ಬ್ರೇಕಿಂಗ್ ನ್ಯೂಸ್
28-11-22 11:04 pm HK News Desk ಕರ್ನಾಟಕ
ಕಾರವಾರ, ನ.28 : ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್ ಕುಮಾರ್ ತಮ್ಮ ಸ್ಥಾನಮಾನಕ್ಕಾಗಿ ಇಡೀ ಸಮುದಾಯವನ್ನು ಬಲಿ ಕೊಟ್ಟಿದ್ದಾರೆ. ಈಡಿಗ, ಬಿಲ್ಲವ ಸಮಾಜಕ್ಕೆ ರಿಸರ್ವೇಶನ್ ಒದಗಿಸಲು ಧ್ವನಿ ಎತ್ತುವಲ್ಲಿ ಸಮುದಾಯದ ಸಚಿವರು ಹಾಗೂ ಇತರ ಶಾಸಕರು ವಿಫಲರಾಗಿದ್ದಾರೆ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಲ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.
ಶಿರಸಿ ತಾಲೂಕಿನ ಸಿದ್ಧಾಪುರದಲ್ಲಿ ಮಾತನಾಡಿದ ಸ್ವಾಮೀಜಿ, ಬಿಜೆಪಿ ಸರಕಾರದ ಯಾವ ಕೊಡುಗೆ ಕೂಡ ಈಡಿಗ, ಬಿಲ್ಲವ ಸಮುದಾಯದ ಮೇಲಿಲ್ಲ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹಲವೆಡೆ ನಾರಾಯಣ ಗುರು ವಸತಿ ಶಾಲೆ ಪ್ರಾರಂಭಿಸಿದ್ದೇವೆ ಅಂತಾರೆ. ಆದರೆ, ಈ ವಸತಿ ಶಾಲೆಗಳಲ್ಲಿ ಈಡಿಗ ಸಮುದಾಯ ಮಕ್ಕಳಿಗೂ ಶಿಕ್ಷಣಕ್ಕೆ ರಿಸರ್ವೇಶನ್ ಇಲ್ಲ. ರಾಜ್ಯದಲ್ಲಿರುವ ಈಡಿಗ, ಬಿಲ್ಲವ ಸಮುದಾಯದ ಶಾಸಕರಿಂದ ಯಾವುದೇ ನ್ಯಾಯ ಸಿಗುತ್ತದೆಂಬ ನಂಬಿಕೆಯಿಲ್ಲ. ಈ ಸಮುದಾಯದ ಯುವಕರು, ಮಹಿಳೆಯರು ಬೀದಿಗೆ ಬರುತ್ತಿದ್ದಾರೆ.

ಸಮುದಾಯದ ರಾಜಕಾರಣಿಗಳಿಂದಲೇ ನಮಗೆ ಅನ್ಯಾಯವಾಗಿದೆ. ನಾರಾಯಣ ಗುರು ನಿಗಮವನ್ನು ಘೋಷಣೆ ಮಾಡುವುದರಲ್ಲಿ ಸಮುದಾಯದ ಶಾಸಕರ ನಿಲುವೇನು ? ಅವರ ಸ್ವಾರ್ಥ ರಾಜಕಾರಣಕ್ಕಾಗಿ ಸಮುದಾಯವನ್ನು ಬಳಸುತ್ತಿದ್ದಾರೆ. ಗೌಡ ಸಮುದಾಯದ ರಾಜಕಾರಣಿಗಳು ಸರಕಾರಕ್ಕೆ ಸೌಲಭ್ಯಕ್ಕಾಗಿ ಒತ್ತಾಯಿಸಿದ್ದಾರೆ. ಆದರೆ, ಈಡಿಗ, ಬಿಲ್ಲವ ಸಮುದಾಯದ ನಾಯಕರಿಗೆ ನಾಚಿಗೆಯಾಗಬೇಕು. ಸುನಿಲ್ ಕುಮಾರ್ ಅವರಂತೂ ಒಮ್ಮೆಯೂ ವಿಧಾನಸಭೆಯಲ್ಲಿ ಸಮುದಾಯದ ಪರ ಧ್ವನಿ ಎತ್ತಿಲ್ಲ. 2023ರಲ್ಲಿ ನಡೆಯುವ ಚುನಾವಣೆ ವೇಳೆ ಸಮುದಾಯದ ಮತ ನಿಮಗೆ ಬೇಡವೆಂದಲ್ಲಿ ಹೇಳಿಬಿಡಿ.

ಇದೇ ಕಾರಣಗಳಿಂದ ಮುಂದಿನ ಜ.6ರಂದು ಮಂಗಳೂರು- ಬೆಂಗಳೂರು ಪಾದಯಾತ್ರೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಡಿಗ, ಬಿಲ್ಲವ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ನಮ್ಮ ಒತ್ತಾಯವಿದೆ. ಮೀಸಲಾತಿ, ಕುಲಕಸುಬು, ನಿಗಮ ನೀಡುವಲ್ಲಿ ಸಮುದಾಯಕ್ಕೆ ವಂಚನೆಯಾಗಿದೆ. ರಾಜ್ಯ ಸರಕಾರ ಹಿಂದುಳಿದ ವರ್ಗದಲ್ಲಿರುವ ಈಡಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆ ವೇಳೆ ಪರಿಣಾಮ ಎದುರಿಸಬೇಕಾದೀತು ಎಂದು ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ.
Ministers Kota Srinivasa Poojary and Sunil Kumar have sacrificed the community to save their status. Shri Pranavananda Swamiji, President of Arya Eediga Rashtriya Mahamandal, said that community ministers and other MLAs have failed to raise their voices to provide reservation to Eediga and Billava Samaj. Shri Pranavananda Swamiji, who spoke in Siddhapura of Uttara Kannada district, said that none of the contribution of the BJP government is on the Idiga and Billava communities.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm