ಎಂಎನ್‌ಸಿ ಕಂಪನಿಗಳಿಂದ 2,00,000ಕ್ಕೂ ಹೆಚ್ಚು ಉದ್ಯೋಗ ಸೃಷ್ಠಿ

21-05-22 10:40 pm       sources: oneindia   ಉದ್ಯೋಗ

ದೇಶಾದ್ಯಂತ ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆಯೊಂದಿಗೆ, ಹೆಚ್ಚಿನ ಕಂಪನಿಗಳು ಈಗ ತಮ್ಮ ಉದ್ಯೋಗಿಗಳನ್ನು ಕಚೇರಿಯಿಂದಲೇ ಕೆಲಸ ಮಾಡುವುದಕ್ಕೆ ಬಯಸುತ್ತಿವೆ.

ನವದೆಹಲಿ, ಮೇ 21: ದೇಶಾದ್ಯಂತ ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆಯೊಂದಿಗೆ, ಹೆಚ್ಚಿನ ಕಂಪನಿಗಳು ಈಗ ತಮ್ಮ ಉದ್ಯೋಗಿಗಳನ್ನು ಕಚೇರಿಯಿಂದಲೇ ಕೆಲಸ ಮಾಡುವುದಕ್ಕೆ ಬಯಸುತ್ತಿವೆ. ಜೊತೆಗೆ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗಳಿಗೆ ಕರೆತರಲು ತೀವ್ರ ಆಸಕ್ತಿಯನ್ನು ತೋರಿಸುತ್ತಿವೆ. ಈಗಾಗಲೇ ಕೋವಿಡ್‌ ಸಾಂಕ್ರಾಮಿಕ ನಂತರದ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಗತಿಯಲ್ಲಿ ಏರಿಕೆ ಕಂಡಿವೆ ವರದಿಯಿಂದ ತಿಳಿದುಬಂದಿದೆ.

ಕೈಗಾರಿಕೆಗಳ ಪುನರಾರಂಭದ ಮಧ್ಯೆ, ಭಾರತೀಯ ಮೂಲದ ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಿದ್ಧವಾಗಿವೆ. ಎಕಾನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ ಭಾರತದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳು(ಜೆಸಿಸಿ) ಈ ವರ್ಷಾಂತ್ಯದ ವೇಳೆಗೆ ಸುಮಾರು 1,80, 000 ದಿಂದ 2,00,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸುತ್ತಿವೆ ಎಂದು ತಿಳಿದುಬಂದಿದೆ.

Blog: Decoding the future of Job Boards — People Matters

ಎಲ್ಲಿಲ್ಲಿ ಉದ್ಯೋಗವಕಾಶ ವಿಶೇಷ ಸಿಬ್ಬಂದಿ ಸಂಸ್ಥೆ Xpheno ಪ್ರಕಾರ, ಅಮೆಕ್ಸ್, ಬ್ಯಾಂಕ್ ಆಫ್ ಅಮೇರಿಕಾ, ವೆಲ್ಸ್ ಫಾರ್ಗೋ, ಸಿಟಿ, ಬಾರ್ಕ್ಲೇಸ್, ಮಾರ್ಗಾನ್ ಸ್ಟಾನ್ಲಿ, ಎಚ್‌ಎಸ್‌ಬಿಸಿ, ಸ್ಟ್ಯಾಂಡರ್ಡ್ ಚಾರ್ಟರ್ಡ್, ಗೋಲ್ಡ್‌ಮನ್ ಸ್ಯಾಚ್ಸ್, ಅಮೆಜಾನ್, ಟಾರ್ಗೆಟ್, ವಾಲ್‌ಮಾರ್ಟ್, ಶೆಲ್, ಜಿಎಸ್‌ಕೆ, ಅಬಾಟ್, ಫಿಜರ್, ಜೆ&ಜೆ, ನೊವಾರ್ಟಿಸ್ ಮತ್ತು ಅಸ್ಟ್ರಾಜೆನೆಕಾ ಸೇರಿದಂತೆ ಹಲವಾರು ಸಂಸ್ಥೆಗಳು ನೇಮಕಾತಿ ಆರಂಭಿಸಿವೆ. ಸಾಂಕ್ರಾಮಿಕ ನಂತರದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದ ನಂತರ ತ್ವರಿತಗತಿಯ ನೇಮಕಾತಿಗೆ ಹಲವು ಕಂಪನಿಗಳು ಮುಂದಾಗಿವೆ ಎಂದು Xpheno ಸಹಸಂಸ್ಥಾಪಕ ಅನಿಲ್ ಎಥನೂರ್ ತಿಳಿಸಿದ್ದಾರೆ.

Search | Nestlé

ಯಾರಿಗೆ ಬೇಡಿಕೆ ಹೆಚ್ಚು ಸಾಂಕ್ರಮಿಕದ ನಂತರ ಪ್ರಪಂಚ ಹೆಚ್ಚು ಡಿಜಿಟಲ್‌ಗೆ ಮಾರುಹೋಗಿದೆ. ಟೆಕ್‌ ಮತ್ತು ಡಿಜಿಟಿಲ್‌ ತಾಣಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಕೋರ್ ಡೆವೆಲ್ಪ್‌ಮೆಂಟ್‌, ಡೆವೋಪ್ಸ್‌, ಕ್ಲೌಡ್ ಮತ್ತು ಸೈಬರ್ ಸೆಕ್ಯುರಿಟಿ, ವರ್ಚುವಲೈಸೇಶನ್, ಡೇಟಾ ಅನಾಲಿಟಿಕ್ಸ್ ಮತ್ತು ಎಂಟರ್‌ಪ್ರೈಸ್ ಮೊಬಿಲಿಟಿಯಲ್ಲಿ ಹೆಚ್ಚು ಬೇಡಿಕೆ ಉಂಟಾಗಿದೆ. ಅದರ ಹೊರತಾಗಿ, ಆರ್ಟಿಫಿಸಿಯಲ್ ಇಂಟಲಿಜೆನ್ಸ್, ಮಷಿನ್ ಲರ್ನಿಂಗ್, ಇಂಟರ್ನೆಟ್ ಆಫ್ ತಿಂಗ್ಸ್‌(IoT), ರೊಬೊಟಿಕ್ ಪ್ರೋಸಸ್‌ ಆಟೊಮೇಷನ್ (RPA) ಮತ್ತು ಬ್ಲಾಕ್‌ಚೈನ್‌ನಲ್ಲಿನ ಕಾರ್ಯನಿರ್ವಹಿಸುವವರಿಗೆ ಬೇಡಿಕೆಯಿದೆ.

Xpheno ಒದಗಿಸಿದ ಮಾಹಿತಿಯ ಪ್ರಕಾರ, ಪ್ರಸ್ತುತ ದೇಶಾದ್ಯಂತ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI), ಐಟಿ ಸಾಫ್ಟ್‌ವೇರ್, ಆಟೋಮೋಟಿವ್, ಫಾರ್ಮಾಸ್ಯುಟಿಕಲ್ಸ್, ಚಿಲ್ಲರೆ , ತೈಲ ಮತ್ತು ಅನಿಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟಾಗಿ 2021-22ರಲ್ಲಿ ಭಾರತದಲ್ಲಿ ಸುಮಾರು 1,70,000 ಉದ್ಯೋಗಗಳನ್ನು ತೆರೆದಿದ್ದವು, ಆದರೆ ಒಟ್ಟು 3,50,000 ನೇಮಕಾತಿಯಾಗಿತ್ತು. ಈ ವರ್ಷದಲ್ಲಿ 2 ಲಕ್ಷದಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

More than 200,000 jobs are created by MNC companies.