ಸಿಎಸ್‌ಜಿ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ, ಅರ್ಜಿ ಹಾಕಿ

14-12-21 12:05 pm       Source: Oneindia Kannada   ಉದ್ಯೋಗ

ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್‌ಜಿ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 31/1/2022 ಕೊನೆಯ ದಿನವಾಗಿದೆ.

ಬೆಂಗಳೂರು, ಡಿ. 14 : ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್‌ಜಿ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 31/1/2022 ಕೊನೆಯ ದಿನವಾಗಿದೆ.

ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್‌ಜಿ) ಇ-ಆಡಳಿತ ಸಚಿವಾಲಯ, ಇದರ ಅಧಿನದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸ್ಥಾಪಿಸಿರುವ ಮತ್ತು ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಅಧಿನಿಯಮ 1960ರ ಅನ್ವಯ ನೋಂದಣಿಯಾಗಿರುವ ಒಂದು ಸಂಸ್ಥೆಯಾಗಿದೆ. ಮಾಹಿತಿ ತಂತ್ರಜ್ಞಾನ (ಐಟಿ/ಐಸಿಟಿ) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗರ್ವನೆನ್ಸ್ ಸಂಸ್ಥೆಯಲ್ಲಿ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ;

ಪ್ರಾಜೆಕ್ಟ್ ಮ್ಯಾನೇಜರ್ 3, ಪ್ರಾಜೆಕ್ಟ್ ಲೀಡ್ 2, ಬಿಸಿನೆಸ್ ಅನಲಿಸ್ಟ್ 4, ಸೊಲ್ಯೂಷನ್ ಆರ್ಕಿಟೆಕ್ಟ್ 2, ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ 6, ಸಾಫ್ಟ್‌ವೇರ್ ಇಂಜಿನಿಯರ್ 42, ಡೇಟಾಬೇಸ್ ಡಿಸೈನರ್ 5, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ 4, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ 2, ಟೆಸ್ಟ್ ಲೀಡ್ 2, ಟೆಸ್ಟ್ ಇಂಜಿನಿಯರ್ 5, ಆಪರೇಷನ್ಸ್ ಮ್ಯಾನೇಜರ್ 4.

ಆಸಕ್ತ, ಅರ್ಹ ಅಭ್ಯರ್ಥಿಗಳು ತಮ್ಮ ಸಿವಿಗಳನ್ನು careerscsg@karnataka.gov.in

ವೆಬ್ ಸೈಟ್‌ ವಿಳಾಸ https://csg.karnataka.gov.in/

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ;

ಅಂಗನವಾಡಿಗಳಲ್ಲಿ ಗೌರವ ಸೇವೆಗೆ ಆಯ್ಕೆಯಾದ ಕಾರ್ಯಕರ್ತೆ ಹಾಗೂ ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ಡಿಸೆಂಬರ್ 18ರ ಸಾಯಂಕಾಲ 5:30 ರೊಳಗೆ ಸಲ್ಲಿಸಬೇಕು ಎಂದು ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 6 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಗೌರವಸೇವೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಆಯ್ಕೆ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಅಕ್ಟೋಬರ್ 26, 2021 ರಂದು ಅರ್ಜಿಗಳನ್ನು ಪರಿಶೀಲಿಸಿ, 6 ಶಿಶು ಅಭಿವೃದ್ಧಿ ಯೋಜನೆಗಳ ಕಛೇರಿ ಪ್ರಕಟಣಾ ಫಲಕಕ್ಕೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.

ಧಾರವಾಡ ಗ್ರಾಮೀಣ ಅಂಗನವಾಡಿ ಕಾರ್ಯಕರ್ತೆ 4 ಮತ್ತು ಅಂಗನವಾಡಿ ಸಹಾಯಕಿ 13, ಹುಬ್ಬಳ್ಳಿ ಗ್ರಾಮೀಣ ಅಂಗನವಾಡಿ ಕಾರ್ಯಕರ್ತೆ 4 ಮತ್ತು ಅಂಗನವಾಡಿ ಸಹಾಯಕಿ 7, ಹುಬ್ಬಳ್ಳಿ-ಧಾರವಾಡ ಶಹರ ಅಂಗನವಾಡಿ ಸಹಾಯಕಿ 28, ಕಲಘಟಗಿ ಅಂಗನವಾಡಿ ಕಾರ್ಯಕರ್ತೆ 4 ಮತ್ತು ಅಂಗನವಾಡಿ ಸಹಾಯಕಿ 8. ಕುಂದಗೋಳ ಅಂಗನವಾಡಿ ಕಾರ್ಯಕರ್ತೆ 2 ಮತ್ತು ಅಂಗನವಾಡಿ ಸಹಾಯಕಿ 16, ನವಲಗುಂದ ಅಂಗನವಾಡಿ ಕಾರ್ಯಕರ್ತೆ 5 ಮತ್ತು ಅಂಗನವಾಡಿ ಸಹಾಯಕಿ 13 ಹೀಗೆ ಒಟ್ಟು 6 ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಒಟ್ಟು 19 ಜನ ಅಂಗನವಾಡಿ ಕಾರ್ಯಕರ್ತೆಯರ ಮತ್ತು 85 ಜನ ಅಂಗನವಾಡಿ ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿ ಸೂಚನಾ ಫಲಕ ಹಾಗೂ ಉಪ ನಿರ್ದೇಶಕರ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಆಹ್ವಾನ;

ಶಿವಮೊಗ್ಗ ರಂಗಾಯಣವು ರೆಪರ್ಟರಿಯ ಈ ಅವಧಿಯ ಬಾಕಿ ಉಳಿದ ದಿನಗಳಿಗೆ ನೆರವಾಗಿರುವ ಮೂರು ಜನ ತಾತ್ಕಾಲಿಕ ಕಲಾವಿದರ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ತಮ್ಮ ರಂಗಾನುಭವ ಮತ್ತು ವಿದ್ಯಾಭ್ಯಾಸದ ಸ್ವವಿವರಗಳನ್ನು ಒಂದು ಬಿಳಿಯ ಹಾಳೆಯಲ್ಲಿ ಸ್ಪುಟವಾಗಿ ಬರೆದು ದಿನಾಂಕ 17/12/2021 ರೊಳಗಾಗಿ ನಿರ್ದೇಶಕರು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಅಶೋಕನಗರ, ಹೆಲಿಪ್ಯಾಡ್ ಹತ್ತಿರ, ಶಿವಮೊಗ್ಗ-577201 ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಅಥವಾ ಇ-ಮೇಲ್

admin.rangayanashivamogga@gmail.com ರ ಮೂಲಕ ಸಲ್ಲಿಸುವುದು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಿನಾಂಕ 20/12/2021 ರಂದು ಬೆಳಗ್ಗೆ 10.30ಕ್ಕೆ ರಂಗಾಯಣದ ಸುವರ್ಣ ಸಂಸ್ಕೃತಿ ಭವನದಲ್ಲಿ ಸಂದರ್ಶನ ನಡೆಸಲಾಗುವುದು. ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ 08182-256353 ಅನ್ನು ಸಂಪರ್ಕಿಸಬಹುದಾಗಿದೆ.

Centre for Smart Governance Karnataka invited applications for software engineer, project lead and other post. Candidates can apply till January 31, 2022.