ಆದಾಯ ಏರಿಕೆಯಾದರೂ ನಿಲ್ಲದ ನಷ್ಟ, ಮೂರೇ ತಿಂಗಳಲ್ಲಿ ಪೇಟಿಎಂಗೆ 761 ಕೋಟಿ ರೂ. ಲಾಸ್‌!

21-05-22 10:32 pm       Source: Vijayakarnataka   ಉದ್ಯೋಗ

ಮಾರ್ಚ್ ತ್ರೈಮಾಸಿಕದಲ್ಲಿ ಪೇಟಿಎಂ ಆದಾಯ ಶೇ. 88.99ರಷ್ಟು ಏರಿಕೆಯಾಗಿ 1,540.9 ಕೋಟಿ ರೂ. ತಲುಪಿದ್ದರೂ, ಕಂಪನಿಯ ನಿವ್ವಳ ನಷ್ಟ 761.4 ಕೋಟಿ ರೂ. ಏರಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿ 441.8 ಕೋಟಿ ರೂ. ನಷ್ಟ ಹೊಂದಿತ್ತು...

ಹೊಸದಿಲ್ಲಿ: ಪೇಟಿಎಂ ಮಾತೃ ಸಂಸ್ಥೆ ಒನ್‌97 ಕಮ್ಯುನಿಕೇಶನ್ಸ್ ಶುಕ್ರವಾರ ತನ್ನ ಮಾರ್ಚ್ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು ಕಂಪನಿಯ ನಷ್ಟ 761.4 ಕೋಟಿ ರೂ. ಏರಿಕೆಯಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿ 441.8 ಕೋಟಿ ರೂ. ನಷ್ಟ ಅನುಭವಿಸಿತ್ತು.

ಇದೇ ವೇಳೆ ಪೇಟಿಎಂ ಕಾರ್ಯಾಚರಣೆಗಳಿಂದ 1540.9 ಕೋಟಿ ರೂ. ಆದಾಯ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 815.3 ಕೋಟಿ ರೂ. ಇತ್ತು. ಇದಕ್ಕೆ ಹೋಲಿಸಿದರೆ ಕಂಪನಿಯ ಆದಾಯ ಶೇ. 88.99ರಷ್ಟು ಏರಿಕೆ ಕಂಡಿದೆ.

ಆದಾಯ ಹೆಚ್ಚಲು ಎಂಡಿಆರ್‌ ಬೇರಿಂಗ್ ಉಪಕರಣಗಳ ಮೂಲಕ (ಪೇಟಿಎಂ ವ್ಯಾಲೆಟ್‌, ಪೇಟಿಎಂ ಬ್ಯಾಂಕ್ ಖಾತೆ, ಕಾರ್ಡ್‌ಗಳು, ಇತ್ಯಾದಿ) ವ್ಯಾಪಾರಿಗಳು ಹೆಚ್ಚಿನ ಪಾವತಿಗಳನ್ನು ಪಡೆದುಕೊಂಡಿದ್ದೇ ಕಾರಣ ಎಂದು ಪೇಟಿಎಂ ಹೇಳಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಪಾಲುದಾರರ ಮೂಲಕ ಸಾಲಗಳ ವಿತರಣೆ ಏರಿಕೆಯಾಗಿದ್ದರಿಂದಲೂ ಆದಾಯ ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ.

paytm: Paytm Q4 loss widens to Rs 761 crore, average monthly transacting  users (MTU) grow 41% Y-o-Y - Times of India

ಇನ್ನು ಕಂಪನಿಯ ಸರಾಸರಿ ಮಾಸಿಕ ವಹಿವಾಟು ಬಳಕೆದಾರರ (ಎಂಟಿಯು) ಸಂಖ್ಯೆ, ಅಂದರೆ ಒಂದು ತಿಂಗಳಲ್ಲಿ ಕನಿಷ್ಠ ಒಂದು ಯಶಸ್ವಿ ಪಾವತಿ ಮಾಡಿದ ಬಳಕೆದಾರರ ಸಂಖ್ಯೆ ಶೇ. 41ರಷ್ಟು ಬೆಳವಣಿಗೆ ಕಂಡಿದ್ದು 7.09 ಕೋಟಿಗೆ ತಲುಪಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದೊಂದು ವರ್ಷದಲ್ಲಿ ನೀಡಲಾದ ಸಾಲಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಕಂಪನಿ ಹೇಳಿದ್ದು, 65 ಲಕ್ಷ ಸಾಲ ವಿತರಿಸಿರುವುದಾಗಿ ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 374ರಷ್ಟು ಸಾಲ ವಿತರಣೆ ಹೆಚ್ಚಾಗಿರುವುದಾಗಿ ತಿಳಿಸಿದೆ.

ಇಷ್ಟೆಲ್ಲಾ ಬೆಳವಣಿಗಳ ನಡುವೆಯೂ ಕಂಪನಿಯ ನಷ್ಟ ಮುಂದುವರಿದಿದೆ. ಆದಾಯ ಏರಿಕೆಯಾಗಿದ್ದರೂ ವೆಚ್ಚಗಳು ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಮೇಲಿನ ವೆಚ್ಚಗಳು 347.8 ಕೋಟಿ ರೂ.ನಿಂದ 863.4 ಕೋಟಿ ರೂ.ಗೆ ಏರಿಕೆಯಾಗಿವೆ.

paytm q4 results: ಆದಾಯ ಏರಿಕೆಯಾದರೂ ನಿಲ್ಲದ ನಷ್ಟ, ಮೂರೇ ತಿಂಗಳಲ್ಲಿ ಪೇಟಿಎಂಗೆ 761  ಕೋಟಿ ರೂ. ಲಾಸ್‌! - paytm q4 results company net loss widens to rs 761 crore  in march quarter | Vijaya Karnataka

ಪಾವತಿ ಪ್ರಕ್ರಿಯೆ ಶುಲ್ಕಗಳು ಮಾರ್ಚ್ 2022ರ ತ್ರೈಮಾಸಿಕದಲ್ಲಿ ಒಂದು ವರ್ಷದ ಹಿಂದೆ ಇದ್ದ 508.7 ಕೋಟಿ ರೂ.ನಿಂದ 774.2 ಕೋಟಿ ರೂಪಾಯಿಗಳಿಗೆ ಹೆಚ್ಚಿದ್ದು, ಶೇ. 52ರಷ್ಟು ಏರಿಕೆ ದಾಖಲಾಗಿದೆ. ಮಾರ್ಕೆಟಿಂಗ್ ವೆಚ್ಚಗಳು ಕೂಡ 100.1 ಕೋಟಿ ರೂ.ಗಳಿಂದ 248.9 ಕೋಟಿ ರೂ.ಗೆ ಏರಿಕೆಯಾಗಿವೆ.

ಒಟ್ಟಾರೆ ಇಡೀ ವರ್ಷದ ಲೆಕ್ಕ ತೆಗೆದುಕೊಂಡರೆ ಮಾರ್ಚ್ 31, 2022 ಕ್ಕೆ ಕೊನೆಗೊಂಡ ವರ್ಷದಲ್ಲಿ ಪೇಟಿಎಂ 2,396.4 ಕೋಟಿ ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷ ಕಂಪನಿ 1,701 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ ಆದಾಯ 2,802.4 ಕೋಟಿ ರೂ.ನಿಂದ ಶೇ. 77.49ರಷ್ಟು ಏರಿಕೆ ಕಂಡಿದ್ದು 4,974.2 ಕೋಟಿ ರೂ.ಗೆ ತಲುಪಿರುವುದೇ ಕಂಪನಿಯ ಪಾಲಿನ ಶುಭ ಸುದ್ದಿಯಾಗಿದೆ.

Paytm Q4 Results Company Net Loss Widens To Rs 761 Crore In March Quarter.