ಬಿಜೆಪಿ ಸಂಸದರಿದ್ದರೂ ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪನೆ ಯಾಕೆ ಸಾಧ್ಯವಾಗಿಲ್ಲ ; ಕಾಂಗ್ರೆಸ್ ಪ್ರಶ್ನೆ

25-11-22 09:25 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ 25 ಬಿಜಪಿ ಸಂಸದರಿದ್ದರೂ, ಕೇಂದ್ರದಲ್ಲಿ ಬಿಜೆಪಿ ಸರಕಾರಕ್ಕೆ ಒತ್ತಡ ಹೇರಿ ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪನೆಗೆ ಸಾಧ್ಯವಾಗಿಲ್ಲ. ಬಿಜೆಪಿಯವರದ್ದು ಕೇವಲ ಭಾಷಣ ಮಾತ್ರ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರು, ನ.25 : ರಾಜ್ಯದಲ್ಲಿ 25 ಬಿಜಪಿ ಸಂಸದರಿದ್ದರೂ, ಕೇಂದ್ರದಲ್ಲಿ ಬಿಜೆಪಿ ಸರಕಾರಕ್ಕೆ ಒತ್ತಡ ಹೇರಿ ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪನೆಗೆ ಸಾಧ್ಯವಾಗಿಲ್ಲ. ಬಿಜೆಪಿಯವರದ್ದು ಕೇವಲ ಭಾಷಣ ಮಾತ್ರ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.

ರಾಜ್ಯ ಕಾಂಗ್ರೆಸ್, ಬಿಜೆಪಿ ಸರಕಾರಕ್ಕೆ ನಿರಂತರ ಪ್ರಶ್ನೆಗಳನ್ನು ಮಾಡುತ್ತಿದ್ದು, ಪಕ್ಷದ ಪ್ರಣಾಳಿಕೆಯಿಂದ ಹಿಡಿದು ಜ್ವಲಂತ ಸಮಸ್ಯೆ, ಸನ್ನಿವೇಶಗಳ ಬಗ್ಗೆ ಟ್ವೀಟ್ ಮೂಲಕ ಪ್ರಶ್ನೆ ಮುಂದಿಡುತ್ತಿದೆ. ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಆಗಿರುವ ಹಿನ್ನೆಲೆಯಲ್ಲಿ ಎನ್ಐಎ ಕಚೇರಿ ಸ್ಥಾಪನೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನೆ ಮಾಡಿದೆ. ಬಿಜೆಪಿಯವರು ಬರೀ ಭಾಷಣದಲ್ಲಿ ಮಾತ್ರ ಹೇಳುತ್ತಾರೆ. ಕಾರ್ಯದಲ್ಲಿ ತೋರಿಸೋದಿಲ್ಲ ಎಂದು ಟೀಕಿಸಿದೆ.

ನ.19ರಂದು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ಆಟೋ ಚಾಲಕ ಸೇರಿದಂತೆ ಉಗ್ರ ಮೊಹಮ್ಮದ್ ಶಾರೀಕ್ ಗಂಭೀರ ಗಾಯಗೊಂಡಿದ್ದಾರೆ. ಭಯೋತ್ಪಾದಕ ಕೃತ್ಯ ದೇಶದ ಗಮನ ಸೆಳೆದಿದ್ದು, ಮಂಗಳೂರಿನಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಎನ್ಐಎ ಕಚೇರಿ ಸ್ಥಾಪನೆ ಸಾಧ್ಯವಾಗದೇ ಇರುವುದೇ ಇಂಥ ಘಟನೆಗಳಿಗೆ ಕಾರಣ ಎನ್ನುವ ಟೀಕೆ ಕೇಳಿಬಂದಿತ್ತು. ಮಂಗಳೂರು ಸೇರಿದಂತೆ ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದರೂ, ಎನ್ಐಎ ಕಚೇರಿ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂಬ ಕಾಂಗ್ರೆಸ್ ಟೀಕೆ ಸಾರ್ವಜನಿಕರ ಗಮನ ಸೆಳೆದಿದೆ.

Mangalore autorickshaw bomb blast, why BJP has failed to bring NIA office in Mangalore being in power slams Karnataka congres on twitter