ಕಾಂತರಾ ಸಿನಿಮಾ ಖ್ಯಾತಿಯ  ರಿಷಬ್‌ ಶೆಟ್ಟಿಗೆ ಪ್ರತಿಷ್ಠಿತ ಸಿದ್ಧಶ್ರೀ  ಪ್ರಶಸ್ತಿ ಘೋಷಣೆ 

27-11-22 07:55 pm       HK News Desk   ಕರ್ನಾಟಕ

ಕಾಂತಾರ ಸಿನಿಮಾದ ಮೂಲಕ ಕನ್ನಡ ಸಿನಿಮಾದ ಕೀರ್ತಿಯನ್ನು ದೇಶ-ವಿದೇಶಗಳಿಗೆ ಹಬ್ಬಿಸಿದ, ಎಲ್ಲರೂ ಕನ್ನಡ ಚಿತ್ರರಂಗದೆಡೆಗೆ ತಿರುಗಿ ನೋಡುವಂತೆ ಮಾಡಿದ ರಿಷಬ್‌ ಶೆಟ್ಟಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಒಲಿದಿದೆ.

ಕಲಬುರಗಿ, ನ.27: ಕಾಂತಾರ ಸಿನಿಮಾದ ಮೂಲಕ ಕನ್ನಡ ಸಿನಿಮಾದ ಕೀರ್ತಿಯನ್ನು ದೇಶ-ವಿದೇಶಗಳಿಗೆ ಹಬ್ಬಿಸಿದ, ಎಲ್ಲರೂ ಕನ್ನಡ ಚಿತ್ರರಂಗದೆಡೆಗೆ ತಿರುಗಿ ನೋಡುವಂತೆ ಮಾಡಿದ ರಿಷಬ್‌ ಶೆಟ್ಟಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಒಲಿದಿದೆ. ಕಳೆದ ವರ್ಷ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಸಿದ್ಧಶ್ರೀ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ರಾಷ್ಟ್ರಮಟ್ಟದ ಈ ಪ್ರಶಸ್ತಿಯನ್ನು ರಿಷಬ್‌ ಶೆಟ್ಟಿ ಅವರಿಗೆ ಘೋಷಣೆ ಮಾಡಲಾಗಿದೆ.

ಕಲಬುರಗಿಯ ಜಿಡಗಾ ಮುಗಳಖೋಡ ಕೋಟನೂರ ಮಠದಿಂದ ನೀಡುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ. ಈ ರಾಷ್ಟ್ರಮಟ್ಟದ ಪ್ರಶಸ್ತಿಗೆ ಕಾಂತಾರ ಸಿನಿಮಾದ ನಿರ್ದೇಶಕ ಮತ್ತು ನಟ ರಿಷಬ್‌ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.

ಡಿಸೆಂಬರ್‌ 2ರಂದು ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುರಾಜೇಂದ್ರ ಮಹಾಸ್ವಾಮಿಗಳ 38ನೇ ಗುರುವಂದನೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ರಿಷಬ್‌ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುವುದೆಂದು ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಮಾದನಹಿಪ್ಪರಗಾ ವಿರಕ್ತಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ಅಧ್ಯಕ್ಷರಾದ ಚಿನ್ಮಯಗಿರಿ ಮಹಾಂತೇಶ್ವರ ಮಠದ ಶ್ರೀ ವೀರಮಹಾಂತ ಶಿವಾಚಾರ್ಯರು ತಿಳಿಸಿದ್ದಾರೆ.

puneeth rajkumar death, Puneeth Rajkumar: 'ನೋವಿನಲ್ಲೇ ಇದ್ದೇವೆ, ಪದೇ ಪದೇ ನೋವು  ಮಾಡಬೇಡಿ'- ನಟ ಶಿವರಾಜ್‌ಕುಮಾರ್ - puneeth rajkumars 11th day rituals  shivarajkumar speaks about his brother appu - Vijaya Karnataka

ಕಳೆದ ವರ್ಷ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ದಿ. ಪುನೀತ್‌ ರಾಜಕುಮಾರ್‌ ಅವರಿಗೆ ನೀಡಲಾಗಿತ್ತು. ಲಿಂಗೈಕ ಶ್ರೀ ಡಾ. ಶಿವಕುಮಾರ ಸ್ವಾಮೀಜಿ, ಪಂಡಿತ ಪುಟ್ಟರಾಜ ಗವಾಯಿ ಸೇರಿದಂತೆ ಹಲವು ಪ್ರಮುಖರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೈವರಾಧನೆ ಕುರಿತು ಅಮೋಘ ಚಿತ್ರ ನಿರ್ಮಿಸಿ ಹೊರರಾಜ್ಯ, ಹೊರದೇಶಗಳಲ್ಲಿ ಜನರೂ ಕರುನಾಡಿನತ್ತ ತಿರುಗಿ ನೋಡುಂತೆ ಮಾಡಿದ ರಿಷಬ್‌ ಶೆಟ್ಟಿ ಅವರಿಗೆ ಈ ಪ್ರಶಸ್ತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕೆಪಿಎಸ್‌ಸಿ ಅಧ್ಯಕ್ಷರಾದ ಶಿವಸಂಕ್ರಪ್ಪ ಸಾಹುಕಾರ ಅವರನ್ನೂ ಗೌರವಿಸಲಾಗುತ್ತದೆ. ಕನ್ನಡ ಸಂಗೀತ ನಿರ್ದೇಶಕರಾದ ವಿ. ನಾಗೇಂದ್ರ ಪ್ರಸಾದ್‌ ಅವರನ್ನೂ ಗೌರವಿಸಲಾಗುತ್ತದೆ.

ಸಿದ್ಧಶ್ರೀ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, 20 ಗ್ರಾಂನ ಚಿನ್ನದ ಪದಕ ಹೊಂದಿದೆ.

ರಿಷಬ್‌ ಶೆಟ್ಟಿ ಅವರು ಈ ಹಿಂದೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಮುಖವಾಗಿ ಫಿಲ್ಮ್‌ಫೇರ್‌ ಅವಾರ್ಡ್‌ 2017ಮತ್ತು ರಾಷ್ಟ್ರೀಯ ಪ್ರಶಸ್ತಿ (2018) ಪಡೆದಿದ್ದಾರೆ. ಕಿರಿಕ್‌ ಪಾರ್ಟಿ ನಿರ್ದೇಶನಕ್ಕಾಗಿ ಇವರು 2017ರಲ್ಲಿ ಫಿಲ್ಮ್‌ಫೇರ್‌ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕಾಗಿ ಅತ್ಯುತ್ತಮ ಮಕ್ಕಳ ಸಿನಿಮಾ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.

Who is Kantara director and actor Rishab Shetty? Net worth, best movies,  upcoming projects, career, family | Trending News – India TV

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ತುಳು ನಾಡಿನ ಸಂಪ್ರದಾಯ ದೈವ ಕೋಲದ ಕುರಿತಾದ ಕಥಾಹಂದರ ಹೊಂದಿರುವ ‘ಕಾಂತಾರ’ ಸಿನಿಮಾಗೆ ಪರಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈವರೆಗೂ ‘ಕಾಂತಾರ’ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ ಅನೇಕ ದಾಖಲೆಗಳನ್ನ ‘ಕಾಂತಾರ’ ಸಿನಿಮಾ ಪುಡಿ ಪುಡಿ ಮಾಡಿದೆ.

Filmy Corner  on Twitter: "'#KANTARA' CROSSES ₹ 400 CR Gross WORLDWIDE… ⭐️  #Karnataka: ₹ 168.50 cr ⭐️ #Andhra / #Telangana: ₹ 60 cr ⭐️ #TamilNadu: ₹  12.70 cr ⭐️ #Kerala: ₹ 19.20 cr ⭐️ #Overseas: ₹ 44.50 cr ⭐️ #NorthIndia: ₹  96 cr ...

ಕಾಂತಾರ ಸಿನಿಮಾವು ಅಮೇಜಾನ್‌ ಪ್ರೈಮ್‌ನಲ್ಲಿಯೂ ಬಿಡುಗಡೆಗೊಂಡು, ಪ್ರೈಮ್‌ ವೀಕ್ಷಕರ ಮನೆಮನ ತಲುಪುತ್ತಿದೆ.

Kantara: Rishab Shetty's film about Tulunadu's folklore is finally getting  dubbed in Tulu

‘ಕಾಂತಾರ’ ಸಿನಿಮಾ ತುಳು ಭಾಷೆಯಲ್ಲೂ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೇ ತುಳು ಭಾಷೆಯ ‘ಕಾಂತಾರ’ ಟ್ರೈಲರ್ ಬಿಡುಗಡೆಯಾಗಿತ್ತು. ಬರುವ ಡಿಸೆಂಬರ್ 2 ರಂದು ತುಳು ಭಾಷೆಯಲ್ಲಿ ‘ಕಾಂತಾರ’ ತೆರೆಗೆ ಬರಲಿದೆ.

Kantara movie actor director Rishab shetty to be honoured with Siddashree Award in Kalburgi.