ಮದುವೆಗೆ ಹೆಣ್ಣು ಹುಡುಕಿ ಕೊಡುವಂತೆ ಪೊಲೀಸ್ ವರಿಷ್ಠರಿಗೆ ಪತ್ರ ಬರೆದ ಯುವಕ !

26-11-22 02:05 pm       HK News Desk   ಕರ್ನಾಟಕ

ಹುಡುಗರಿಗೆ ಸೂಕ್ತ ಹುಡುಗಿ ಸಿಗುತ್ತಿಲ್ಲ ಎನ್ನುವ ಕೊರಗಿನ ಮಧ್ಯೆ ಇಲ್ಲೊಬ್ಬ ಯುವಕ ತನಗೆ ಮದುವೆಯಾಗಲು ಹೆಣ್ಣು ಹುಡುಕಿ ಕೊಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಪತ್ರ ಬರೆದಿದ್ದಾನೆ.

ಶಿವಮೊಗ್ಗ, ನ.26: ಹುಡುಗರಿಗೆ ಸೂಕ್ತ ಹುಡುಗಿ ಸಿಗುತ್ತಿಲ್ಲ ಎನ್ನುವ ಕೊರಗಿನ ಮಧ್ಯೆ ಇಲ್ಲೊಬ್ಬ ಯುವಕ ತನಗೆ ಮದುವೆಯಾಗಲು ಹೆಣ್ಣು ಹುಡುಕಿ ಕೊಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಪತ್ರ ಬರೆದಿದ್ದಾನೆ.

ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೀಗೆ ಪತ್ರ ಬರೆದಿದ್ದು, ಅದರ ಪ್ರತಿ ವೈರಲ್ ಆಗಿದೆ. ಭದ್ರಾವತಿ ತಾಲೂಕಿನ ಹೊಸಮನೆ ನಿವಾಸಿಯಾಗಿರುವ ಪ್ರವೀಣ್ ಹೀಗೆ ಪತ್ರ ಬರೆದಿರುವಾತ. ತೋಟಗಾರಿಕೆ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಸಣ್ಣಸಂಗಪ್ಪ ಅವರ ಪುತ್ರ ಪ್ರವೀಣ್ ಮದುವೆಗೆ ಹೆಣ್ಣು ಹುಡುಕಿ ಕೊಡುವಂತೆ ಎಸ್ಪಿಗೆ ಪತ್ರ ಬರೆದು ಸುದ್ದಿಯಾಗಿದ್ದಾನೆ.

ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಶಿವಮೊಗ್ಗ ಎಸ್‌ಪಿಗೆ ಭದ್ರಾವತಿ ಯುವಕನಿಂದ ಪತ್ರ  | Find girl to marriage; Man wrote letter to Shivamogga SP - Kannada  Oneindia

ಈ ಹಿಂದೆ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ್ದ ಪ್ರವೀಣ್ ಒ.ಎಸ್., ಸದ್ಯ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ನಡೆಸುತ್ತಿದ್ದಾನೆ. ಸಣ್ಣಸಂಗಪ್ಪ ಆಂಧ್ರ ಮೂಲದವರಾಗಿದ್ದು, ಸರಕಾರಿ ಸೇವೆಯಲ್ಲಿ ನಿವೃತ್ತರಾಗಿ ಶಿವಮೊಗ್ಗದಲ್ಲಿಯೇ ನೆಲೆಸಿದ್ದಾರೆ. ಆದರೆ ಕುಟುಂಬಸ್ಥರು ಆಂಧ್ರದಲ್ಲಿಯೇ ಇದ್ದು, ಹೆಚ್ಚು ಸಂಪರ್ಕದಲ್ಲಿ ಇಲ್ಲ ಎನ್ನಲಾಗುತ್ತಿದೆ. ಈ ನಡುವೆ, ಮಗ ಪ್ರವೀಣ್ ತನಗೊಂದು ಹೆಣ್ಣು ಹುಡುಕಿಕೊಡಿ ಎಂದು ಎಸ್ಪಿಗೆ ಪತ್ರ ಬರೆದಿದ್ದಾನೆ.

ಪ್ರವೀಣ್ ಪತ್ರವನ್ನು ನೋಡಿದ ಎಸ್ಪಿ ಮಿಥುನ್ ಕುಮಾರ್, ಈ ಬಗ್ಗೆ ಚೆಕ್ ಮಾಡುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ನಿಜಕ್ಕೂ ಆತನಿಗೆ ಹೆಣ್ಣು ಸಿಗದೆ ಸಮಸ್ಯೆಗೀಡಾಗಿದ್ದಾನೆಯೇ ಅಥವಾ ಸುಮ್ಮನೆ ಪೊಲೀಸರಿಗೆ ಪತ್ರ ಬರೆದಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಸದ್ಯ ಪತ್ರ ಬರೆದ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕೃಷಿ ಕೆಲಸ ನಡೆಸುವ ಮಂದಿಯನ್ನು ಕಲಿತ ಹುಡುಗಿಯರು ಮದುವೆಯಾಗುತ್ತಿಲ್ಲ ಎನ್ನುವ ಕೊರಗು ಒಂದೆಡೆಯಾಗಿದ್ದರೆ, ಕೆಲವರಿಗೆ ಸಂಬಂಧಿಕರನ್ನೆಲ್ಲ ಬಿಟ್ಟು ದೂರದಲ್ಲಿ ತನ್ನ ಪಾಡಿಗೆ ಕುಳಿತ ಕುಟುಂಬದ ವ್ಯಕ್ತಿಗಳಿಗೆ ಹೆಣ್ಣು ಸಿಗದೆ ಪರಿತಪಿಸುವಂತಾಗಿದೆ.

Man writes letter to SP of Shivamogga seeking help for good proposal for marriage.