ಬ್ರೇಕಿಂಗ್ ನ್ಯೂಸ್
29-11-22 10:33 pm Bangalore Correspondent ಕರ್ನಾಟಕ
ಬೆಂಗಳೂರು, ನ.29: ಭೂಗತ ಪಾತಕಿ, ರೌಡಿ ಸೈಲಂಟ್ ಸುನೀಲ ರಾಜಕೀಯ ಪ್ರವೇಶಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರೇ ವೇದಿಕೆ ಮಾಡಿಕೊಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣವಾಗಿದ್ದು ಆರೆಸ್ಸೆಸ್ ಅಂಗಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮ ಮತ್ತು ಅದರಲ್ಲಿ ಬಿಜೆಪಿ ಸಂಸದರು ಪಾಲ್ಗೊಂಡು ರೌಡಿ ಸೈಲಂಟ್ ಸುನೀಲನ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದು. ಈ ಬಗ್ಗೆ ಮುಜುಗರದ ಪ್ರಶ್ನೆ ಬರುತ್ತಲೇ ಪಕ್ಷದ ಒಳಗಡೆಯಿಂದ ಮೇಲ್ನೋಟಕ್ಕೆ ವಿರೋಧ ಕೇಳಿಬಂದಿದ್ದರೂ, ಇದನ್ನು ಅಧಿಕೃತವಾಗಿ ವ್ಯವಸ್ಥೆ ಮಾಡಿದ್ದು ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿಯೇ ಅನ್ನುವ ಮಾಹಿತಿ ಬಲ್ಲಮೂಲಗಳಿಂದ ತಿಳಿದುಬಂದಿದೆ.
ಸೈಲಂಟ್ ಸುನೀಲ ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ, ಅಲ್ಲಿ ಝಂಡಾ ಊರಿರುವ ಜಮೀರ್ ಅಹ್ಮದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಅನ್ನುವ ಸುಳಿವು ಬೆನ್ನತ್ತಿದ ಬಿಜೆಪಿ ನಾಯಕರು, ಜಮೀರನ ವಿರುದ್ಧ ಕಾದಾಡಲು ಮಿಕ ಸಿಕ್ತು ಅನ್ನುವ ಹಪಹಪಿಯಿಂದ ಸುನೀಲನ ಆಸೆಗೆ ಸಾಥ್ ಕೊಡುವುದಕ್ಕೆ ಮುಂದಾಗಿದ್ದಾರೆ. ಮೊದಲಾಗಿ ಇದಕ್ಕೆ ವೇದಿಕೆ ರೆಡಿ ಮಾಡಿಕೊಂಡಿದ್ದು ಆರೆಸ್ಸೆಸ್ ಅಂಗಸಂಸ್ಥೆ ರಾಷ್ಟ್ರೋತ್ಥಾನ ಹೆಸರಿನಲ್ಲಿ. ರಾಷ್ಟ್ರೋತ್ಥಾನ ಸಂಸ್ಥೆಯ ರಕ್ತನಿಧಿಗೆಂದು ರೌಡಿ ಸುನೀಲನ ಪರವಾಗಿದ್ದ ಖಾಸಗಿ ಸಂಘಟನೆಯ ಸಹಭಾಗಿತ್ವ ಪಡೆದು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದಕ್ಕೆ ಬಿಜೆಪಿಯ ಬೆಂಗಳೂರು ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಗರುಡಾಚಾರ್, ಹಿರಿಯ ಮುಖಂಡ ಎನ್.ಆರ್ ರಮೇಶ್ ಅವರನ್ನು ಆಹ್ವಾನ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸುನೀಲ ಬಿಜೆಪಿ ನಾಯಕರಿಗೆ ಸನ್ಮಾನ ಮಾಡಿದ್ದಲ್ಲದೆ, ಅವರಿಂದಲೇ ಭಾವಿ ಬಿಜೆಪಿ ಅಭ್ಯರ್ಥಿ ಅನ್ನುವ ರೀತಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದ. ಇಂಥ ಕಾರ್ಯಕ್ರಮ ಏರ್ಪಡಿಸಿದ್ದು ಬೆಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ದಶರಥ ವೈಲಾಯ ಎನ್ನುವ ವಿಚಾರ ಈಗ ಪಕ್ಷದ ಒಳಗಡೆಯೇ ಅಸಹನೆಯ ಕಿಡಿ ಹೊತ್ತಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ದಶರಥ ವೈಲಾಯ ಈ ಒಟ್ಟು ಕಾರ್ಯಕ್ರಮದ ಹಿಂದಿರೋದು ಮತ್ತು ಸೈಲಂಟ್ ಸುನೀಲನ ಪರವಾಗಿ ನಿಂತಿರೋದು ಅನ್ನುವ ವಿಚಾರವೇ ಚರ್ಚೆಗೆ ಕಾರಣವಾಗಿರುವುದು. ಯಾಕಂದ್ರೆ, ಇದೇನು ಅಪ್ಪಿತಪ್ಪಿ ಆಗಿದ್ದಲ್ಲ, ಪಕ್ಷದ ನಾಯಕರೇ ಸೇರಿಕೊಂಡು ಮಾಡಿದ್ದು ಎನ್ನುವಂತೆ ಬಿಂಬಿತವಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಪ್ತನಾಗಿರುವ ದಶರಥ ವೈಲಾಯ, ರೌಡಿ ಸೈಲಂಟ್ ಸುನೀಲನಿಗೆ ಸೈಲಂಟ್ ಆಗಿಯೇ ವೇದಿಕೆ ನಿರ್ಮಿಸಲು ಮುಂದಾಗಿದ್ದರಲ್ಲಿ ಅಚ್ಚರಿ ಇಲ್ಲ. ಯಾಕಂದ್ರೆ, ಈ ವ್ಯಕ್ತಿ ಮೇಲಿನವರ ಕೃಪೆ ಇಲ್ಲದೆ ಈ ರೀತಿಯ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಅನ್ನುವ ಮಾತು ಕೇಳಿಬರುತ್ತಿದೆ. ಆದರೆ ಯಾವಾಗ ರೌಡಿಯ ಜೊತೆಗೆ ಸಂಸದರು, ಶಾಸಕರು ಭಾಗಿಯಾದರೋ, ಇದು ಮಾಧ್ಯಮದಲ್ಲಿ ಟೀಕೆಗೆ ಆಹಾರವಾಯಿತೋ ಆವಾಗಲೇ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದೂರು ಹೋಗಿತ್ತು. ರೌಡಿಯ ಜೊತೆಗೆ ಸಾಥ್ ಕೊಟ್ಟಿದ್ದಲ್ಲದೆ, ಬಿಜೆಪಿಯ ಮುಂದಿನ ಅಭ್ಯರ್ಥಿ ಎನ್ನುವಂತೆ ಬಿಂಬಿಸಿದ್ದರ ಬಗ್ಗೆ ಇನ್ನೊಂದು ಬಣ ಸೈಲಂಟ್ ಆಗಿಯೇ ಗರಂ ಆಗಿತ್ತು.
ರೌಡಿ ಸೈಲಂಟ್ ಸುನೀಲನ ವಿರುದ್ಧ ಈಗಲೂ ಹತ್ತಾರು ಕೇಸುಗಳಿವೆ. ಹಫ್ತಾ ವಸೂಲಿ ಮಾಡುತ್ತಿರುವ ಆರೋಪಗಳಿವೆ. ಜೊತೆಗೆ, ಬಿಜೆಪಿ ನಾಯಕರ ಜೊತೆ ಸೇರಿ ಕಸ ವಿಲೇವಾರಿಯ ಗುತ್ತಿಗೆ ಪಡೆದಿರುವ ಬಗ್ಗೆಯೂ ಮಾಹಿತಿಗಳಿವೆ. ಇದಕ್ಕಾಗಿ 35 ಪರ್ಸೆಂಟ್ ಗಿಂಬಳ ನೀಡಿದ್ದಾನೆಂಬ ಮಾಹಿತಿಯೂ ಹರಿದಾಡುತ್ತಿದೆ. ಅಂಥ ವ್ಯಕ್ತಿಯನ್ನು ಪಕ್ಷಕ್ಕೆ ಕರೆಸಿಕೊಳ್ಳಲು ಆರೆಸ್ಸೆಸ್ ಹಿನ್ನೆಲೆಯ ದಶರಥ ವೈಲಾಯ ಮುಂದಾಗಿದ್ದಾರೆ. ಬಿಜೆಪಿ ಸಂಘಟನೆ ಮತ್ತು ಮುಂದಿನ ಚುನಾವಣೆಗೆ ಪಕ್ಷವನ್ನು ತಯಾರಿಗೊಳಿಸುವ ಗುರುತರ ಹೊಣೆಗಾರಿಕೆ ಇರುವ ಇವರೇ ರೌಡಿಯೊಬ್ಬನಿಗೆ ಕೇಸರಿ ಶಾಲು ತೊಡಿಸಿ, ಪಕ್ಷದ ಮುಖಂಡರಲ್ಲಿ ಜೈಕಾರ ಮಾಡಿಸಿದ್ದು ಹಲವರ ಕಣ್ಣು ಕೆಂಪಗಾಗಿಸಿದೆ.
ಈ ಹಿಂದೆ ಎಬಿವಿಪಿ ಪೂರ್ಣಕಾಲಿಕ ಕಾರ್ಯಕರ್ತನಾಗಿದ್ದ ದಶರಥ ಅನ್ನುವ ವ್ಯಕ್ತಿ ಬಿಜೆಪಿ ಹಾಲಿ ರಾಜ್ಯಾಧ್ಯಕ್ಷರ ಜೊತೆಗೆ ವಿಭಾಗ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ಹೊಂದಿದ್ದರು. ಇದೀಗ ಸೈಲಂಟ್ ಸುನೀಲನ ಪರವಾಗಿ ಬ್ಯಾಟಿಂಗ್ ಮಾಡಲು ಹೋಗಿ ಕೈಸುಟ್ಟುಕೊಂಡಿದ್ದಾರೆ ಅನ್ನುವ ಮಾತು ಕೇಳಿಬಂದಿದೆ. ಆದರೆ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತ್ರ ತಮಗೇನೂ ತಿಳಿಯದಂತೆ ವರ್ತಿಸಿದ್ದಾರೆ. ರೌಡಿ ಶೀಟರ್ ವ್ಯಕ್ತಿಗಳಿಗೆ ಪಕ್ಷದಲ್ಲಿ ಸ್ಥಾನ ನೀಡಲ್ಲ. ಅಲ್ಲದೆ, ಆತನ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಪಕ್ಷದ ಮುಖಂಡರಿಂದ ವಿವರಣೆ ಕೇಳಲಾಗುವುದು ಎಂದು ನಳಿನ್ ತಿಳಿಸಿದ್ದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿವೆ. ಇದೇ ವೇಳೆ, ಮತ್ತೊಬ್ಬ ರೌಡಿಶೀಟರ್ ಆಗಿರುವ ಫೈಟರ್ ರವಿ ಪಕ್ಷ ಸೇರ್ಪಡೆ ಆಗಿರುವ ಬಗ್ಗೆ ಪಕ್ಷದ ನಾಯಕರು ಮೌನ ವಹಿಸಿದ್ದಾರೆ. ಆದರೆ ಬಿಜೆಪಿ ನಾಯಕರ ಈ ರೀತಿಯ ನಡೆ ಮಾತ್ರ ವಿಪಕ್ಷ ನಾಯಕರಿಗೆ ಮತ್ತು ಚುನಾವಣೆ ಕಾಲದಲ್ಲಿ ಸಾರ್ವಜನಿಕ ವಲಯದಲ್ಲಿ ಪಕ್ಷದ ಬಗ್ಗೆ ಅಸಹನೆ ಮೂಡಲು ಕಾರಣವಾಗಿದ್ದು ಸತ್ಯ.
A controversy has erupted in Karnataka after an absconding rowdy, Sunil Kumar, alias Silent Sunil, was seen sharing a stage with senior leaders of the Bharatiya Janata Party (BJP). He was seen on stage with the MP during a blood donation camp.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am