾರರು ಹೆಸರು) ಬದಲಿಸಿಕೊಂಡರೆ, ಆ ಕ್ಷಣಕ್ಕೆ ಟ್ವಿಟರ್​ ಬ್ಲ್ಯೂಟಿಕ್​ ತೆಗೆದುಹಾಕುತ್ತದೆ.

Twitter on Saturday removed the blue tick, which lets people know that an account on the social media platform is authentic, from the personal handle of vice president M Venkaiah Naidu. However, the official account of the vice president of India, @VPSecratariat, which is run by the vice president's secretariat, still has a blue tick next to it.