ಭಾರತೀಯ ವಾಯುಸೇನೆ ನೇಮಕಾತಿ: 174 ಸಿವಿಲಿಯನ್ ಹುದ್ದೆಗಳಿವೆ

08-09-21 06:53 pm       Source ; One India Kannada   ಉದ್ಯೋಗ

ಭಾರತೀಯ ವಾಯುಸೇನೆಯಲ್ಲಿ 2021ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ.

ನವದೆಹಲಿ, ಸೆಪ್ಟೆಂಬರ್ 10: ಭಾರತೀಯ ವಾಯುಸೇನೆಯಲ್ಲಿ 2021ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.

ಸುಮಾರು 174 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕುಕ್, ಎಂಟಿಎಸ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 03ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: ಭಾರತೀಯ ವಾಯು ಸೇನೆ

ಸಂಸ್ಥೆ ಹೆಸರು: Cook, MTS

ಒಟ್ಟು ಹುದ್ದೆ: 174

ಉದ್ಯೋಗ ಸ್ಥಳ: ಭಾರತದೆಲ್ಲೆಡೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 03, 2021

ಐಎಎಫ್ ನೇಮಕಾತಿ

ಹುದ್ದೆ ಹೆಸರು- ಒಟ್ಟು ಹುದ್ದೆ

ಸೂಪರಿಂಟೆಂಡ್ (ದಾಸ್ತಾನು): 3

ಕೆಳ ಸ್ತರದ ಕ್ಲರ್ಕ್: 10

ಉಗ್ರಾಣ ಪಾಲಕ: 6

ಅಡುಗೆಯವ: 23

ಪೈಂಟರ್: 2

ಕಾರ್ಪೆಂಟರ್: 3

ಹೌಸ್ ಕೀಪಿಂಗ್: 23

ಮೆಸ್ ಸಿಬ್ಬಂದಿ: 1

ವಿವಿಧ ಇನ್ನಿತರ ಹುದ್ದೆ: 98

ವಿದ್ಯಾರ್ಹತೆ:

ಹುದ್ದೆ ಹೆಸರು - ಒಟ್ಟು ಹುದ್ದೆ

ಸೂಪರಿಂಟೆಂಡ್ (ದಾಸ್ತಾನು): ಪದವಿ

ಕೆಳ ಸ್ತರದ ಕ್ಲರ್ಕ್: 12ನೇ ತರಗತಿ ಪಾಸ್

ಉಗ್ರಾಣ ಪಾಲಕ: 12ನೇ ತರಗತಿ ಪಾಸ್

ಅಡುಗೆಯವ: ಮೆಟ್ರಿಕ್ಯುಲೇಷನ್

ಪೈಂಟರ್: 10ನೇ ತರಗತಿ, ಐಟಿಐ

ಕಾರ್ಪೆಂಟರ್: 10ನೇ ತರಗತಿ, ಐಟಿಐ

ಹೌಸ್ ಕೀಪಿಂಗ್: ಮೆಟ್ರಿಕ್ಯುಲೇಷನ್

ಮೆಸ್ ಸಿಬ್ಬಂದಿ: ಮೆಟ್ರಿಕ್ಯುಲೇಷನ್

ವಿವಿಧ ಇನ್ನಿತರ ಹುದ್ದೆ: ಮೆಟ್ರಿಕ್ಯುಲೇಷನ್



ವಯೋಮಿತಿ:

ಕನಿಷ್ಠ 18 ರಿಂದ ಗರಿಷ್ಠ 25 ವರ್ಷ, ನಿಯಮಾನುಸಾರ ಅರ್ಹರಿಗೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಂಡ: 05 ವರ್ಷ

ಹಿಂದುಳಿದ ವರ್ಗ ಅಭ್ಯರ್ಥಿ: 03 ವರ್ಷ

ದಿವ್ಯಾಂಗ: 10 ವರ್ಷ

ದಿವ್ಯಾಂಗ (ಒಬಿಸಿ): 13 ವರ್ಷ

ದಿವ್ಯಾಂಗ (ಎಸ್ ಸಿ/ ಎಸ್ ಟಿ): 15 ವರ್ಷ

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ಪ್ರಯೋಗಿಕ ಪರೀಕ್ಷೆ/ ಪಿಎಸ್ ಟಿ/ ಪಿಇಟಿ/ಪಿಎಂಟಿ.

ಪ್ರಮುಖ ದಿನಾಂಕ:

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 03/09/2021

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03/10/2021

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ (indianairforce.nic.in)

* ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ

* ನಿಮ್ಮ ಚಾಲ್ತಿಯಲ್ಲಿರುವ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಿ

* ಐಡಿ ಪ್ರೂಫ್, ವಯಸ್ಸು, ವಿದ್ಯಾರ್ಹತೆ ಕುರಿತಂತೆ ಅಗತ್ಯ ದಾಖಲೆ ಒದಗಿಸಿ, ಭರ್ತಿಯಾದ ಅರ್ಜಿಯನ್ನು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.



ಅರ್ಜಿಗಳನ್ನು ಕಳಿಸಲು ವಿಳಾಸಗಳು:

HQ Central Air Command, IAF ಏರ್ ಆಫೀಸರ್ ಕಮಾಂಡಿಂಗ್, ಏರ್ ಫೋರ್ಸ್ ಸ್ಟೇಷನ್ ಆಗ್ರಾ(ಯುಪಿ) - 282008

HQ Central Air Command, IAF ಏರ್ ಆಫೀಸರ್ ಕಮಾಂಡಿಂಗ್, ಏರ್ ಫೋರ್ಸ್ ಸ್ಟೇಷನ್ ಆಗ್ರಾ(ಯುಪಿ) - 282008

Commanding Officer PTS ಏರ್ ಫೋರ್ಸ್ ಸ್ಟೇಷನ್ ಆಗ್ರಾ (ಯುಪಿ) - 282008

Commanding Officer, Yaks, ಏರ್ ಫೋರ್ಸ್ ಸ್ಟೇಷನ್ ಆಗ್ರಾ(ಯುಪಿ) - 282008

Station Commander, ಏರ್ ಫೋರ್ಸ್ ಸ್ಟೇಷನ್ ಭಕ್ಷಿ ಕಾ ತಲಾಬ್, ಲಕ್ನೋ (ಉತ್ತರ ಪ್ರದೇಶ)- 226 201

**** 

HQ Southern Air Command, IAF Station Commander,ಏರ್ ಫೋರ್ಸ್ ಸ್ಟೇಷನ್ ಚಿಮಣಿ ಹಿಲ್ಸ್, ಚಿಕ್ಕ ಬಾಣಾವಾರ, ಬೆಂಗಳೂರು- 560 090

ಏರ್ ಫೋರ್ಸ್ ಕಮಾಂಡಿಂಗ್, ಏರ್ ಫೋರ್ಸ್ ಸೆಲೆಕ್ಷನ್ ಬೋರ್ಡ್, ಚಾಮುಂಡಿ ಹಿಲ್ಸ್ ಕಾಂಪ್ಲೆಕ್ಸ್, ಸಿದ್ದಾರ್ಥ ನಗರ, ಮೈಸೂರು- 570 011

ಇದಲ್ಲದೆ, HQ Training Command, IAF, HQ Western Air Command, IAF ವಿವಿಧ ಕೇಂದ್ರಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ.

Apply now for Indian Air Force Recruitment 2021.