ಬ್ರೇಕಿಂಗ್ ನ್ಯೂಸ್
21-09-22 08:02 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.21: ಶಿವಮೊಗ್ಗದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರು ದೇಶಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದರು. ಇದಕ್ಕಾಗಿ ತುಂಗಭದ್ರಾ ನದಿ ತಟದ ನಿರ್ಜನ ಪ್ರದೇಶದಲ್ಲಿ ಬಾಂಬ್ ತಯಾರಿಸಿ ಪ್ರಯೋಗ ನಡೆಸುತ್ತಿದ್ದರು ಎನ್ನುವ ಮಾಹಿತಿ ತನಿಖೆಯಲ್ಲಿ ಕಂಡುಬಂದಿದ್ದು, ಬಂಧಿತರನ್ನು ಅಲ್ಲಿನ ವಿವಿಧ ಪ್ರದೇಶಗಳಿಗೆ ಕರೆದೊಯ್ದು ಮಹಜರು ನಡೆಸಿದ್ದಾರೆ.
ಸೈಯದ್ ಯಾಸಿನ್ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ತಾಂತ್ರಿಕ ಪರಿಣತಿ ಪಡೆದಿದ್ದರೆ, ಮಾಝ್ ಮುನೀರ್ ಅಹ್ಮದ್ ಎಂಟೆಕ್ ಪದವೀಧರನಾಗಿದ್ದು ಆಧುನಿಕ ರೀತಿಯ ಸ್ಫೋಟಕಗಳನ್ನು ತಯಾರಿಸುವ ಬಗ್ಗೆ ಪ್ರಯೋಗ ನಡೆಸುತ್ತಿದ್ದರು. ಇವರಿಬ್ಬರು ಕೂಡ ತುಂಗಭದ್ರಾ ದಡ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಬಾಂಬ್ ತಯಾರಿಗಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಈ ಬಗ್ಗೆ ಬೇರೆಯವರಿಗೂ ತರಬೇತಿ ನೀಡುತ್ತಿದ್ದರು. ತುಂಗಭದ್ರಾ ನದಿಯ ಹಳೇ ಗುರುಪುರ ವಲಯದ 17 ಕಡೆಗಳಲ್ಲಿ ಇಂಥ ಶಿಬಿರಗಳನ್ನು ನಡೆಸುತ್ತಿದ್ದರು. ಮತ್ತು ಅಲ್ಲಿ ವಿವಿಧ ಮಾದರಿಯ ಸ್ಫೋಟಕಗಳನ್ನು ಅಡಗಿಸಿಟ್ಟಿರುವುದು ಮಹಜರು ವೇಳೆ ಪತ್ತೆಯಾಗಿದೆ ಎನ್ನುವ ಮಾಹಿತಿಗಳಿವೆ. ದಾವಣಗೆರೆ ಮತ್ತು ಬೆಂಗಳೂರಿನಿಂದ ಬಂದಿದ್ದ ಎಫ್ಎಸ್ಎಲ್ ತಜ್ಞರ ತಂಡ ಚನ್ನಗಿರಿ ರಸ್ತೆಯ ಗುರುಪುರ- ಪುರಲೆ ಪ್ರದೇಶದಲ್ಲಿ ಸ್ಫೋಟಕಗಳನ್ನು ಅಡಗಿಸಿದ್ದಾರೆಂಬ ಶಂಕೆ ಮೇರೆಗೆ ಸ್ಥಳ ಮಹಜರು ನಡೆಸಿದ್ದಾರೆ.
ಆರೋಪಿಗಳು ತಮ್ಮೊಳಗೆ ಸಂವಹನ ನಡೆಸುವುದಕ್ಕೆ Wire App ಎನ್ನುವ ಅಪ್ಲಿಕೇಶನ್ ಬಳಸುತ್ತಿದ್ದರು. ಇದರಲ್ಲಿ ನೂರಕ್ಕೂ ಹೆಚ್ಚು ಮಂದಿ ತಂಡವಾಗಿ ಇದೇ ಏಪ್ ಬಳಕೆ ಮಾಡುತ್ತಿದ್ದುದು ತನಿಖೆಯಲ್ಲಿ ಪತ್ತೆಯಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣದಲ್ಲಿ ಬಂಧನವಾಗಿದ್ದ ಜಬೀವುಲ್ಲಾ ನೀಡಿದ್ದ ಮಾಹಿತಿ ಅನುಸರಿಸಿ ಪೊಲೀಸರು ತನಿಖೆ ನಡೆಸಿದಾಗ ಉಗ್ರರ ಜಾಲ ಬಯಲಾಗಿತ್ತು. ಇವರೆಲ್ಲ ಐಸಿಸ್ ಉಗ್ರರ ಪರವಾಗಿ ಕೆಲಸ ಮಾಡುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
ಐಸಿಸ್ ಉಗ್ರರ ಲಿಂಕ್ ; ಶಿವಮೊಗ್ಗ ಪೊಲೀಸರಿಂದ ಮೂವರ ಬಂಧನ, ಮಂಗಳೂರಿನ ಗೋಡೆ ಬರಹ ಪ್ರಕರಣಕ್ಕೆ ನಂಟು !
Shivamogga terror suspects, explosives were made near Tungabhadra River side. Shivamogga police are investigating the activities of two persons arrested on the charge of having links with Islamic State (ISIS), which is a banned terror organisation. Police suspect the accused were in possession of explosives and intended to damage public property.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
06-02-25 02:21 pm
HK News Desk
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm