ಭಾರತದಲ್ಲಿ ರಿಯಲ್‌ಮಿ C25s ಸ್ಮಾರ್ಟ್‌ಫೋನ್‌ ಲಾಂಚ್: 6,000mAh ಬ್ಯಾಟರಿ!

08-06-21 02:42 pm       GIZBOT Mantesh   ಡಿಜಿಟಲ್ ಟೆಕ್

ರಿಯಲ್‌ಮಿ ತನ್ನ ಬಹುನಿರೀಕ್ಷಿತ ಹಾಗೂ ಬಜೆಟ್ ದರದ ರಿಯಲ್‌ಮಿ C ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಈಗ ರಿಯಲ್‌ಮಿ C25s ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ರಿಯಲ್‌ಮಿ ತನ್ನ ಬಹುನಿರೀಕ್ಷಿತ ಹಾಗೂ ಬಜೆಟ್ ದರದ ರಿಯಲ್‌ಮಿ C ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಈಗ ರಿಯಲ್‌ಮಿ C25s ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಕಡಿಮೆ ಪ್ರೈಸ್‌ಟ್ಯಾಗ್‌ನಲ್ಲಿ ಲಾಂಚ್‌ ಆಗಿದ್ದರೂ, 6,000mAh ಸಾಮರ್ಥ್ಯದ ಬ್ಯಾಟರಿ, ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ನಂತಹ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡು ಗ್ರಾಹಕರ ಗಮನ ಸೆಳೆದಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಸಂಸ್ಥೆ ತನ್ನ ಹೊಸ ರಿಯಲ್‌ಮಿ C25s ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್‌ ಅನ್ನು ಹೊಂದಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.



ಡಿಸ್‌ಪ್ಲೇ ಡಿಸೈನ್

ರಿಯಲ್‌ಮಿ C25s ಸ್ಮಾರ್ಟ್‌ಫೋನ್ 720x1,600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ LCD ಪೂರ್ಣ ಹೆಚ್‌ಡಿ ಪ್ಲಸ್‌ ಹೊಂದಿದೆ. ಈ ಡಿಸ್‌ಪ್ಲೇಯ ಟೀಯರ್‌ಟ್ರಾಪ್ ಸ್ಟೈಲ್ ನಾಚ್ ಮಾದರಿಯಲ್ಲಿದ್ದು, ಡಿಸ್‌ಪ್ಲೇ ಅನುಪಾತವು 88.7 ಆಗಿದೆ. 570 nits ಬ್ರೈಟ್ನೆಸ್‌ ನಿಟ್ಸ್‌ ಸಾಮರ್ಥ್ಯವನ್ನು ಹೊಂದಿದೆ.



ಪ್ರೊಸೆಸರ್

ಬಲ ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಇದೆ. ಇದರೊಂದಿಗೆ 64GB ಸ್ಟೋರೇಜ್ ಹಾಗೂ 128GB ವೇರಿಯಂಟ್ ಆಯ್ಕೆ ಹೊಂದಿದ್ದು, 4GB RAM ಸಪೋರ್ಟ್‌ ಅನ್ನು ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್‌ ಮೂಲಕ ವಿಸ್ತರಣೆಗೆ ಅವಕಾಶ ಇದೆ.



ಕ್ವಾಡ್‌ ಕ್ಯಾಮೆರಾ ರಚನೆ

ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿರಲಿದೆ. ಇನ್ನು ತೃತೀಯ ಕ್ಯಾಮೆರಾ 2ಎಂಪಿ ಸೆನ್ಸಾರ್ ಹಾಗೂ ನಾಲ್ಕನೇ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಪಡೆದಿರಲಿದೆ. ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿರಲಿದೆ.



ಬ್ಯಾಟರಿ ಲೈಫ್

ಬ್ಯಾಟರಿ ಲೈಫ್ ರಿಯಲ್‌ಮಿ C25s ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯವನ್ನು ಹೊಂದಿದ್ದು, 18W ಸಾಮರ್ಥ್ಯದ ಫ್ಲ್ಯಾಶ್‌ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರರೊಂದಿಗೆ ಕನೆಕ್ಟಿವಿಟಿಗಾಗಿ ಫೋನ್ 4 ಜಿ ವೋಲ್ಟಿಇ, ಜಿಪಿಎಸ್, ವೈ-ಫೈ, ಬ್ಲೂಟೂತ್ ಅನ್ನು ಬೆಂಬಲಿಸುತ್ತದೆ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಹೊಂದಿದೆ.



ಬೆಲೆ ಎಷ್ಟು?

ರಿಯಲ್‌ಮಿ C25s ಸ್ಮಾರ್ಟ್‌ಫೋನ್ 4GB + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 9,999ರೂ.ಗಳಾಗಿದೆ. ಹಾಗೂ 4GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆಯು 10,999ರೂ.ಗಳಾಗಿದೆ. ಇದೇ ಜೂನ್ 9ರಂದು ಫಸ್ಟ್‌ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್ ಶುರುವಾಗಲಿದೆ. ಗ್ರೇ ಮತ್ತು ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

(Kannada Copy of  Gizbot Kannada)