ಬ್ರೇಕಿಂಗ್ ನ್ಯೂಸ್
30-11-24 07:31 pm HK News Desk ಉದ್ಯೋಗ
ಕರ್ನಾಟಕ ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದ ರಾಜ್ಯದ ನಿರುದ್ಯೋಗಿ ಹಾಗೂ ಪೊಲೀಸ್ ಇಲಾಖೆ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ಇದೀಗ ನೀಡಿದೆ. ಬರೋಬರಿ 2400 ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಕ್ಕೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ.
ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪಡೆಯಲ್ಲಿ 2 ಹೊಸ ಬೆಟಾಲಿಯನ್ ಪ್ರಾರಂಭಕ್ಕೆ ರಾಜ್ಯ ಸರ್ಕಾರದ ಹಸಿರು ನಿಶಾನೆ ನೀಡಿದ್ದು, ದೇವನಹಳ್ಳಿ ಬಳಿ 100 ಎಕರೆ, ಕೆಜಿಎಫ್ ಬಳಿ 50 ಎಕರೆ ಸ್ಥಳವನ್ನು ಸಹ ಗುರುತಿಸಿ ಮೀಸಲಿಡಲಾಗಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಶಸ್ತ್ರ ಮೀಸಲು ಪಡೆ (ಕೆಎಸ್ ಆರ್ ಪಿ)ಯಲ್ಲಿ ಹೊಸದಾಗಿ 2400 ಪೊಲೀಸ್ ಸಿಬ್ಬಂದಿಗಳ 2 ಬೆಟಾಲಿಯನ್‌ಗಳ ಆರಂಭಕ್ಕೆ ಅಧಿಕೃತವಾಗಿ ಶುಕ್ರವಾರ ಸರ್ಕಾರ ಸಿಹಿ ಸುದ್ದಿ ನೀಡಿ ಆದೇಶಿಸಿದೆ.
ಕೆಎಸ್ಆಪಿ ಪಡೆಯಲ್ಲಿ ಇಂಡಿಯನ್ ಬೆಟಾಲಿಯನ್‌ಗಳನ್ನು (ಐಆರ್‌ಬಿ) ಪ್ರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಕೆಎಸ್‌ಆರ್‌ಪಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ. ಪ್ರಸ್ತುತ 12 ಕೆಎಸ್‌ಆರ್‌ಪಿ ಹಾಗೂ 2 ಐಆರ್‌ಬಿ ಬೆಟಾಲಿಯನ್‌ಗಳಿವೆ. ಆದರೆ ರಾಜ್ಯದಲ್ಲಿ ಭದ್ರತೆ ಹಾಗೂ ಪ್ರಾಕೃತಿಕ ವಿಪತ್ತು ಸೇರಿದಂತೆ ತುರ್ತು ಸಂದರ್ಭಗಳನ್ನು ನಿಭಾಯಿಸಲು ಮತ್ತಷ್ಟು ಬೆಟಾಲಿಯನ್ ಗಳ ಅಗತ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಹೊಸ ಬೆಟಾಲಿಯನ್‌ಗಳನ್ನು ಸಿದ್ಧತೆಗೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿ ರಾಜ್ಯ ಪತ್ರ ಬರೆದಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬೆಟಾಲಿಯನ್‌ಗಳಿಗೆ ಗುರುತಿಸಲಾದ ಸ್ಥಳಗಳಲ್ಲಿ ತರಬೇತಿ ಹಾಗೂ ವಸತಿ ಸೇರಿ ಇತರೆ ಸೌಲಭ್ಯಗಳನ್ನು ಸಿಬ್ಬಂದಿಗಳಿಗೆ ಕಲ್ಪಿಸಲಾಗುತ್ತದೆ. ತಲಾ ಬೆಟಾಲಿಯನ್‌ನಲ್ಲಿ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ ಒಟ್ಟು 2400 ಪೊಲೀಸರ ನೇಮಕಾತಿಗೆ ಸಹ ಸರ್ಕಾರವು ಒಪ್ಪಿಗೆ ಸೂಚಿಸಿದೆ. ಈ ಆದೇಶ ಹಿನ್ನೆಲೆಯಲ್ಲಿ ಹೊಸ ಬೆಟಾಲಿಯನ್‌ಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಇಲಾಖೆ ಶುರುಮಾಡಲಿದ್ದು, ಸರ್ಕಾರಿ ಸೇವೆ ಸೇರಲು ಕನಸು ಕಂಡಿರುವ ಉದ್ಯೋಗಾಕಾಂಕ್ಷಿಗಳು ಬೇಕಾದ ಸಿದ್ಧತೆ ಮಾಡಿಕೊಳ್ಳಬಹುದು.
ಯಾವಾಗ ಅಧಿಸೂಚನೆ? ಅರ್ಜಿ ಪ್ರಕ್ರಿಯೆ ಆರಂಭವಾಗುವುದು?
ಪ್ರಸ್ತುತ ಸರ್ಕಾರ ನೇಮಕಕ್ಕೆ ಆದೇಶ ನೀಡಿದ್ದು, ಈ ಹುದ್ದೆಗಳಿಗೆ ಮೀಸಲಾತಿ, ವೃಂದ, ನಿಯಮಗಳು ಎಲ್ಲವುಗಳ ಕುರಿತ ಕರಡು ಅಧಿಸೂಚನೆ ಸಿದ್ಧಪಡಿಸಬೇಕಾಗುತ್ತದೆ. ನಂತರ ಅದಕ್ಕೆ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಅಧಿಸೂಚನೆ ಬಿಡುಗಡೆ ಮಾಡುವ ಮೂಲಕ ಅರ್ಜಿ ಸ್ವೀಕಾರ ಆರಂಭಿಸಲಾಗುತ್ತದೆ. ಈ ಪ್ರಕ್ರಿಯೆಗೆ ಹೇಗೆ ಇದ್ದರೂ ಸಹ 1-2 ತಿಂಗಳ ಕಾಲಾವಕಾಶ ಬೇಕಾಗುತ್ತದೆ.
ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಗಳು ಹಾಗೂ ವಯೋಮಿತಿ ಅರ್ಹತೆಗಳು;
ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸ್ ಮಾಡಿರುವ ಅಭ್ಯರ್ಥಿಗಳು, ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗಧಿಪಡಿಸಲಾಗಿರುತ್ತದೆ.
ಇದುವರೆಗೆ ಎಎಸ್‌ಐನಿಂದ ಪಿಎಸ್‌ಐ 64, ಪಿಎಸ್‌ಐನಿಂದ ಪಿಐ 16, ಪಿಸಿಯಿಂದ ಎಚ್‌ಸಿ (224), ಎಚ್ ಸಿಯಿಂದ ಎಎಸ್‌ಐ (184), ಹೀಗೆ ಒಟ್ಟು 488 ಸಿಬ್ಬಂದಿ ಮುಂಬಡ್ತಿ ಪಡೆದಿದ್ದಾರೆ. ವಿಳಂಬವಿಲ್ಲದೆ 3 ದಶಕಗಳು ಇಲಾಖೆಯಲ್ಲಿ ದುಡಿದ ಅರ್ಹರಿಗೆ ಮುಂಬಡ್ತಿ ಭಾಗ್ಯ ಈಗ ಸಿಗುವಂತಾಗಿದೆ.
10 ಉಪ ಕಮಾಂಡೆಂಟ್ ಹುದ್ದೆಗಳು ;
ಕೆಎಸ್‌ಆರ್ ಪಿಯಲ್ಲಿ ಹೊಸದಾಗಿ 10 ಡೆಪ್ಯುಟಿ ಕಮಾಂಡೆಂಟ್ ಪೋಸ್ಟ್‌ಗಳನ್ನು ಸೃಜಿಸಿಸುವ ಪ್ರಸ್ತಾವನೆಗೂ ಸಹ ಸರ್ಕಾರ ಸಹಮತ ನೀಡಿದೆ. ಈ ಹುದ್ದೆಗಳಿಗೆ ಸೇವಾ ಹಿರಿತನ ಆಧಾರದ ಮೇರೆಗೆ ಅಧಿಕಾರಿಗಳನ್ನು ಎಡಿಜಿಪಿ ನೇಮಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಕೆಎಸ್‌ಆರ್‌ಬಿ ಮತ್ತು ಐಆರ್‌ಬಿ ಬೆಟಾಲಿಯನ್ ಸಿಬ್ಬಂದಿಗಳು ಬಂದ್‌ಗಳು, ಚುನಾವಣೆಗಳು, ಪ್ರತಿಭಟನೆಗಳು ಹಾಗೂ ಗಣ್ಯರ ಕಾರ್ಯಕ್ರಮಗಳು ಹೀಗೆ ಬಂದೋಬಸ್ತ್
ಕಾರ್ಯಗಳಲ್ಲಿ ಪ್ರಮುಖ ಕರ್ತವ್ಯ ಸೇವೆ ನೀಡುತ್ತಾರೆ. ಈ ಪಡೆ ಬಲವರ್ಧನೆಗೆ ಪೊಲೀಸ್ ಇಲಾಖೆ ಈಗ ಇನ್ನಷ್ಟು ಮುಂದಾಗಿದೆ.
KSRP jobs in Police, Recruitment for KSRP jobs in Karnataka for 2400 pc.
17-12-24 05:39 pm
HK News
Pavithra Gowda Release, Actor Darshan; ಪರಪ್ಪನ...
17-12-24 11:53 am
Madhusdhan, Waqf, Congress; ಅತಿ ಹೆಚ್ಚು ವಕ್ಫ್...
17-12-24 11:30 am
Tulsi Gowda passes away: ಪರಿಸರ ಪ್ರೇಮಿ, ವೃಕ್ಷ...
16-12-24 10:13 pm
Sexually harrasment, Hubballi police Inspecto...
16-12-24 09:58 pm
18-12-24 10:37 pm
HK News Desk
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಇನ್ನಿಲ್ಲ...
15-12-24 11:05 pm
IPS Mohsin Khan, Rape; ಖಾನ್ಪುರ ಐಐಟಿಯಲ್ಲಿ ಕ್ರಿ...
14-12-24 12:40 pm
18-12-24 05:09 pm
Mangalore Correspondent
MCC Bank Anil Lobo, FIR, Manohar Pereira Suic...
18-12-24 01:56 pm
MCC Bank Anil Lobo, Manohar Pereira Suicide:...
17-12-24 11:13 pm
Puttur, Soumya Pernaje; "ಹವ್ಯಕ ಕೃಷಿ ರತ್ನ" ಪ್ರ...
17-12-24 08:10 pm
Anupam Agrawal IPS, Mangalore Protest: ಪ್ರತಿಭ...
17-12-24 01:55 pm
18-12-24 09:23 pm
Bangalore Correspondent
Mangalore CCB Police, Crime, Drugs; ಸಿಸಿಬಿ ಪೊ...
18-12-24 11:15 am
Konaje Police, Mangalore Police, Drugs; ಮಾದಕ...
17-12-24 07:51 pm
Karkala GooglePay Fraud, Arrest: ಹೋಮ್ ನರ್ಸ್ ಆ...
17-12-24 07:34 pm
Bank Fraud Case, Mangalore Police, News: ಬ್ಯಾ...
15-12-24 01:03 pm