ಬ್ರೇಕಿಂಗ್ ನ್ಯೂಸ್
01-11-22 09:33 pm HK News Desk ಕರ್ನಾಟಕ
ತುಮಕೂರು, ನ.1 : ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ಪಿಎಸ್ಐ ಹಗರಣದಿಂದಾಗಿ ತಮಗೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಳ್ಳಲು ಬಂದಿದ್ದ ಪಿಎಸ್ಐ ಅಭ್ಯರ್ಥಿಗೆ ಡಿವೈಎಸ್‌ಪಿ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಸಚಿವರು ಮತ್ತು ಸಾರ್ವಜನಿಕರ ಎದುರಲ್ಲೇ ತುಮಕೂರು ಡಿವೈಎಸ್‌ಪಿ ಪಿ. ಶ್ರೀನಿವಾಸ್ ಪೊಲೀಸ್ ಉದ್ಯೋಗಾಂಕ್ಷಿಗೆ ಕಪಾಳಮೋಕ್ಷ ಮಾಡಿ ದರ್ಪ ತೋರಿದ್ದು ಈ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸ್ ಉದ್ಯೋಗಾಂಕ್ಷಿಗಳು, ಗೃಹ ಸಚಿವರ ಬಳಿ ಮನವಿ ಹೇಳಿಕೊಳ್ಳಲು ಬಂದಿದ್ದರು. ಪಿಎಸ್ಐ ಪರೀಕ್ಷೆ ರದ್ದು ಮಾಡಿರುವುದರಿಂದ ತಮಗೆ ಸಮಸ್ಯೆಯಾಗಿದೆ, ನೇಮಕಾತಿ ವಯೋಮಿತಿಯನ್ನು ಹೆಚ್ಚಳ ಮಾಡುವಂತೆ ಸಚಿವರ ಬಳಿ ಮನವಿ ಮಾಡಲು ಬಂದಿದ್ದರು. ಆದರೆ ಗೃಹ ಸಚಿವರು ಇದ್ದ ವೇದಿಕೆ ಬಳಿ ತೆರಳಲು ಅಭ್ಯರ್ಥಿಗಳಿಗೆ ಅಲ್ಲಿದ್ದ ಪೊಲೀಸರು ಅವಕಾಶ ನೀಡಲಿಲ್ಲ. ಪ್ರಶ್ನಿಸಿದ ಅಭ್ಯರ್ಥಿ ಒಬ್ಬನಿಗೆ ಡಿವೈಎಸ್‌ಪಿ ದರ್ಪ ತೋರಿ ಕಪಾಳ ಮೋಕ್ಷ ಮಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅಧಿಕಾರಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಮನುಷ್ಯತ್ವವಿಲ್ಲದ ಸರ್ಕಾರ ; ಸಿದ್ದರಾಮಯ್ಯ
ಈ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಮನುಷ್ಯತ್ವವಿಲ್ಲದ ಸರ್ಕಾರ, ಈ ರೀತಿಯ ಘಟನೆಗಳು ಯಾವಾಗಲೂ ನಡೆಯುತ್ತಿವೆ. ವಾರದ ಹಿಂದಷ್ಟೇ ವಸತಿ ಸಚಿವ ವಿ. ಸೋಮಣ್ಣ ಮಹಿಳೆಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದರು. ಈ ರೀತಿಯ ಸಚಿವರು ರಾಜ್ಯದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
#WATCH | Karnataka: Tumakuru Dy SP P Srinivas slapped & sent away victims of the PSI (police sub-inspector) recruitment scam, today. Victims had come to speak with the State Home Minister Araga Jnanendra about the difficulties they faced due to the scam. pic.twitter.com/UfmGzARilv
— ANI (@ANI) November 1, 2022
A shocking video of deputy SP slapping the victims of a police sub-inspector recruitment scam in Karnataka's Tumakuru went viral on social media. Victims of Karnataka PSI recruitment came to speak to state home minister Araga Jnanendra about the difficulties being faced by the candidates due to the scam in the recruitment drive. In the video going viral on social media, Tumakuru Deputy SP P Srinivas is seen slapping and sending the victims of the PSI recruitment scam away.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm