ಬ್ರೇಕಿಂಗ್ ನ್ಯೂಸ್
09-07-22 11:20 am HK News Desk ಕರ್ನಾಟಕ
ಶಿವಮೊಗ್ಗ, ಜುಲೈ 9 : ನಾನು ಗೃಹ ಸಚಿವರಿಗೆ 10 ನಿಮಿಷ ಸಮಯ ಕೇಳಿದ್ದೆ. ಆದರೆ ಸಚಿವರು ನನಗೆ ಸಮಯ ನೀಡಲಿಲ್ಲ. ತಮ್ಮನನ್ನು ಕಳೆದುಕೊಂಡ ನನಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿ ಕಳಿಸಿದ್ದಾರೆ. ಅವರು ಹಾಗೆ ವರ್ತಿಸಿದ್ದು ನಮ್ಮನ್ನು ಕುಗ್ಗಿಸಿದೆ. 10 ನಿಮಿಷ ನಮಗಾಗಿ ಟೈಮ್ ನೀಡಿಲ್ಲ ಎನ್ನುವುದನ್ನು ಕೇಳಿ ಬೇಜಾರಾಗುತ್ತದೆ ಎಂದು ಶಿವಮೊಗ್ಗದಲ್ಲಿ ಕೊಲೆಯಾದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷನ ಅಕ್ಕ ಅಶ್ವಿನಿ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಗೃಹ ಸಚಿವರನ್ನು ಭೇಟಿಯಾಗಲು ಹೋಗಿದ್ದ ಸಂದರ್ಭ ಅಶ್ವಿನಿಯನ್ನು ಬೈದು ಕಳಿಸಿದ ವಿಡಿಯೋ ವೈರಲ್ ಆಗಿತ್ತು. ತನಗಾದ ಅವಮಾನದ ಬಗ್ಗೆ ಅಶ್ವಿನಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ್ದು ಗೃಹ ಸಚಿವರ ನಡೆಯನ್ನು ಪ್ರಶ್ನಿಸಿದ್ದಾರೆ.
ಜೈಲಿನಲ್ಲಿ ಹಂತಕರಿಗೆ ರಾಜೋಪಚಾರ ನೀಡಿದ ಅಧಿಕಾರಿಗಳಿಗೆ ವರ್ಗಾವಣೆ ಬೇಡ. ಅವರನ್ನ ಕೆಲಸದಿಂದ ತೆಗೆಯಿರಿ ಎಂದು ಹೇಳಿದ್ದೆ. ವಿಡಿಯೋ ಮಾಡಲು ಬಿಟ್ಟ ಕಾರಾಗೃಹ ಪೊಲೀಸರಿಗೆ ಕೆಲಸದಿಂದ ವಜಾ ಮಾಡಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ನನಗೆ ಸ್ವಾರ್ಥ ಇಲ್ಲ, ನನ್ನ ತಮ್ಮನ ಸಾವಿಗೆ ನ್ಯಾಯ ಬೇಕು.
ರಾತ್ರಿ 8 ಗಂಟೆಗೆ ಒಬ್ಬ ಹೆಣ್ಣು ಮಗಳು ಸಚಿವರನ್ನು ಭೇಟಿಯಾಗಲು ಹೋದಾಗ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೈಲಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೀರಾ? ಇಲ್ಲವೇ ಕೆಲಸದಿಂದ ತೆಗೆಯುತ್ತೀರಾ ಅದನ್ನಾದರೂ ಹೇಳಿ ಎಂದು ಕೇಳಿದ್ದೆಯಷ್ಟೇ. ಗೃಹ ಸಚಿವರು ನಮಗೆ ಆಪ್ತರು ಎಂದು ಅದೇ ನಂಬಿಕೆ ಮೇಲೆ ನಾನೂ ಹೋಗಿದ್ದೆ. ನಮ್ಮ ಮನೆಗೆ ಬಂದಾಗ ನಿಮಗೆ ಕಷ್ಟ ಬಂದಾಗ ನನ್ನ ಬಳಿ ಬನ್ನಿ ಎಂದು ಹೇಳಿದ್ದರು. ಹೀಗಾಗಿ ನಾನು ಅವರ ಬಳಿ ಹೋಗಿದ್ದೆ.
ಆದರೆ ಸಚಿವರು ನನ್ನ ಬಳಿ ಹೆಣ್ಣು ಮಗಳು ಎಂದು ಸಮಾಧಾನದಿಂದ ಮಾತನಾಡುವುದಕ್ಕೂ ಹೋಗಲಿಲ್ಲ. ಗಟ್ಟಿ ದನಿಯಲ್ಲಿ ಮಾತನಾಡಿ ಕಳಿಸಿದ್ದಾರೆ. ಹಾಗಾದರೆ ನಮಗೆ ನ್ಯಾಯ ಸಿಗಲ್ವಾ..? ನಾವು ಹರ್ಷನ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ ಅಷ್ಟೇ. ಜೈಲಿನಲ್ಲಿ ನಡೆದ ರಾಜಾತಿಥ್ಯ ಖಂಡಿಸಿ ನಾಳೆ ಪ್ರತಿಭಟನೆ ನಡೆಸಲಾಗುವುದು. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಿಂದು ಜಾಗರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಶ್ವಿನಿ ತಿಳಿಸಿದ್ದಾರೆ.
The sister of slain Bajrang Dal worker Harsha expressed her unhappiness over the harsh tone used by Karnataka Home Minister Araga Jnanendra, when she tried to speak to him on Tuesday in Bengaluru. The video of the Minister raising his voice at Ashwini, the elder sister of Harsha, went viral on social media, spurring many to criticise him for his behaviour. Addressing a press conference on Friday in Shivamogga, Ashwini said that she had tried to meet the Home Minister, after being assured that the Minister was aware she wanted to speak to him about the videos circulated of the accused who are in jail for Harsha’s killing.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm