ವಿದ್ಯಾರ್ಥಿಗೆ ಟೆರರಿಸ್ಟ್ ಪದ ಬಳಕೆ ; ಅದೇನು ಸೀರಿಯಸ್ ಇಶ್ಯು ಅಲ್ಲ, ಶಕುನಿ, ರಾವಣ ಅಂದ್ಹಾಗೆ ಕಸಬ್- ಶಿಕ್ಷಣ ಸಚಿವ ನಾಗೇಶ್

29-11-22 09:02 pm       Bangalore Correspondent   ಕರ್ನಾಟಕ

​​​​ಎಂಐಟಿ ಕಾಲೇಜಿನಲ್ಲಿ ಪ್ರಾಧ್ಯಾಪಕ ವ್ಯಕ್ತಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ನಿಂದಿಸಿದ ಘಟನೆ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹಗುರವಾಗಿ ಪ್ರತಿಕ್ರಿಯಿಸಿದ್ದಾರೆ. ಟೆರರಿಸ್ಟ್ ಅನ್ನುವ ಪದದ ಬಗ್ಗೆ ಯಾಕೆ ದೊಡ್ಡ ಇಶ್ಯು ಮಾಡಬೇಕು.

ಬೆಂಗಳೂರು, ನ.29: ಎಂಐಟಿ ಕಾಲೇಜಿನಲ್ಲಿ ಪ್ರಾಧ್ಯಾಪಕ ವ್ಯಕ್ತಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ನಿಂದಿಸಿದ ಘಟನೆ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹಗುರವಾಗಿ ಪ್ರತಿಕ್ರಿಯಿಸಿದ್ದಾರೆ. ಟೆರರಿಸ್ಟ್ ಅನ್ನುವ ಪದದ ಬಗ್ಗೆ ಯಾಕೆ ದೊಡ್ಡ ಇಶ್ಯು ಮಾಡಬೇಕು. ಅದನ್ನು ಒಂದು ಸಮುದಾಯ ಯಾಕೆ ಹಾಗೆ ನೋಡುತ್ತಿದೆ ಅನ್ನುವುದು ಅರ್ಥವಾಗುತ್ತಿಲ್ಲ. ನನಗೇನು ಅದೊಂದು ದೊಡ್ಡ ಸೀರಿಯಸ್ ಇಶ್ಯು ಅಂತ ಅನಿಸಲ್ಲ ಎಂದು ಹೇಳಿದ್ದಾರೆ.

ಅದೊಂದು ದುರದೃಷ್ಟಕರ ಘಟನೆ, ಶಾಲಾ ತರಗತಿಯಲ್ಲಿ ಶಿಕ್ಷಕರು ಹಾಗೆ ಹೇಳಬಾರದಿತ್ತು. ಆದರೆ ನನಗನಿಸುತ್ತೆ ಅದೇನು ಸೀರಿಯಸ್ ವಿಚಾರ ಅಲ್ಲ ಅಂತ. ನಾವು ಶಾಲೆಯಲ್ಲಿ ಕೆಲವರನ್ನು ಶಕುನಿ, ರಾವಣ ಅಂತ ಕರೆಯುತ್ತೇವೆ. ಈಗ ಕಸಬ್ ಎಂದು ಕರೆದಾಗ ಯಾಕೆ ಒಂದು ಸಮುದಾಯದವರಿಗೆ ನೋವು ಆಗಬೇಕು. ಕಸಬ್ ಅನ್ನುವುದು ಒಂದು ಸಮುದಾಯಕ್ಕೆ ಸೀಮಿತ ಆಗಬಾರದು. ಅದೊಂದು ಮನಸ್ಥಿತಿ. ಹಾಗಿದ್ದರೂ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಜರುಗಿಸಿದೆ. ಕೆಲವು ಸಂಗತಿಗಳು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತವೆ ಯಾಕೆ ಅನ್ನೋದು ಅರ್ಥವಾಗಲ್ಲ ಎಂದಿದ್ದಾರೆ.

ನಾವು ಕೆಲವು ಸಚಿವರನ್ನು ಶಕುನಿ, ರಾವಣ ಅಂತ ಕರೆಯುತ್ತೇವೆ. ಅದು ಯಾಕೆ ದೊಡ್ಡ ವಿಷಯ ಆಗಲ್ಲ. ಅದನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತೇವೆ. ಇಲ್ಲಿ ರಾವಣ ಅನ್ನುವುದು ಪಾಸಿಟಿವ್ ಆಗಿ ಬಳಕೆಯಾಗುತ್ತಿಲ್ಲ. ಹಾಗಿದ್ದರೂ, ಅದನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಲ್ಲ. ಶಿಕ್ಷಕರು ಈ ರೀತಿ ಮಾಡಬಾರದಿತ್ತು. ಇದರಿಂದ ಯುವ ಮನಸ್ಸುಳ್ಳ ವಿದ್ಯಾರ್ಥಿಗಳಿಗೆ ಹರ್ಟ್ ಆಗುತ್ತದೆ ಎಂದು ಹೇಳಿದ್ದಾರೆ.

Karnataka’s education minister attempted to downplay the massive controversy over a teacher calling a Muslim student a 'terrorist' during class. “It is a small issue but is being blown out of proportion,” Minister BC Nagesh said, as he blamed a “particular community” for creating a disproportionate storm over the incident. “It is unfortunate that the incident took place. The teacher should not have used that name. But I also feel that it is not a serious thing because, several times, we call students 'Ravana' and Shakuni.